ಷೇರು ಮಾರುಕಟ್ಟೆ ಹೂಡಿಕೆ ಆಮಿಷ, ವಂಚನೆ: 4 ತಿಂಗಳಲ್ಲಿ 197 ಕೋಟಿ ರು. ಹಣ ಕಳೆದುಕೊಂಡ ಬೆಂಗಳೂರಿಗರು!

ಕೇವಲ ನಾಲ್ಕು ತಿಂಗಳಲ್ಲಿ, ಬೆಂಗಳೂರಿಗರು ಮೋಸದ ಹೂಡಿಕೆ ಯೋಜನೆಗಳಿಂದ 197 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ. ಒಟ್ಟು 735 ಪ್ರಕರಣಗಳು ದಾಖಲಾಗಿದ್ದು, ಶೇ.10ರಷ್ಟು ಬ್ಯಾಂಕ್ ಖಾತೆಗಳನ್ನು ಮಾತ್ರ ಸ್ಥಗಿತಗೊಳಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಐಟಿ ಸಿಟಿ ಎಂದೇ ಹೆಸರಾದ ರಾಜ್ಯ ರಾಜಧಾನಿ ಬೆಂಗಳೂರು ಮಹಾ ನಗರ ಇದೀಗ ಸೈಬರ್ ಕ್ರೈಂ ಬಲಿಪಶುಗಳ ಸಿಟಿ ಎಂದೂ ಕುಖ್ಯಾತವಾಗುತ್ತಿದೆ. ಏಕೆಂದರೆ, ಬಹುಪಾಲು ಆನ್‌ಲೈನ್‌ನಲ್ಲೇ ಹಣಕಾಸಿನ ವಹಿವಾಟು ನಡೆಸುವ ಬೆಂಗಳೂರು ಮಂದಿ, ಸೈಬರ್ ಕ್ರಿಮಿನಲ್‌ಗಳ ಕುತಂತ್ರಕ್ಕೂ ಬಲಿಯಾಗುತ್ತಿದ್ಧಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣಗಳ ಸಂಖ್ಯೆಯು ಹೆಚ್ಚುತ್ತಿದೆ, ಸೈಬರ್ ಕ್ರೈಂ ಪೊಲೀಸರು ಈಗ ಅಂತಹ ಪ್ರಕರಣಗಳ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿದ್ದಾರೆ.

ಕೇವಲ ನಾಲ್ಕು ತಿಂಗಳಲ್ಲಿ, ಬೆಂಗಳೂರಿಗರು ಮೋಸದ ಹೂಡಿಕೆ ಯೋಜನೆಗಳಿಂದ 197 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ. ಒಟ್ಟು 735 ಪ್ರಕರಣಗಳು ದಾಖಲಾಗಿದ್ದು, ಶೇ.10ರಷ್ಟು ಬ್ಯಾಂಕ್ ಖಾತೆಗಳನ್ನು ಮಾತ್ರ ಸ್ಥಗಿತಗೊಳಿಸಲಾಗಿದೆ. ಆದರೆ ಇದುವರೆಗೂ ಒಂದು ರೂಪಾಯಿ ಕೂಡ ವಸೂಲಿಯಾಗಿಲ್ಲ. ಫೆಬ್ರವರಿಯೊಂದರಲ್ಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರತಿದಿನ ಸರಾಸರಿ ಎಂಟು ಪ್ರಕರಣಗಳು ದಾಖಲಾಗಿವೆ. ದಾಖಲಾದ 237 ಪ್ರಕರಣಗಳಲ್ಲಿ ಜನರು 88 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೆಕ್ಯುರಿಟೀಸ್ ಮಾರ್ಕೆಟ್ಸ್ (NISM) ಅವುಗಳನ್ನು ಪೊಂಜಿ ಅಥವಾ ಗೆಟ್-ರಿಚ್-ಕ್ವಿಕ್ ಸ್ಕೀಮ್‌ಗಳು ಎಂದು ಪಟ್ಟಿ ಮಾಡಿದೆ

ಸಾಂದರ್ಭಿಕ ಚಿತ್ರ
ಸೈಬರ್ ವಂಚನೆ: 15.98 ಲಕ್ಷ ರೂ. ಕಳೆದುಕೊಂಡ ಹಾಸನ ಡಿವೈಎಸ್ಪಿ!

ಹಣದ ದುರಾಸೆಯಿಂದ ಮಾರುಕಟ್ಟೆ, ವ್ಯವಸ್ಥೆ ತಿಳಿದವರೂ ನಷ್ಟ ಅನುವಿಸುತ್ತಿದ್ದಾರೆ. ಬಹುಪಾಲು ಬಲಿಪಶುಗಳು 30 ವರ್ಷಕ್ಕಿಂತ ಮೇಲ್ಪಟ್ಟವರು. ಈ ವಂಚನೆ ಯೋಜನೆಗಳಲ್ಲಿ ವಿವಿಧ ರೀತಿಯ ವಿಧಾನಗಳಿವೆ. ಬಹುತೇಕ ಎಲ್ಲಾ ಸಂದರ್ಭಗಳಲ್ಲಿ ಬೇರೆ ಬೇರೆ ಖಾತೆಗಳನ್ನು ಬಳಸುವುದರಿಂದ, ಅವುಗಳನ್ನು ಟ್ರ್ಯಾಕ್ ಮಾಡುವುದು ಕಷ್ಟ. ಖಾತೆದಾರರನ್ನು ಪತ್ತೆ ಹಚ್ಚಿದರೂ, ಅಂತಹ ವಹಿವಾಟಿನ ಬಗ್ಗೆ ಅರಿವಿಲ್ಲ, ತಾವು ಮುಗ್ಧರು ಎಂದು ಅವರು ಹೇಳುತ್ತಾರೆ. ಇಂತಹ ಖಾತೆಗಳ ಬಳಕೆಯನ್ನು ತಡೆಯಲು ಪೊಲೀಸರು ಇದೀಗ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ ಎಂದು ಹೆಚ್ಚುವರಿ ಜಂಟಿ ಪೊಲೀಸ್ ಕಮಿಷನರ್ (ಅಪರಾಧ) ಚಂದ್ರಗುಪ್ತ ತಿಳಿಸಿದ್ದಾರೆ.

ಕೆಲವು ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನೇರವಾಗಿ ವಂಚಕರ ಖಾತೆಗೆ ಹಣ ಕಳುಹಿಸುವಂತೆ ಆಮಿಷ ಒಡ್ಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅನೇಕ ಇತರ ಸಂದರ್ಭಗಳಲ್ಲಿ, ಬಲಿಪಶುಗಳು ಅಪ್ಲಿಕೇಶನ್‌ಗಳ ಲಿಂಕ್ ಸ್ವೀಕರಿಸುತ್ತಾರೆ, ಅವುಗಳು ಪ್ರಸಿದ್ಧ ಸ್ಟಾಕ್ ಟ್ರೇಡಿಂಗ್ ಅಪ್ಲಿಕೇಶನ್‌ಗಳ ಸಿಮ್ಯುಲೇಶನ್ (ನಕಲಿ) ಅಪ್ಲಿಕೇಶನ್‌ಗಳಾಗಿವೆ. ವಂಚಕರು ಅಭಿವೃದ್ಧಿಪಡಿಸಿದ ಈ ನಕಲಿ ಅಪ್ಲಿಕೇಶನ್‌ಗಳು ನೀವು ಲಾಭ ಗಳಿಸುತ್ತಿರುವಿರಿ ಎಂಬುದನ್ನು ತೋರಿಸುತ್ತವೆ. ಬಲಿಪಶುಗಳು ಹೆಚ್ಚಿನ ಹಣವನ್ನು ಹೂಡಿಕೆ ಮಾಡಲು ಮುಂದಾಗುತ್ತಾರೆ. ಸಂತ್ರಸ್ತರು ತಮ್ಮ ಹಣವನ್ನು ಹೂಡಿಕೆ ಮಾಡುತ್ತಲೇ ಇರುತ್ತಾರೆ. ಅವರು ತಮ್ಮ ಹಣವನ್ನು ಹಿಂತೆಗೆದುಕೊಳ್ಳಲು ಬಯಸಿದಾಗ ಮಾತ್ರ, ಅವರಿಗೆ ನೈಜತೆಯ ಅರಿವಾಗುತ್ತದೆ. ಹೆಚ್ಚಿನ ಪ್ರಕರಣಗಳು ಒಂದು ವಾರ ಅಥವಾ ಒಂದು ತಿಂಗಳ ಅವಧಿಯಲ್ಲಿ ಸಂಭವಿಸುತ್ತವೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಆನ್‌ಲೈನ್‌ನಲ್ಲಿ ಕಳುಹಿಸಲಾದ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವ ಬದಲು ನಿಜವಾದ ಅಪ್ಲಿಕೇಶನ್‌ಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಅವರು ಜನರಿಗೆ ಸಲಹೆ ನೀಡಿದ್ದಾರೆ. ಹೂಡಿಕೆಯನ್ನು ದ್ವಿಗುಣಗೊಳಿಸಲು ಮುಂದಾಗುವ ಅಪರಿಚಿತ ವ್ಯಕ್ತಿಗಳಿಗೆ ಅವರು ಹಣವನ್ನು ಕಳುಹಿಸಬಾರದು. ವಂಚನೆಯಾದ 24 ಗಂಟೆಗಳ ಒಳಗೆ ಸಂತ್ರಸ್ತರು ಸೈಬರ್ ಪೋರ್ಟಲ್‌ನ 1930 ಅನ್ನು ಸಂಪರ್ಕಿಸಬೇಕು ಎಂದು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
ಸೈಬರ್ ವಂಚನೆ: 5.17 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಉದ್ಯಮಿ

ಹಣವು ಪಡೆದುಕೊಂಡವರ ಖಾತೆಯಲ್ಲಿದ್ದರೆ ಅದನ್ನು ಅಂತಹ ಖಾತೆಯನ್ನು ಫ್ರೀಜ್ ಮಾಡಬಹುದು ಎಂದು ಅವರು ಹೇಳಿದರು. ಅಂತಹ ಒಂದು ಮೋಸದ ಯೋಜನೆಯಿಂದ 45 ವರ್ಷದ ಉದ್ಯಮಿ ನಿಶಾಂತ್ (ಹೆಸರು ಬದಲಾಯಿಸಲಾಗಿದೆ) 2 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ದೊಡ್ಡ ಲಾಭವನ್ನು ನೀಡುವ ಮೂಲಕ ಈ ಯೋಜನೆಗೆ ಆಮಿಷ ಒಡ್ಡಿದ್ದರು ಎಂದು ನಿಶಾಂತ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಹೂಡಿಕೆ ಮಾಡುವ ಕುರಿತಾಗಿ ವಾಟ್ಸಪ್‌ನಲ್ಲಿ ಸಂದೇಶ ಬರುತ್ತದೆ. ಒಂದು ಪ್ರತಿಷ್ಠಿತ ಸಂಸ್ಥೆ ತನ್ನ ಹೂಡಿಕೆದಾರರಿಗೆ ಒಂದು ಅವಕಾಶ ಕೊಡುತ್ತಿದೆ. ಜೊತೆಗೆ ಉದ್ಯಮ ವೆಬ್‌ಸೈಟ್ ಕೂಡಾ ಇದೆ. ಈ ಸಂಸ್ಥೆ ಅತ್ಯಂತ ಹೆಚ್ಚು ಲಾಭಾಂಶ ನೀಡಲಿದೆ ಎಂದೂ ವಾಟ್ಸಪ್ ಸಂದೇಶದಲ್ಲಿ ವಿವರಿಸಲಾಗಿತ್ತು. ವಾಟ್ಸಪ್‌ನಲ್ಲಿ ಸಂಪರ್ಕ ಮಾಡಿದ ವಂಚಕರು ನಂತರ ಟೆಲಿಗ್ರಾಂ ಆಪ್‌ನಲ್ಲಿ ಒಂದು ಗ್ರೂಪ್‌ ರಚಿಸಿ ಅದಕ್ಕೆ ಸೇರ್ಪಡೆ ಮಾಡಿದ್ದರು. ವಿಭಿನ್ನ ಮೊಬೈಲ್ ನಂಬರ್‌ಗಳಿಂದ ಕರೆ ಮಾಡಿದ್ದರು. ಎಲ್ಲರೂ ತಮ್ಮ ತಮ್ಮ ಹೆಸರು ಹಾಗೂ ಬೇರೆ ಬೇರೆ ಹುದ್ದೆಗಳನ್ನು ಹೇಳಿಕೊಂಡು ಕರೆ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com