ಈ ಪ್ರಕರಣವನ್ನು CBI ಗೆ ಖಂಡಿತ ಕೊಡಿಸುತ್ತೇನೆ: ಸಿದ್ದರಾಮಯ್ಯ ವಿರುದ್ಧ ದೂರುದಾರ ಸ್ನೇಹಮಯಿ ಕೃಷ್ಣ

ಈ ಬಗ್ಗೆ ಪ್ರತಿಕ್ರಿಯಿಸಿರುವ ದೂರುದಾರ ಸ್ನೇಹಮಹಿ ಕೃಷ್ಣ, ಒಬ್ಬ ಸಾಮಾನ್ಯ ಪ್ರಜೆ ರಾಜ್ಯದ ಭ್ರಷ್ಟ ಸಿಎಂಗೆ ಶಿಕ್ಷೆ ಕೊಡಿಸಬಹುದು ಎಂಬುದಕ್ಕೆ ಇದು ಉದಾಹರಣೆ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ, ಸ್ನೇಹಮಯಿ ಕೃಷ್ಣ(ಸಂಗ್ರಹ ಚಿತ್ರ)
ಸಿಎಂ ಸಿದ್ದರಾಮಯ್ಯ, ಸ್ನೇಹಮಯಿ ಕೃಷ್ಣ(ಸಂಗ್ರಹ ಚಿತ್ರ)
Updated on: 

ಚಾಮರಾಜನಗರ: ಮುಡಾ ನಿವೇಶನ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತ ಎಸ್​ಪಿ ಕಚೇರಿಯಲ್ಲಿ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಪ್ರಕಾರ ಲೋಕಾಯುಕ್ತ ಪೊಲೀಸರಿಂದ ವಿವಿಧ ಸೆಕ್ಷನ್ ಅಡಿಯಲ್ಲಿ ಎಫ್​​ಐಆರ್ ದಾಖಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದೂರುದಾರ ಸ್ನೇಹಮಹಿ ಕೃಷ್ಣ, ಒಬ್ಬ ಸಾಮಾನ್ಯ ಪ್ರಜೆ ರಾಜ್ಯದ ಭ್ರಷ್ಟ ಸಿಎಂಗೆ ಶಿಕ್ಷೆ ಕೊಡಿಸಬಹುದು ಎಂಬುದಕ್ಕೆ ಇದು ಉದಾಹರಣೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ, ಸ್ನೇಹಮಯಿ ಕೃಷ್ಣ(ಸಂಗ್ರಹ ಚಿತ್ರ)
ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸ್ FIR ದಾಖಲು

ನಮ್ಮ ಹೋರಾಟಕ್ಕೆ ಸಿಕ್ಕ ಜಯ: ಸಿಎಂ ವಿರುದ್ಧ ಎಫ್​ಐಆರ್​ ದಾಖಲಾಗಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಈ ದೇಶದ ಜನತೆ ಇಂತಹ ಭ್ರಷ್ಟಾಚಾರ ಮಾಡುವಂತಹ ಅಕ್ರಮಗಳನ್ನು ತಡೆಗಟ್ಟಬೇಕು. ಎಫ್​ಐಆರ್ ದಾಖಲಾದರೂ ಲೋಕಾಯುಕ್ತ ಎಸ್.ಪಿ ಉದೇಶ್ ವಿರುದ್ದ ಕಾನೂನು ಹೋರಾಟ ನಿಶ್ಚಿತ. ಎಸ್.ಪಿ ನ್ಯಾಯಾಲಯದ ಆದೇಶಕ್ಕೆ ಪೂರಕವಾಗಿ ನಡೆದುಕೊಂಡಿಲ್ಲ. ಮೇಲಾಧಿಕಾರಿ ಒತ್ತಡ ಹಾಗೂ ಆದೇಶದ ಬಳಿಕ ಈಗ ಎಫ್​ಐಆರ್ ಮಾಡಿದ್ದಾರೆ. ಅವರು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ ಅದಕ್ಕೆ ಶಿಕ್ಷೆ ಕೊಡಿಸುವುದು ಖಚಿತ. ಈ ಪ್ರಕರಣವನ್ನು ಸಿಬಿಐಗೆ ಖಂಡಿತ ಕೊಡಿಸುತ್ತೇನೆ ಎಂದರು.

ಸಿದ್ದರಾಮಯ್ಯ ನೈತಿಕ ಬೆಲೆ ಹೊತ್ತು ರಾಜೀನಾಮೆ ನೀಡಲಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com