ಬೆಂಗಳೂರು: ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯ ಹಾಗೂ ವಾರ್ಡ್ ಬಾಯ್ ಮದ್ಯಪಾನದ ಅಮಲಿನಲ್ಲಿ ರೋಗಿಯೊಬ್ಬರಿಗೆ ನಾಲ್ಕೈದು ಬಾರಿ ಸಿರಂಜ್ ಚುಚ್ಚಿದ ವಿದ್ಯಮಾನ ನಡೆದಿದೆ. ಗಾಬರಿಯಾದ ಯುವತಿ ಕುಡುಕ ಡಾಕ್ಟರ್ ಕೈಯಿಂದ ತಪ್ಪಿಸಿಕೊಂಡಿದ್ದು, ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ.
ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದ 24 ವರ್ಷದ ಮಹಿಳೆಯೊಬ್ಬರಿಗೆ ಅಹಿತಕರ ಅನುಭವವಾಗಿದ್ದು, ವೈದ್ಯರು ಮತ್ತು ವಾರ್ಡ್ ಬಾಯ್ ತನ್ನ ಕೈಗೆ ಸಿರಿಂಜ್ ಸೇರಿಸಲು ಹಲವು ಬಾರಿ ಪ್ರಯತ್ನಿಸಿ, ರಕ್ತನಾಳ ಪತ್ತೆಹಚ್ಚಲು ವಿಫಲರಾದರು. ಆ ಸಮಯದಲ್ಲಿ ವೈದ್ಯರು ಮತ್ತು ವಾರ್ಡ್ ಬಾಯ್ ಇಬ್ಬರೂ ಕುಡಿದಿದ್ದರು ಎನ್ನಲಾಗಿದೆ. ಅದರಂತೆ ರೋಗಿಯು ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ತೀವ್ರ ಜ್ವರದಿಂದ ಬಳಲುತ್ತಿದ್ದ ಸ್ನೇಹಾ ಭಟ್ ಅವರು ನ.3 ರಂದು ಕೋಣನಕುಂಟೆಯ ವಸಂತಪುರ ಮುಖ್ಯರಸ್ತೆ ಬಳಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಭೇಟಿ ನೀಡಿದ್ದರು. ಕುಡಿದ ಅಮಲಿನಲ್ಲಿದ್ದ ಡಾ.ಪ್ರದೀಪ್ ಮತ್ತು ವಾರ್ಡ್ ಬಾಯ್ ಮಹೇಂದ್ರ, ಆಕೆಯ ಕೈಗೆ ಡ್ರಿಪ್ಸ್‌ಗಾಗಿ ಕ್ಯಾನುಲಾ ಅಳವಡಿಸಲು ಕನಿಷ್ಠ ನಾಲ್ಕು ಬಾರಿ ಪ್ರಯತ್ನಿಸಿ, ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ, ಇದರಿಂದ ಆಕೆ ಮತ್ತಷ್ಟು ನೋವು ಅನುಭವಿಸಿದ್ದಾರೆ.
ಏತನ್ಮಧ್ಯೆ, ಪೊಲೀಸರು ನಾನ್-ಕಾಗ್ನಿಜಬಲ್ ವರದಿ (ಎನ್‌ಸಿಆರ್) ದಾಖಲಿಸಿದ್ದಾರೆ, ವೈದ್ಯಕೀಯ ಪರಿಣಾಮಗಳನ್ನು ಒಳಗೊಂಡಿರುವ ಪ್ರಕರಣವನ್ನು ಕರ್ನಾಟಕ ವೈದ್ಯಕೀಯ ಮಂಡಳಿಗೆ ವರ್ಗಾಯಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಈ ಸಮಸ್ಯೆಯು ವೈದ್ಯಕೀಯ ವ್ಯವಸ್ಥೆಯಲ್ಲಿ ಸಂಭಾವ್ಯ ನಿರ್ಲಕ್ಷ್ಯ ಮತ್ತು ದುರ್ನಡತೆಯನ್ನು ಒಳಗೊಂಡಿರುವುದರಿಂದ, ವೈದ್ಯಕೀಯ ಮಂಡಳಿಯು ಅದನ್ನು ನಿಭಾಯಿಸುತ್ತದೆ" ಎಂದು ಪೊಲೀಸರು ಹೇಳಿದ್ದಾರೆ. ಸ್ನೇಹಳನ್ನು ಪರಿಶೀಲಿಸಿದ ಡಾ ಪ್ರದೀಪ್ ಆಕೆಗೆ ಇಂಜೆಕ್ಷನ್ ನೀಡಲು ಸೂಚಿಸಿದ್ದಾರೆ. ಮಹೇಂದ್ರ ಆಕೆಯ ಕೈಗೆ ಡ್ರಿಪ್ಸ್ ಹಾಕಲು ಯತ್ಮಿಸಿದ್ದಾನೆ, ಆದರೆ ಈ ವೇಳೆ ಅವನಿಗೆ ರಕ್ತನಾಳ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ, ಇದರ ಪರಿಣಾಮವಾಗಿ ಸ್ನೇಹ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.
Advertisement