ಬೆಂಗಳೂರು: ಕಡಲೆಕಾಯಿ ಪರಿಷೆಗೆ ಪೋಷಕರೊಂದಿಗೆ ತೆರಳಿದ್ದ 3 ವರ್ಷದ ಮಗುವಿನ ಮೇಲೆ ಕಾರು ಹರಿದು ಸಾವನ್ನಪ್ಪಿರುವ ದುರ್ಘಟನೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಶನೇಶ್ವರ ದೇವಸ್ಥಾನದ ಬಳಿ ಸೋಮವಾರ ಸಂಜೆ ನಡೆದಿದೆ.
ಮೃತ ಮಗುವನ್ನು ಆನೇಕಲ್ ನಿವಾಸಿ ಏಕಾಶ್ ಎಂದು ಗುರ್ತಿಸಲಾಗಿದೆ. ಪರಿಷೆಗೆ ಬಂದಿದ್ದ ತಾಯಿ–ಮಗು ದೇವಾಲಯದ ದರ್ಶನ ಮುಗಿಸಿ ಹೊರ ಬರುತ್ತಿದ್ದಂತೆ ಜನಜಂಗುಳಿಯಲ್ಲಿ ಮಗು ತಾಯಿಯ ಕೈ ಬಿಟ್ಟು ರಸ್ತೆಗೆ ಬಂದಿದೆ.
ಬಳಿಕ ಚಪ್ಪಲಿ ಧರಿಸುವ ವೇಳೆ ಮಗುವಿಗೆ ಕಾಲು ಜಾರಿದ್ದು ರಸ್ತೆಯಲ್ಲಿ ಸಾಗುತ್ತಿದ್ದ ಎಸ್‌ಯುವಿ ಚಕ್ರದಡಿಗೆ ಸಿಲುಕಿದೆ. ಬಳಿಕ ಸ್ಥಳೀಯರು ಹಾಗೂ ಮಗುವಿನ ಪೋಷಕರು ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಮಗು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಸಂಬಂಧ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Advertisement