Video: 'ಮಠಕ್ಕೆ ಹೋಗಿ ಶ್ರೀಗಳೊಂದಿಗೆ ಸಮಾಲೋಚಿಸಿ'; ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದ ದಂಪತಿಗೆ ಹೈಕೋರ್ಟ್ ಸಲಹೆ!

ದಾಂಪತ್ಯ ಕಲಹಗಳು ದ್ವೇಷಕ್ಕೆ ತಿರುಗಿ ಪತಿ-ಪತ್ನಿ ವಿರುದ್ಧ ದಿಕ್ಕಿನಲ್ಲೂ ಸಾಗಿದ ಉದಾಹರಣೆಗಳೂ ಸಾಕಷ್ಟಿವೆ. ಹಲವು ಪ್ರಕರಣಗಳು ಕೋರ್ಟ್​ ಮೆಟ್ಟಿಲೇರಿ ಕೋರ್ಟ್​​ನಲ್ಲಿ ಸುಖಾಂತ್ಯಕ್ಕೆ ತಿರುಗಿದ ಉದಾಹರಣೆಗಳೂ ಇವೆ. ಅಂತೆಯೇ ಡಿವೋರ್ಸ್​ಗಾಗಿ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದ ದಂಪತಿಗೆ ಮಠಕ್ಕೆ ಹೋಗಿ ಅಂತ ಜಡ್ಜ್​ ಸೂಚನೆ ಕೊಟ್ಟಿದ್ದಾರೆ.
Gavisiddeshwarseer
ಕೊಪ್ಪಳದ ಗವಿಸಿದ್ದೇಶ್ವರ ಮಠ
Updated on

ಬೆಂಗಳೂರು: ಪರಸ್ಪರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಗಳಿಗೆ ಗವಿಸಿದ್ದೇಶ್ವರ ಶ್ರೀಗಳ ಭೇಟಿ ಮಾಡಿ ಸಮಾಲೋಚಿಸಿ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ.

ಹೌದು.. ಇತ್ತೀಚೆಗೆ ದೇಶದಲ್ಲಿ ವಿಚ್ಛೇದನ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದು, ಸಣ್ಣ-ಪುಟ್ಟ ವಿಚಾರಗಳಿಗೂ ದಂಪತಿಗಳು ಡೈವೋರ್ಸ್ ಅರ್ಜಿ ಸಲ್ಲಿಸುತ್ತಿದ್ದಾರೆ. ದಾಂಪತ್ಯ ಕಲಹಗಳು ದ್ವೇಷಕ್ಕೆ ತಿರುಗಿ ಪತಿ-ಪತ್ನಿ ವಿರುದ್ಧ ದಿಕ್ಕಿನಲ್ಲೂ ಸಾಗಿದ ಉದಾಹರಣೆಗಳೂ ಸಾಕಷ್ಟಿವೆ.

ಹಲವು ಪ್ರಕರಣಗಳು ಕೋರ್ಟ್​ ಮೆಟ್ಟಿಲೇರಿ ಕೋರ್ಟ್​​ನಲ್ಲಿ ಸುಖಾಂತ್ಯಕ್ಕೆ ತಿರುಗಿದ ಉದಾಹರಣೆಗಳೂ ಇವೆ. ಅಂತೆಯೇ ಡಿವೋರ್ಸ್​ಗಾಗಿ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದ ದಂಪತಿಗೆ ಮಠಕ್ಕೆ ಹೋಗಿ ಅಂತ ಜಡ್ಜ್​ ಸೂಚನೆ ಕೊಟ್ಟಿದ್ದಾರೆ.

Gavisiddeshwarseer
'ಗೋರಿಪಾಳ್ಯ ಪಾಕಿಸ್ತಾನದಲ್ಲಿದೆಯಾ?': ನ್ಯಾಯಾಧೀಶರ ಪ್ರಶ್ನೆ

ಕುತೂಹಲ ಮೂಡಿಸಿದ ನ್ಯಾಯಾಧೀಶರ ಸಲಹೆ

4 ವರ್ಷದ ಹಿಂದೆ ಗದಗ ಜಿಲ್ಲೆಯ ದಂಪತಿ ಡಿವೋರ್ಸ್​ ಬೇಕು ಅಂತ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಸೆಪ್ಟೆಂಬರ್ 17ರಂದು ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠದ ನ್ಯಾ.ಶ್ರೀ ಕೃಷ್ಣ ದೀಕ್ಷಿತ್ ಅವರು, ದಂಪತಿಗೆ ಬುದ್ಧಿವಾದ ಹೇಳಿದ್ದಾರೆ. ಗಂಡ-ಹೆಂಡತಿ ಜಗಳ ಸಾಮಾನ್ಯ. ಸಣ್ಣ ವಿಚಾರಕ್ಕೆ ಮುನಿಸಿಕೊಂಡು ದೂರ ಆಗಿ ಜೀವನ ಹಾಳು ಮಾಡಿಕೊಳ್ಳಬೇಡಿ. ಸಮಸ್ಯೆ ಇದ್ದರೆ ಕೂತು ಬಗೆಹರಿಸಿಕೊಳ್ಳಿ. ಏನಾದರೂ ಮಾನಸಿಕವಾಗಿ ಸಮಸ್ಯೆ ಇದ್ದರೆ ಮನೋವೈದ್ಯರ ಬಳಿಗೆ ಹೋಗಿ ಎಂದು ತಿಳಿ ಹೇಳಿದ್ದಾರೆ.

ಈ ವೇಳೆ ದಂಪತಿ ನಾವು ಮನೋವೈದ್ಯರ ಬಳಿ ಹೋಗಿದ್ವಿ. ಆದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಕೋರ್ಟ್​ಗೆ ಹೇಳಿದ್ದಾರೆ. ಆಗ ನ್ಯಾಯಮೂರ್ತಿಗಳು ಯಾವುದಾದ್ರೂ ಮಠಾಧೀಶರ ಬಳಿ ಹೋಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಅಂತ ಸಲಹೆ ನೀಡಿದ್ದಾರೆ. ಜಡ್ಜ್ ಮಾತಿಗೆ ಒಪ್ಪಿದ ಗಂಡ ಗದಗದ ತೋಂಟದಾರ್ಯ ಮಠದ ಸ್ವಾಮೀಜಿ ಹತ್ರ ಹೋಗ್ತೀವಿ ಅಂತ ಹೇಳಿದ್ದಾನೆ.

ಕೋರ್ಟ್​ನಲ್ಲಿ ಗಂಡನ ಮಾತಿಗೆ ಒಪ್ಪದ ಹೆಂಡತಿ ತೋಂಟದಾರ್ಯ ಮಠ ಬೇಡ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಬಳಿ ಹೋಗ್ತೀವಿ ಅಂದಿದ್ದಾಳೆ. ಈ ವೇಳೆ ನ್ಯಾಯಮೂರ್ತಿಗಳು ಒಳ್ಳೆಯದೇ ಆಯ್ತು. ಗವಿಸಿದ್ದೇಶ್ವರ ಸ್ವಾಮೀಜಿ ವಿವೇಕಾನಂದರಂತೆ ಇದ್ದಾರೆ. ಅವರ ಭಾಷಣ ಕೇಳಿದ್ದೇನೆ. ಅವರ ಬಳಿಯೇ ಹೋಗಿ ಎಂದು ಸಲಹೆ ಕೊಟ್ಟಿದ್ದಾರೆ.

ಪರಸ್ಪರ ದೂರವಾಗಿದ್ದ ಪತಿ-ಪತ್ನಿಗೆ ಗವಿ ಮಠಕ್ಕೆ ಹೋಗಿ, ಶ್ರೀಗಳ ಆಶೀರ್ವಾದ ಪಡೆದು ಹೊಸ ಜೀವನ ನಡೆಸಿ ಅಂತ ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ. ನ್ಯಾಯಮೂರ್ತಿಗಳ ಸೂಚನೆ ಮೇರೆಗೆ ಸೆ.22ರಂದು ಇಂದು ದಂಪತಿಗಳು ಗವಿಸಿದ್ದೇಶ್ವರ ಮಠಕ್ಕೆ ಹೋಗುವುದಾಗಿ ಒಪ್ಪಿದ್ದಾರೆ.

ಶ್ರೀಗಳನ್ನು ಭೇಟಿ ಮಾಡುತ್ತಿರುವುದು ಸರಿಯಾದ ನಿರ್ಧಾರ!

ಕೊಪ್ಪಳದ ಗವಿಸಿದ್ದೇಶ್ವರ ಮಠದ ಭಕ್ತ ಶಿವಾನಂದ ಪಾಟೀಲ ಮಾತನಾಡಿ, ತಮ್ಮ ಸಮಸ್ಯೆಗಳಿಗೆ ಗವಿಸಿದ್ದೇಶ್ವರ ಶ್ರೀಗಳನ್ನು ಭೇಟಿಯಾಗುತ್ತಿರುವುದು ಸರಿಯಾದ ನಿರ್ಧಾರವಾಗಿದ್ದು, ಮಠದ ಸಂಪ್ರದಾಯದಲ್ಲಿ ನ್ಯಾಯಾಲಯದಿಂದ ಇಂತಹ ಪ್ರಕರಣ ನಡೆಯುತ್ತಿರುವುದು ಇದೇ ಮೊದಲು. ಅನೇಕ ದಂಪತಿಗಳು ಈ ಮಾರ್ಗವನ್ನು ಅನುಸರಿಸಿದರೆ, ನ್ಯಾಯಾಲಯಗಳ ಮೇಲೆ ಕಡಿಮೆ ಒತ್ತಡವಿರುತ್ತದೆ ಮತ್ತು ಜನರು ಸಂತೋಷದ ಜೀವನವನ್ನು ನಡೆಸಬಹುದು.

ಅನೇಕ ಜನರು ತಮ್ಮ ಸಮಸ್ಯೆಗಳಿಗಾಗಿ ದಾರ್ಶನಿಕರನ್ನು ಭೇಟಿಯಾಗುತ್ತಾರೆ. ಆದರೆ ವೈವಾಹಿಕ ಗೊಂದಲದ ವಿಷಯಕ್ಕೆ ಬಂದಾಗ, ಅವರು ದಾರ್ಶನಿಕರಿಂದ ಸಲಹೆಗಳನ್ನು ಪಡೆಯಲು ಬರುವುದಿಲ್ಲ. ಆದರೆ ಅವರು ನೇರವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ ಮತ್ತು ಈ ಬೆಳವಣಿಗೆಯು ಭವಿಷ್ಯಕ್ಕಾಗಿ ಒಂದು ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

Gavisiddeshwarseer
'ನಾವು ಸಾಧ್ಯವಾದಷ್ಟು ಒಟ್ಟಿಗೆ ಇರಲು ಪ್ರಯತ್ನಿಸಿದ್ದೇವೆ': ವಿಚ್ಛೇದನ ಪ್ರಕಟಿಸಿದ ಹಾರ್ದಿಕ್ ಪಾಂಡ್ಯ, ನತಾಶಾ

800 ವರ್ಷಗಳಷ್ಟು ಹಳೆಯ ಐತಿಹಾಸಿಕ ಮಠ

ಅಂದಹಾಗೆ ಕರ್ನಾಟಕದ ಅಗ್ರಮಾನ್ಯ ಮಠ ಪರಂಪರೆಯ ಸಂಸ್ಥಾನಗಳಲ್ಲಿ ಒಂದಾಗಿರುವ ಗವಿಸಿದ್ದೇಶ್ವರ ಮಠ ಕೊಪ್ಪಳ ಜಿಲ್ಲೆಯಲ್ಲಿದೆ. ಇದನ್ನು ಗವಿಮಠ ಎಂತಲೂ ಕರೆಯುತ್ತಾರೆ. ಇದು ಉತ್ತರ ಕರ್ನಾಟಕದ ಹಳೆಯ ಮಠಗಳಲ್ಲಿ ಒಂದು. 800 ವರ್ಷಗಳಷ್ಟು ಹಳೆಯದಾಗಿರುವ ಈ ಮಠ ಲಿಂಗಾಯತ ಮಠಗಳಲ್ಲಿ ಒಂದು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com