ಪ್ರಬುದ್ಧ ಸಾವು ಕೇಸ್‌ʼಗೆ ಟ್ವಿಸ್ಟ್: ಆತ್ಮಹತ್ಯೆ ಅಲ್ಲ, ಕೇವಲ 2000 ರೂಪಾಯಿಗೆ ನಡೆದಿತ್ತು ವಿದ್ಯಾರ್ಥಿನಿಯ ಕೊಲೆ!

ನಿಗೂಡತೆ ಹೊಂದಿದ್ದ ಸಾವು ಅದು. ಪೊಲೀಸರಿಗೇ ಹಾಗೂ ವೈದ್ಯರಿಗೇ ಗೊಂದಲ ಆಗುವಷ್ಟರ ಮಟ್ಟಿಗೆ ಈ ಕೃತ್ಯ ನಡೆದಿದೆ. ಆದರೆ, ಇದು ಉದ್ದೇಶಪೂರ್ವಕವಾಗಿ ನಡೆದ ಹತ್ಯೆ ಅಲ್ಲ. ಇದೊಂದು ಸಾಕ್ಷಿ ಇಲ್ಲದಿದ್ದರೆ ಎಂದೇ ಆತ್ಮಹತ್ಯೆ ಎಂದೇ ವರದಿಯಾಗಿರುತ್ತಿತ್ತು…
ಹತ್ಯೆಯಾದ ವಿದ್ಯಾರ್ಥಿನಿ.
ಹತ್ಯೆಯಾದ ವಿದ್ಯಾರ್ಥಿನಿ.
Updated on

ಬೆಂಗಳೂರು: ನಿಗೂಡತೆ ಹೊಂದಿದ್ದ ಸಾವು ಅದು. ಪೊಲೀಸರಿಗೇ ಹಾಗೂ ವೈದ್ಯರಿಗೇ ಗೊಂದಲ ಆಗುವಷ್ಟರ ಮಟ್ಟಿಗೆ ಈ ಕೃತ್ಯ ನಡೆದಿದೆ. ಆದರೆ, ಇದು ಉದ್ದೇಶಪೂರ್ವಕವಾಗಿ ನಡೆದ ಹತ್ಯೆ ಅಲ್ಲ. ಇದೊಂದು ಸಾಕ್ಷಿ ಇಲ್ಲದಿದ್ದರೆ ಎಂದೇ ಆತ್ಮಹತ್ಯೆ ಎಂದೇ ವರದಿಯಾಗಿರುತ್ತಿತ್ತು…

ಅಷ್ಟಕ್ಕೂ ನಡೆದ ಘಟನೆ ಎನು.. ಯಾವುದು ಆ ಸಾಕ್ಷಿ…? ಇಲ್ಲಿದೆ ಮಾಹಿತಿ...

ಸುಬ್ರಹ್ಮಣ್ಯಪುರ ಪ್ರಬುದ್ಧ ಸಾವು ಪ್ರಕರಣದ ನಿಗೂಡತೆ ಕೊನೆಗೂ ಬಯಲಾಗಿದೆ. ಪ್ರಕರಣ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸರು, ಅಪ್ರಾಪ್ತ ಬಾಲಕನೊಬ್ಬನನ್ನು ಬಂಧನಕ್ಕೊಳಪಡಿಸಿದ್ದಾರೆ.

ಆತ್ಮಹತ್ಯೆಯಂತೆ ಬಿಂಬಿತವಾದ ಕೇಸ್ ಕೊಲೆಯೆಂದು ತಿರುವು ಪಡೆದು ಕೊನೆಗೂ ಅಂತ್ಯ ಕಂಡಿದೆ. ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನ ವಿಚಾರಣೆ ನಡೆಸಿ ರಿಮ್ಯಾಂಡ್ ಹೋಂಗೆ ಕಳುಹಿಸಲಾಗಿದೆ.

ಪ್ರಬುದ್ಧಾಳ ತಾಯಿ ಸೌಮ್ಯ ಘಟನೆ ಬಗ್ಗೆ ಗೊತ್ತಾದ ಕೂಡಲೇ ಇದೊಂದು ಕೊಲೆ ಎಂದೇ ಆರೋಪಿಸಿ ಅದೇ ರೀತಿ ಪ್ರಕರಣ ದಾಖಲಿಸಿದ್ದರು. ಪೊಲೀಸರಿಗೂ ಕೂಡ ಈ ಪ್ರಕರಣದಲ್ಲಿ ಗೊಂದಲಗಳು ಮೂಡಿದ್ದವು.

ಮನೆ ಮುಂಭಾಗದ ಇದ್ದ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದಾಗಲೂ ಯಾರ ಚಲನವಲನಗಳು ಸಿಕ್ಕಿರಲಿಲ್ಲ. ಆದರೆ. ದೂರದ ಬೀದಿಯಲ್ಲಿದ್ದ ಅದೊಂದು ಸಿಸಿಟಿವಿ ಹಾಗೂ ಪೊಲೀಸರ ಶಂಕೆ ಅಪ್ರಾಪ್ತನ ಕೃತ್ಯ ಬಯಲಿಗೆ ಎಳೆದಿದೆ.

ಹತ್ಯೆಯಾದ ವಿದ್ಯಾರ್ಥಿನಿ.
ಬೆಂಗಳೂರಿನಲ್ಲಿ ಮತ್ತೊಬ್ಬ ಯುವತಿ ಅನುಮಾನಾಸ್ಪದ ಸಾವು: ನೇಣುಬಿಗಿದ ಸ್ಥಿತಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಶವ ಪತ್ತೆ!

ಅಪ್ರಾಪ್ತ ಬಾಲಕ ಪ್ರಭುದ್ದ್ಯಾಳ ಸಹೋದರನ ಸ್ನೇಹಿತ ಮನೆಗೆ ಬಂದು ಹೋಗವಷ್ಟು ಸಲುಗೆ ಇತ್ತು. ಪ್ರಭುದ್ಯಾಳ ಪರ್ಸ್ ನಿಂದ ಬಾಲಕ 2000 ನಗದು ಕದ್ದಿದ್ದ. ಇದನ್ನ ಪ್ರಭುದ್ಯಾ ನೋಡಿದ್ದಳು. ಆದರೆ ಅಂದು ಆಕೆ ಅವನನ್ನ ಕೇಳಿರಲಿಲ್ಲ. ಇತ್ತ ಅಪ್ರಾಪ್ತ ಬಾಲಕ ತನ್ನ ಸ್ನೇಹಿತನ ಜೊತೆ ಆಡುವಾಗ ಆತನ ಕನ್ಬಡ ಒಡೆದು ಹಾಕಿದ್ದ. ಅದನ್ನ ರೆಡಿ ಮಾಡಿಸಿಕೊಡಲು ಒತ್ತಾಯ ಮಾಡಿದ್ದ. ಅಪ್ರಾಪ್ತನ ಪೋಷಕರು ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರು. ಸ್ವಲ್ಪ ಶಿಸ್ತು ಹೆಚ್ಚು. ಹೀಗಾಗಿ ಅವರ ಬಳಿ ಕನ್ನಡಕ ಒಡೆದದ್ದು ಹೇಳಿದರೆ ಬೈತಾರೆ ಎಂಬ ಕಾರಣಕ್ಕೆ ಸ್ನೇಹಿತನ ಕನ್ನಡಕ ಸರಿ ಮಾಡಲು ಕಳ್ಳತನದ ಮಾರ್ಗ ಹಿಡಿದಿದ್ದ. ಪ್ರಬುದ್ದಳಾ ಹಣ ಕದ್ದು ಕನ್ನಡಕ ಸರಿ ಮಾಡಿಕೊಟ್ಟಿದ್ದ.

ಮೇ 15 ರಂದು ಪ್ರಬುದ್ದಾ ಅಪ್ರಾಪ್ತನನ್ನ ಕರೆದು ಕದ್ದಿರೊದನ್ನ ನೋಡಿದ್ದೇನೆಂದು ಹೇಳಿದ್ದಳು. ಈ ವೇಳೆ ತಂದೆ ತಾಯಿಗೆ ಎಲ್ಲಿ ಹೇಳುತ್ತಾರೊ ಎಂಬ ಭಯಕ್ಕೆ ಅಪ್ರಾಪ್ತ ಆರೋಪಿ ಆಕೆಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದ. ಈ ವೇಳೆ ಪ್ರಬುದ್ದಾ ಎಡವಿ ಬಿದ್ದು ಪ್ರಜ್ಞೆ ತಪ್ಪಿದ್ದಾಳೆ.

ಭಯಗೊಂಡ ಬಾಲಕ ಎಲ್ಲಿ ತನ್ನ ಮೇಲೆ ಆರೋಪ ಬರುತ್ತೋ ಎಂಬ ಕಾರಣಕ್ಕೆ ಆಕೆಯ ಕೈ ಹಾಗೂ ಕುತ್ತಿಗೆ ಕುಯ್ದು ನಂತರ ಹಿಂಬದಿ ಬಾಗಿಲಿನಿಂದ ಪರಾರಿಯಾಗಿದ್ದ. ಹಳೆಯ ಗುರುತಿನ ಮೇಲೆ ಚಾಕುವಿನಿಂದ ಕುಯ್ದಿದ್ದ ಹಿನ್ನೆಲೆ ಇದೊಂದು ಆತ್ಮಹತ್ಯೆ ಎಂದೇ ಬಿಂಬಿತವಾಗಿತ್ತು.

ಪ್ರಕರಣ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಯೊಂದು ಸುಳಿವು ನೀಡಿದೆ. ಈ ವೇಳೆ ಬಾಲಕನನ್ನು ಕರೆದು ವಿಚಾರಣೆ ನಡೆಸಿದಾಗ ಅಸಲಿ ಸಂಗತಿ ಹೊರ ಬಂದಿದೆ. ಈ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com