ಸಿಬಿಐ ಸೋಗಿನಲ್ಲಿ ವಿದ್ಯಾರ್ಥಿಗಳ ಸುಲಿಗೆ: ನಾಲ್ವರು ಕೇರಳಿಗರ ಬಂಧನ; ಏರ್'ಪಿಸ್ತೂಲ್-ಕೈಕೋಳ ವಶಕ್ಕೆ

ಆರೋಪಿಗಳು ಹೆಸರಘಟ್ಟ ಮುಖ್ಯರಸ್ತೆಯ ಎಜಿಬಿ ಲೇಔಟ್‌ನಲ್ಲಿ ರೂಮಿನಲ್ಲಿ ಮುವರು ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡಿದ್ದರು. ಸಿಬಿಐ ಅಧಿಕಾರಿಗಳು ಎಂದು ರೂಮಿಗೆ ನುಗ್ಗಿರುವ ಆರೋಪಿಗಳು ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.
ಬಂಧನ (ಸಂಗ್ರಹ ಚಿತ್ರ)
ಬಂಧನ (ಸಂಗ್ರಹ ಚಿತ್ರ)ಸಂಗ್ರಹ ಚಿತ್ರ

ಬೆಂಗಳೂರು: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಗಾಂಜಾ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಹಣ ಸುಲಿಗೆ ಮಾಡಿದ್ದ ಕೇರಳ ಗ್ಯಾಂಗ್ ವೊಂದನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು 12 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ತಿರುವನಂತಪುರದ ಹೊಟೇಲ್ ಉದ್ಯಮಿ ಎಎಸ್ ಪ್ರಮೋದ್ (42), ಬೆಂಗಳೂರಿನಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳಾದ ಅನಂತಕೃಷ್ಣ (23) ಮತ್ತು ಆದರ್ಶ್ (22) ಮತ್ತು ದೀಪಕ್ ಆರ್ ಚಂದ್ರ (37) ಬಂಧಿತರು.

ಸೋಮವಾರ ಈ ಘಟನೆ ನಡೆದಿದ್ದು, ಪೊಲೀಸರು ನಾಲ್ಕು ಚಕ್ರದ 2 ವಾಹನಗಳು, ಒಂದು ಏರ್ ಪಿಸ್ತೂಲ್, ಕೈಕೋಳಗಳು, ನಕಲಿ ಸಿಬಿಐ ಗುರುತಿನ ಚೀಟಿಗಳು, ಲಾಠಿ ಮತ್ತು ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧನ (ಸಂಗ್ರಹ ಚಿತ್ರ)
ಬಿಟ್‌ಕಾಯಿನ್ ಹಗರಣ: ಪೊಲೀಸ್ ಇನ್ಸ್‌ಪೆಕ್ಟರ್ ಚಂದ್ರಾಧರ್​ ಬಂಧನ

ಆರೋಪಿಗಳು ಹೆಸರಘಟ್ಟ ಮುಖ್ಯರಸ್ತೆಯ ಎಜಿಬಿ ಲೇಔಟ್‌ನಲ್ಲಿ ರೂಮಿನಲ್ಲಿ ಮುವರು ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡಿದ್ದರು. ಸಿಬಿಐ ಅಧಿಕಾರಿಗಳು ಎಂದು ರೂಮಿಗೆ ನುಗ್ಗಿರುವ ಆರೋಪಿಗಳು ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಬಳಿಕ ವಿದ್ಯಾರ್ಥಿಗಳಿಗೆ ಗಾಂಜಾ ನೀಡಿ, ವಿಡಿಯೋ ಮಾಡಿಕೊಂಡು, ಬೆದರಿಸಿ ರೂ.3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಡ್ರಗ್ ಪೆಡ್ಲರ್‌ಗಳೆಂದು ಬಿಂಬಿಸಲಾಗುತ್ತದೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ನಂತರ ಆರೋಪಿಗಳು ವಿದ್ಯಾರ್ಥಿಗಳಿಂದ 90 ಸಾವಿರ ರೂ.ಗಳನ್ನು ಬಲವಂತವಾಗಿ ಪಡೆದು ಉಳಿದ ಹಣಕ್ಕೆ ವ್ಯವಸ್ಥೆ ಮಾಡುವಂತೆ ಎಚ್ಚರಿಸಿ ಸ್ಥಳದಿಂದ ತೆರಳಿದ್ದಾರೆ.

ಸಂತ್ರಸ್ತರು ಕೂಡ ಕೇರಳ ಮೂಲದವರೇ ಆಗಿದ್ದಾರೆ. ನಾಲ್ವರು ಆರೋಪಿಗಳ ಪೈಕಿ ಪ್ರಮೋದ್ ಎಂಬಾತ ತನ್ನ ಸಹೋದರಿಯನ್ನು ನೋಡಲು ಬೆಂಗಳೂರಿಗೆ ಬರುತ್ತಿದ್ದ. ಈ ಸಮಯದಲ್ಲಿ ಆರೋಪಿಗಳಾದ ಅನಂತಕೃಷ್ಣ ಮತ್ತು ಆದರ್ಶ್ ನನ್ನು ಭೇಟಿಯಾಗಿದ್ದು, ಸ್ನೇಹಿತರಾಗಿದ್ದಾರೆ. ನಂತರ ಈ ಮೂವರು ನಗರದ ಹೊರವಲಯದಲ್ಲಿ ನೆಲೆಸಿದ್ದ ಕೇರಳದ ಇತರ ವಿದ್ಯಾರ್ಥಿಗಳನ್ನು ದರೋಡೆ ಮಾಡಲು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com