Bengaluru rave party: ''ಬರ್ತ್ ಡೇ ಪಾರ್ಟಿ ಎಂದು ಹೋಗಿದ್ದೆ'' ಎಂದ Actress Ashi Roy; ''ಏನ್ ಮಾಡ್ತೀರೋ ಮಾಡ್ಕೋಳಿ'' ಎಂದ ನಟಿ ಹೇಮಾ!

ಬೆಂಗಳೂರು ರೇವ್ ಪಾರ್ಟಿ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಮತ್ತೊಬ್ಬ ತೆಲುಗು ನಟಿ ತಾವು ಪಾರ್ಟಿಗೆ ತೆರಳಿದ್ದು ನಿಜ.. ಆದರೆ ಅದು ಡ್ರಗ್ಸ್ ಪಾರ್ಟಿ ಎಂದು ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
Bengaluru rave party
ನಟಿ ಆಶಿ ರಾಯ್ ಮತ್ತು ನಟಿ ಹೇಮಾ
Updated on

ಬೆಂಗಳೂರು: ಬೆಂಗಳೂರು ರೇವ್ ಪಾರ್ಟಿ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಮತ್ತೊಬ್ಬ ತೆಲುಗು ನಟಿ ತಾವು ಪಾರ್ಟಿಗೆ ತೆರಳಿದ್ದು ನಿಜ.. ಆದರೆ ಅದು ಡ್ರಗ್ಸ್ ಪಾರ್ಟಿ ಎಂದು ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.

ಹೌದು.. ರೇವ್‌ ಪಾರ್ಟಿಯಲ್ಲಿ ಮತ್ತೊಬ್ಬ ತೆಲುಗು ನಟಿ ಆಶಿರಾಯ್‌ ಅವರು ಭಾಗಿಯಾಗಿದ್ದರು. ದಾಳಿ ನಡೆಸುತ್ತಿದ್ದಂತೆಯೇ ಅವರು ಪರಾರಿಯಾಗಿದ್ದರು ಎಂದು ಹೇಳಲಾಗಿತ್ತು. ಇದೀಗ ಸ್ವತಃ ನಟಿ ಆಶಿರಾಯ್ ವಿಡಿಯೋ ಮೂಲಕ ತಾವು ಪಾರ್ಟಿಗೆ ತೆರಳಿದ್ದು ನಿಜ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ನಟಿ ಆಶಿರಾಯ್, ‘ಬರ್ತ್‌ ಡೇ ಪಾರ್ಟಿಗೆಂದು ನನ್ನನ್ನು ಕರೆಯಲಾಗಿತ್ತು. ಆಹ್ವಾನಿಸಿದವರನ್ನು ನಾನು ಅಣ್ಣ ಎಂದು ಕರೆಯುತ್ತಿದ್ದೆ. ಪಾರ್ಟಿಯಲ್ಲಿ ಏನಿತ್ತು ನನಗೆ ತಿಳಿದಿಲ್ಲ. ಡ್ರಗ್ಸ್‌ ಪೂರೈಕೆ ಆಗಿರುವ ಮಾಹಿತಿ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

Bengaluru rave party
Bengaluru rave party: ತೆಲುಗು ನಟಿ ಸೇರಿದಂತೆ 86 ಮಂದಿ ಮಾದಕ ದ್ರವ್ಯ ಸೇವನೆ ದೃಢ, ರಕ್ತದ ಮಾದರಿ ಪರೀಕ್ಷೆ ಪಾಸಿಟಿವ್!

ಇದೇ ಪಾರ್ಟಿಯಲ್ಲಿ ಖ್ಯಾತ ತೆಲುಗು ನಟಿ ಹೇಮಾ ಅವರು ಕೂಡ ಈ ಪಾರ್ಟಿಯಲ್ಲಿ ಭಾಗಿ ಆಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಆಂಧ್ರದಿಂದ ಬಂದವರೇ ಹೆಚ್ಚು

ಮೇ 19ರಂದು ಸಂಜೆ 5 ಗಂಟೆ ಸುಮಾರಿಗೆ ಪಾರ್ಟಿ ಆರಂಭವಾಗಿತ್ತು. ‘ಸನ್‌ಸೆಟ್‌ ಟು ಸನ್‌ರೈಸ್ ಪಾರ್ಟಿ’ ಹೆಸರಿನಲ್ಲಿ ನಡೆದಿದ್ದ ಪಾರ್ಟಿಯಲ್ಲಿ 250ಕ್ಕೂ ಹೆಚ್ಚು ಮಂದಿ ಇದ್ದರು. ಆ ಪೈಕಿ 101 ಮಂದಿಯ ಮಾಹಿತಿ ಸಿಕ್ಕಿದ್ದು, ಪರಾರಿಯಾದವರನ್ನು ವಿಚಾರಣೆಗೆ ಕರೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

‘ಪ್ರತಿಯೊಬ್ಬ ಗ್ರಾಹಕನಿಂದ ದೊಡ್ಡ ಮೊತ್ತದ ಹಣ ಪಡೆಯಲಾಗಿದೆ. ಹೊರಗಿನವರು ಯಾರೇ ಪ್ರಶ್ನಿಸಿದರೂ ಬರ್ತಡೇ ಪಾರ್ಟಿಗೆ ಬಂದಿರುವುದಾಗಿ ಹೇಳುವಂತೆ ಪೆಡ್ಲರ್‌ಗಳು ಸೂಚಿಸಿದ್ದರು. ಪೊಲೀಸ್‌ ದಾಳಿ ವೇಳೆ ಅಲ್ಲಿದ್ದವರು ಈವೆಂಟ್ ಆರ್ಗನೈಸರ್ ವಾಸು ಎಂಬುವರ ಬರ್ತ್‌ ಡೇ ಗೆ ಬಂದಿರುವುದಾಗಿ ಹೇಳುತ್ತಿದ್ದರು. ಫಾರ್ಮ್‌ ಹೌಸ್‌ನಲ್ಲಿದ್ದ ಅಲಂಕಾರಿಕ ಗಿಡಗಳ ಬುಡದಲ್ಲಿ ಡ್ರಗ್ಸ್ ಬಚ್ಚಿಡಲಾಗಿತ್ತು. ಅದನ್ನು ಶ್ವಾನದಳ ಪತ್ತೆ ಹಚ್ಚಿದೆ’ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com