Property Tax: BBMP ಆಸ್ತಿ ತೆರಿಗೆ ಸಂಗ್ರಹ 1,000 ಕೋಟಿ ರೂ ಹೆಚ್ಚಳ!

ಆಸ್ತಿ ತೆರಿಗೆ ಸಂಗ್ರಹ ಸಂಬಂಧ ಮಾಹಿತಿ ಬಿಡುಗಡೆ ಮಾಡಿರುವ ಬಿಬಿಎಂಪಿ, ಈ ಬಾರಿ 4,930 ಕೋಟಿ ತೆರಿಗೆ ಸಂಗ್ರಹ ಮಾಡಲಾಗಿದೆ ಎಂದು ತಿಳಿಸಿದೆ. ಇದು 5,210.47 ಕೋಟಿ ರೂ.ಗಳ ನಿಗದಿತ ಗುರಿಯ ಶೇಕಡಾ 94.62 ರಷ್ಟಿದೆ.
BBMP OFFICE
ಬಿಬಿಎಂಪಿ ಕಚೇರಿ
Updated on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ವರ್ಷ ಕಳೆದ ವರ್ಷಕ್ಕಿಂತ ಬರೋಬ್ಬರಿ ಸಾವಿರ ಕೋಟಿ ರೂಪಾಯಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸಿದೆ.

ಆಸ್ತಿ ತೆರಿಗೆ ಸಂಗ್ರಹ ಸಂಬಂಧ ಮಾಹಿತಿ ಬಿಡುಗಡೆ ಮಾಡಿರುವ ಬಿಬಿಎಂಪಿ, ಈ ಬಾರಿ 4,930 ಕೋಟಿ ತೆರಿಗೆ ಸಂಗ್ರಹ ಮಾಡಲಾಗಿದೆ ಎಂದು ತಿಳಿಸಿದೆ. ಇದು 5,210.47 ಕೋಟಿ ರೂ.ಗಳ ನಿಗದಿತ ಗುರಿಯ ಶೇಕಡಾ 94.62 ರಷ್ಟಿದೆ.

ಹಿಂದಿನ 2023-24ರ ಹಣಕಾಸು ವರ್ಷಕ್ಕೆ ಹೋಲಿಸಿದರೆ 1,000 ಕೋಟಿ ರೂ.ಗಳಷ್ಟು ಹೆಚ್ಚಿನ ತೆರಿಗೆಯನ್ನು ಸಂಗ್ರಹಿಸಿದೆ. ಈ ಮೂಲಕ, ಬಿಬಿಎಂಪಿಯು 2025-26ರ ಹಣಕಾಸು ವರ್ಷದಲ್ಲಿ ಹೆಚ್ಚುವರಿಯಾಗಿ 1,000 ಕೋಟಿ ರೂ.ಗಳಷ್ಟು ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿದೆ.

2023-24ನೇ ಹಣಕಾಸು ವರ್ಷದಲ್ಲಿ ಪಾಲಿಕೆಯು 3,918 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಿದ್ದು, 2024-25ನೇ ಹಣಕಾಸು ವರ್ಷದಲ್ಲಿ ತೆರಿಗೆ ಸಂಗ್ರಹವು 1,000 ಕೋಟಿ ರೂ. ಹೆಚ್ಚಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ಹೇಳಿದ್ದಾರೆ.

ಬಿಬಿಎಂಪಿ ವರದಿ ಪ್ರಕಾರ, ಎಂಟು ವಲಯಗಳ ಪೈಕಿ ಮಹದೇವಪುರ ಹಾಗೂ ಯಲಹಂಕ ವಲಯಗಳಲ್ಲಿ ನೂರಕ್ಕೆ ನೂರರಷ್ಟು ತೆರಿಗೆ ವಸೂಲಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ದಕ್ಷಿಣ ವಲಯವು 769.50 ಕೋಟಿ ರೂ. ಗುರಿಯಲ್ಲಿ 733.65 ಕೋಟಿ ರೂ. ಸಂಗ್ರಹಿಸುವ ಮೂಲಕ ಮೂರನೇ ಸ್ಥಾನದಲ್ಲಿದೆ. ಪೂರ್ವ ವಲಯವು ಶೇ 93.52 ರೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ ಮತ್ತು ದಾಸರಹಳ್ಳಿ ಶೇ 92.72 ರೊಂದಿಗೆ ಐದನೇ ಸ್ಥಾನದಲ್ಲಿದೆ. ಪಶ್ಚಿಮ ವಲಯವು ತೆರಿಗೆ ಸಂಗ್ರಹದಲ್ಲಿ ಶೇ 92.17 ಸಾಧಿಸಿದರೆ, ರಾಜರಾಜೇಶ್ವರಿ ನಗರವು 87.89 ರ ಸಾಧನೆ ಮಾಡಿದೆ. 585.11 ಕೋಟಿ ರೂ. ಗುರಿಯಲ್ಲಿ ಕೇವಲ ಶೇ 83.75 ಮಾತ್ರ ಸಂಗ್ರಹ ಮಾಡುವ ಮೂಲಕ ಬೊಮ್ಮನಹಳ್ಳಿ ಅತ್ಯಂತ ಕಡಿಮೆ ತೆರಿಗೆ ಸಂಗ್ರಹಿಸಿದೆ. ಒಟ್ಟಾರೆಯಾಗಿ ಶೇ 94.62 ರಷ್ಟು ತೆರಿಗೆ ಸಂಗ್ರಹವಾಗಿದೆ.

BBMP OFFICE
BBMP: 'ಕಸ ಸಂಗ್ರಹಣೆ, ರಸ್ತೆ ಬದಿ ಪಾರ್ಕಿಂಗ್ ಗೆ ನಾವು ಹಣ ಕೊಡಲ್ಲ': ಸರ್ಕಾರದ ವಿರುದ್ಧ ನಾಗರೀಕರ ಸಹಿ ಅಭಿಯಾನ!

ತೆರಿಗೆ ಬಾಕಿ ಉಳಿಸಿಕೊಂಡಿರುವವರಿಂದ ವಸೂಲಿ ಮಾಡಲು ಈ ಬಾರಿ ಬಿಬಿಎಂಪಿ ಹಲವು ಕ್ರಮಗಳನ್ನು ಕೈಗೊಂಡಿತ್ತು. ಒನ್-ಟೈಮ್ ಸೆಟ್ಲ್‌ಮೆಂಟ್ (OTS), ಸ್ಥಿರಾಸ್ತಿಗಳನ್ನು ಹರಾಜು ಹಾಕಿ ಮೊತ್ತ ವಸೂಲಿ ಇತ್ಯಾದಿ ನಡೆಗಳನ್ನು ಅನುಸರಿಸಿತ್ತು.

ಬಾಕಿ ಹಾಗೂ ಪ್ರಸ್ತುತ ಸಾಲಿನ ಆಸ್ತಿ ತೆರಿಗೆಯ ವಸೂಲಾತಿಗೆ ಮನೆ- ಮನೆಗಳಿಗೆ ನಿರಂತರವಾಗಿ ಭೇಟಿ ನೀಡಿ ವಸೂಲಿ ಮಾಡಲಾಗಿರುತ್ತದೆ ಎಂದು ಬಿಬಿಎಂಪಿಯ ವಿಶೇಷ ಆಯುಕ್ತರು ಮುನಿಶ್ ಮೌದ್ಗಿಲ್ ಅವರು ತಿಳಿಸಿದ್ದಾರೆ.

ಒಟಿಎಸ್ ಮೂಲಕ ಸುಮಾರು 4 ಲಕ್ಷ ತೆರಿಗೆ ಬಾಕಿದಾರರಿಂದ 1,277 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ. ಒಟ್ಟು 520 ಕೋಟಿ ರೂ.ಗಳ ತೆರಿಗೆ ಮೊತ್ತ ಇನ್ನೂ ಬಾಕಿ ಇದೆ ಎಂದು ಅಧಿಕಾರಿ ಹೇಳಿದ್ದಾರೆ.ಇದೇ ವೇಳೆ ತೆರಿಗೆ ಬಾಕಿದಾರರಿಗೆ ಶೇ. 100 ರಷ್ಟು ದಂಡ ವಿಧಿಸುವುದಾಗಿ ಪಾಲಿಕೆ ಘೋಷಿಸಿದೆ.

ಇದು ಬಾಕಿ ಇರುವ ತೆರಿಗೆ ಮೊತ್ತಕ್ಕೆ ಸಮನಾಗಿರುತ್ತದೆ. ಆಸ್ತಿಗಳನ್ನು ಲಗತ್ತಿಸುವ ಮತ್ತು ಹರಾಜು ಮಾಡುವ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ.

ಇದಲ್ಲದೆ, ಪಾಲಿಕೆ ತೆರಿಗೆ ವಸೂಲಿ ಮಾಡಲು 608 ಆಸ್ತಿಗಳನ್ನು ಹರಾಜಿಗೆ ಪಟ್ಟಿ ಮಾಡಿದ್ದು, ಭಯದಿಂದ, 555 ಮಾಲೀಕರು ತಮ್ಮ ಬಾಕಿಗಳನ್ನು ತೆರವುಗೊಳಿಸಿದ್ದಾರೆಂದು ತಿಳಿದುಬಂದಿದೆ.

555 ಆಸ್ತಿ ಮಾಲೀಕರಿಂದ 18 ಕೋಟಿ ರೂ.ಗಳನ್ನು ವಸೂಲಿ ಮಾಡಲಾಗಿದೆ. ಆದಾಯವನ್ನು ಹೆಚ್ಚಿಸಲು ಬಾಕಿ ಪಾವತಿಸಲು ಅಭಿಯಾನಗಳನ್ನು ನಡೆಸುವುದು ಮತ್ತು ಮಾಲೀಕರಿಗೆ ನೋಟಿಸ್ ಕಳುಹಿಸುವಂತಹ ಕ್ರಮಗಳನ್ನು ಮುಂದುವರಿಸುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com