ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ: ನಗರದಲ್ಲಿ ಮನೆಮಾಡಿದ ಸಂಭ್ರಮ, ರಾಮನ ಹೆಸರಿನ ಪೋಸ್ಟರ್, ಬ್ಯಾನರ್ ಗಳ ಮಾರಾಟ ಜೋರು!

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಮಮಂದಿರದ ಉದ್ಘಾಟನೆ ಸಂಭ್ರಮ ನಗರದಲ್ಲೂ ಮನೆ ಮಾಡಿದೆ. ಎಲ್ಲೆಲ್ಲೂ ರಾಮನ ಹೆಸರಿನ ಪೋಸ್ಟರ್ ಹಾಗೂ ಬ್ಯಾನರ್ ಗಳಿಗೆ ಬೇಡಿಕೆಗಳು ಹೆಚ್ಚಾಗಿದ್ದು, ಭರ್ಜರಿ ಮಾರಾಟವಾಗುತ್ತಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಮಮಂದಿರದ ಉದ್ಘಾಟನೆ ಸಂಭ್ರಮ ನಗರದಲ್ಲೂ ಮನೆ ಮಾಡಿದೆ. ಎಲ್ಲೆಲ್ಲೂ ರಾಮನ ಹೆಸರಿನ ಪೋಸ್ಟರ್ ಹಾಗೂ ಬ್ಯಾನರ್ ಗಳಿಗೆ ಬೇಡಿಕೆಗಳು ಹೆಚ್ಚಾಗಿದ್ದು, ಭರ್ಜರಿ ಮಾರಾಟವಾಗುತ್ತಿವೆ.

ಕಳೆದ ಕೆಲವು ವಾರಗಳಿಂದ ರಾಮನ ಹೆಸರಿನ ಬ್ಯಾನರ್ ಹಾಗೂ ಪೋಸ್ಟರ್ ಗಳಿಗೆ ಬೇಡಿಕೆಗಳು ಹೆಚ್ಚಾಗಿದ್ದು, ಮಾರಾಟ ಶೇ.40-50ರಷ್ಟು ಹೆಚ್ಚಾಗಿದೆ ಎಂದು ಮಾರಾಟಗಾರರು ಹೇಳಿದ್ದಾರೆ.

ಕೇಸರಿ ಧ್ವಜ , ಶ್ರೀರಾಮನ ಸ್ಟಿಕ್ಕರ್‌ಗಳು, ದೇವಾಲಯದ ಚಿತ್ರಗಳು, ದೇವಾಲಯದ ಚಿತ್ರವಿರುವ ಟೀ ಶರ್ಟ್‌ಗಳು, ಪೋಸ್ಟರ್‌ಗಳು, ಬ್ಯಾನರ್‌ಗಳು ಮತ್ತು ರಾಮನಿಗೆ ಸಂಬಂಧಿಸಿದ ಇತರೆ ಸಾಮಾಗ್ರಿಗಳನ್ನು ಹಲವು ಜನರು ಖರೀದಿ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.

ನಗರದಲ್ಲಿ ಪ್ರಮುಖವಾಗಿ ಚಿಕ್ಕಪೇಟೆಯಂತಹ ಕೆಲವು ಪ್ರದೇಶಗಳಲ್ಲಿ ಕೇಸರಿ ಧ್ವಜಗಳು ಕಂಡು ಬರುತ್ತಿದ್ದು, ಕೇಸರಿ ಬಣ್ಣದ ಅಲಂಕಾರಗಳು ಕಂಡು ಬರುತ್ತಿವೆ. ಇದಲ್ಲದೆ, ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ದಿನವಾದ ಸೋಮವಾರ ದೀಪಗಳನ್ನು ಬೆಳಗಿಸಲು ಅಂಗಡಿಗಳ ಮಾಲೀಕರು ಹಾಗೂ ಸಂಘಟನೆಗಳು ಸಿದ್ಧತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಚಿಕ್ಕಪೇಟೆಯ ಲಾಲ್ ಬಿಲ್ಡಿಂಗ್ ರೀಟೇಲ್ ಅಸೋಸಿಯೇಶನ್‌ನ ಅಧ್ಯಕ್ಷ ರಂಜಿತ್ ಜೈನ್ ಮಾತನಾಡಿ, "ಚಿಕ್‌ಪೇಟೆಯಲ್ಲಿ ಸುಮಾರು 200 ಅಂಗಡಿಗಳು ನಮ್ಮ ಸಂಘದ ಭಾಗವಾಗಿದೆ. ಸಗಟು ವ್ಯಾಪಾರಿಗಳು ಸೇರಿದಂತೆ ಸುಮಾರು 1,900 ಡೀಲರ್‌ಗಳನ್ನು ನಾವು ಹೊಂದಿದ್ದೇವೆ. ಎಲ್ಲಾ ಅಂಗಡಿಗಳಲ್ಲೂ ಕಳೆದ ಒಂದು ತಿಂಗಳಿನಿಂದ ರಾಮನಿಗೆ ಸಂಬಂಧಿಸಿದ ವಸ್ತುಗಳು ಭರ್ಜರಿ ಮಾರಾಟವಾಗುತ್ತಿವೆ. ಕೆಲವರು ಪ್ರತಿಮೆಗಳನ್ನು ಮಾರಾಟ ಮಾಡುತ್ತಿದ್ದಾರೆ, ಮತ್ತೆ ಕೆಲವರು ಪೋಸ್ಟರ್‌ಗಳು ಮತ್ತು ಸ್ಟಿಕ್ಕರ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ.

ಜನರು ಕುಟುಂಬ ಸಮೇತರಾಗಿ ಬಂದು ದೊಡ್ಡ ಪ್ರಮಾಣದಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ. ಕೆಲ ಮಾರಾಟಗಾರರು ಬೇಡಿಕೆಗಳನ್ನು ನಿರೀಕ್ಷಿಸದ ಕಾರಣ ಪೂರೈಕೆ ವೇಳೆ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಕೆಲ ವಸ್ತುಗಳು ಬೇಡಿಕೆಗೆ ಅನುಗುಣವಾಗಿ ಬೆಲೆಗಳಲ್ಲಿ ಹೆಚ್ಚಳಗಳು ಕಂಡು ಬಂದಿವೆ ಎಂದು ತಿಳಿಸಿದ್ದಾರೆ.

ನಗರದಾದ್ಯಂತ ಅನೇಕ ದ್ವಿಚಕ್ರ ವಾಹನಗಳು ಮತ್ತು ಆಟೋರಿಕ್ಷಾಗಳು ರಾಮನ ಹೆಸರು, ಓಂಕಾರ ಅಥವಾ ದೇವಾಲಯದ ರೂಪುರೇಷೆಯೊಂದಿಗಿರುವ ಧ್ವಜಗಳನ್ನು ಹಾಕಿಕೊಳ್ಳುತ್ತಿದ್ದಾರೆಂದು ಹೇಳಿದ್ದಾರೆ.

ಮುಕುಂದ್ ಎಂಬುವವರು ಮಾತನಾಡಿ, ಕಳೆದ ಒಂದು ತಿಂಗಳಿನಿಂದ ನಿಯಮಿತವಾಗಿ 7,000 ಧ್ವಜಗಳನ್ನು ಮಾರಾಟವಾಗಿವೆ. ಅವುಗಳಲ್ಲಿ ಹೆಚ್ಚಿನವು ರಾಮನ ಚಿತ್ರವಿದೆ ಧ್ವಜಗಳಾಗಿವೆ. ಕಳೆದ ತಿಂಗಳೊಂದರಲ್ಲೇ ನಾವು 40,000 ಧ್ವಜಗಳನ್ನು ಮಾರಾಟ ಮಾಡಿದ್ದೇವೆ. ಮಾರಾಟದಲ್ಲಿ ಶೇ.200ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com