BBMP: 'ಕಸ ಸಂಗ್ರಹಣೆ, ರಸ್ತೆ ಬದಿ ಪಾರ್ಕಿಂಗ್ ಗೆ ನಾವು ಹಣ ಕೊಡಲ್ಲ': ಸರ್ಕಾರದ ವಿರುದ್ಧ ನಾಗರೀಕರ ಸಹಿ ಅಭಿಯಾನ!

ಬೆಂಗಳೂರು ನವನಿರ್ಮಾಣ ಪಕ್ಷ (BNP) ಈ ಸಹಿ ಸಂಗ್ರಹ ಅಭಿಯಾನವನ್ನು ಆರಂಭಿಸಿದ್ದು, ಈಗಾಗಲೇ ಸುಮಾರು 1400 ಮಂದಿ ಈ ಅಭಿಯಾನದಲ್ಲಿ ಪಾಲ್ಗೊಂಡು ಸಹಿ ಹಾಕಿದ್ದಾರೆ.
plea against garbage, parking fee in Bengaluru
ಸಂಗ್ರಹ ಚಿತ್ರ
Updated on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಮತ್ತು ರಸ್ತೆ ಬದಿ ಪಾರ್ಕಿಂಗ್ ವೆಚ್ಚ ಸಂಗ್ರಹಿಸಲು ನಿರ್ಧರಿಸಿರುವ ಸರ್ಕಾರದ ನಡೆ ವಿರುದ್ಧ ನಾಗರಿಕರು ಸಹಿ ಅಭಿಯಾನ ಆರಂಭಿಸಿದ್ದಾರೆ.

ಬೆಂಗಳೂರು ನವನಿರ್ಮಾಣ ಪಕ್ಷ (BNP) ಈ ಸಹಿ ಸಂಗ್ರಹ ಅಭಿಯಾನವನ್ನು ಆರಂಭಿಸಿದ್ದು, ಈಗಾಗಲೇ ಸುಮಾರು 1400 ಮಂದಿ ಈ ಅಭಿಯಾನದಲ್ಲಿ ಪಾಲ್ಗೊಂಡು ಸಹಿ ಹಾಕಿದ್ದಾರೆ.

ಬೆಂಗಳೂರಿನ ವಿವಿಧ ಪ್ರದೇಶಗಳ 1,000 ಕ್ಕೂ ಹೆಚ್ಚು ಜನರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪರಿಚಯಿಸಿದ ಘನತ್ಯಾಜ್ಯ ನಿರ್ವಹಣಾ ಬಳಕೆದಾರ ಶುಲ್ಕ ಮತ್ತು ಖಾಸಗಿ ಸ್ಥಳಗಳಲ್ಲಿ ಪಾರ್ಕಿಂಗ್ ಶುಲ್ಕದಂತಹ ಹೆಚ್ಚುವರಿ ತೆರಿಗೆಗಳನ್ನು ಪಾವತಿಸುವುದಿಲ್ಲ ಎಂದು ಆನ್‌ಲೈನ್‌ನಲ್ಲಿ ಪ್ರತಿಜ್ಞೆ ಮಾಡಿದರು.

plea against garbage, parking fee in Bengaluru
ಅಪಾರ್ಟ್ ಮೆಂಟ್ ನಿರ್ವಹಣೆಗೆ ಮಾಸಿಕ 7,500 ರೂ ಕೊಡ್ತೀರಾ? ಹಾಗಾದ್ರೆ ಶೇ.18 ರಷ್ಟು GST ಪಾವತಿಸಿ: ಜನರಿಗೆ ಹೊಸ ಬರೆ!

'ನಾನು ಹೊಸ ಶುಲ್ಕಗಳನ್ನು ಪಾವತಿಸುವುದಿಲ್ಲ'

ಬಿಎನ್ ಪಿ ಪಕ್ಷ ಹೆಚ್ಚುವರಿ ತೆರಿಗೆಯ ವಿಷಯಕ್ಕೆ ಸಂಬಂಧಿಸಿದಂತೆ BNP 'ನಾನು ಹೊಸ ಶುಲ್ಕಗಳನ್ನು ಪಾವತಿಸುವುದಿಲ್ಲ' ಎಂಬ ಆನ್‌ಲೈನ್ ಅರ್ಜಿಯನ್ನು ಪ್ರಾರಂಭಿಸಿದ್ದು, ಈಗಾಗಲೇ ವಿವಾದಿತ ನಡೆ ವಿರುದ್ಧ ಬಿಬಿಎಂಪಿ ಆಡಳಿತಾಧಿಕಾರಿಗೆ ಅರ್ಜಿ ಸಲ್ಲಿಸಲಾಗಿದೆ. ಅಂತೆಯೇ ಅದನ್ನು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ರವಾನಿಸಲಾಗಿದೆ ಎಂದು BNP ಸದಸ್ಯರು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕನಕಪುರ ರಸ್ತೆಯ ನಿವಾಸಿ ಪಿಯೂಷ್, “ಅಧಿಕಾರಿಗಳು ಪ್ರತಿ ಫ್ಲಾಟ್‌ಗೆ 1500-2,000 ರೂ.ಗಳನ್ನು ಸಂಗ್ರಹಿಸುತ್ತಿದ್ದಾರೆ! ನಮ್ಮ ಒಂದು ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲೇ ಅವರು 38 ಲಕ್ಷ ರೂ.ಗಳನ್ನು ಸಂಗ್ರಹಿಸಬಹುದಾಗಿದೆ. ಆದರೆ ಇಷ್ಟೊಂದು ಹಣ ಎಲ್ಲಿಗೆ ಹೋಗುತ್ತದೆ ಎಂದು ಪ್ರಶ್ನಿಸಿದ್ದಾರೆ.

'ಹೀಗೆ ನಾಗರಿಕರರಿಂದ ಸಂಗ್ರಹಿಸುವ ಹಣವನ್ನು ಬಿಬಿಎಂಪಿ ಏನು ಮಾಡುತ್ತದೆ ಎಂಬುದರ ಕುರಿತು ಬಿಬಿಎಂಪಿ ಸ್ಪಷ್ಟನೆ ನೀಡಬೇಕು. ನಾಗರಿಕರಿಗೆ ದಂಡ ವಿಧಿಸುವ ಬದಲು ಬಿಬಿಎಂಪಿ ಜವಾಬ್ದಾರಿಯುತ ಪ್ರಯತ್ನಗಳನ್ನು ಬೆಂಬಲಿಸಬೇಕಲ್ಲವೇ? ಮತ್ತು ನಮ್ಮ ಸ್ವಂತ ಖಾಸಗಿ ಜಾಗದಲ್ಲಿ ವಾಹನ ನಿಲ್ಲಿಸಿಕೊಂಡರೆ ಇದಕ್ಕೆ ಪಾರ್ಕಿಂಗ್ ಶುಲ್ಕ ಏಕೆ? ಶೂನ್ಯ ಸಮಾಲೋಚನೆ ಮತ್ತು 100 ಪ್ರತಿಶತ ತೆರಿಗೆ ಹೇರಿಕೆಯೊಂದಿಗೆ ನೀವು ನಗರವನ್ನು ನಡೆಸಲು ಸಾಧ್ಯವಿಲ್ಲ. ಬಿಬಿಎಂಪಿ ಈ ಶುಲ್ಕಗಳನ್ನು ಸಂಪೂರ್ಣ ಪಾರದರ್ಶಕತೆಯೊಂದಿಗೆ ಸಮರ್ಥಿಸುವವರೆಗೆ, ನಾವು ಪಾವತಿಸುವುದಿಲ್ಲ. ನಾಗರಿಕರು ಗೌರವಕ್ಕೆ ಅರ್ಹರು, ಅಚ್ಚರಿಯ ತೆರಿಗೆಗಳಿಗಲ್ಲ ಎಂದು ಕಿಡಿಕಾರಿದ್ದಾರೆ.

plea against garbage, parking fee in Bengaluru
ಕಸ ಸಂಗ್ರಹಕ್ಕೂ TAX: ಸರ್ಕಾರದ ಕ್ರಮಕ್ಕೆ BBMP ಸಮರ್ಥನೆ

ಏತನ್ಮಧ್ಯೆ, ಬಿಎನ್‌ಪಿ ಸಂಸ್ಥಾಪಕ ಶ್ರೀಕಾಂತ್ ನರಸಿಂಹನ್ ಮಾತನಾಡಿ, "ನಾವು ಈಗಾಗಲೇ ನಮ್ಮ ಆಸ್ತಿ ತೆರಿಗೆಯನ್ನು ಪಾವತಿಸುತ್ತಿದ್ದೇವೆ. ಆದರೆ ಸದ್ಯಕ್ಕೆ ನಾವು ಹೆಚ್ಚುವರಿ ಶುಲ್ಕವನ್ನು ಪಾವತಿಸುವುದಿಲ್ಲ. ಮೊದಲು ಸರಿಯಾದ ಸಮರ್ಥನೆ ಮತ್ತು ಈ ನಿರ್ಧಾರವನ್ನು ತೆಗೆದುಕೊಳ್ಳುವ ಚುನಾಯಿತ ಮಂಡಳಿ ಇರಲಿ. ಅದರ ನಂತರ, ಪಾವತಿಸಬೇಕೆ ಮತ್ತು ಎಷ್ಟು ಪಾವತಿಸಬೇಕೆಂದು ನಾವು ಯೋಚಿಸಬಹುದು. ಬಿಬಿಎಂಪಿ ಬಜೆಟ್ ಗಣನೀಯವಾಗಿರುವುದರಿಂದ ಮತ್ತು ಘನತ್ಯಾಜ್ಯ ನಿರ್ವಹಣೆಗೆ ಹಂಚಿಕೆ ಸಮಂಜಸವಾಗಿರುವುದರಿಂದ, ಶುಲ್ಕ ಪಾವತಿಯ ಕುರಿತು ಒಮ್ಮತವನ್ನು ಒತ್ತಾಯಿಸಲು ನಾವು ಈ ಅಭಿಯಾನವನ್ನು ಪ್ರಾರಂಭಿಸಿದ್ದೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com