
ಬೆಂಗಳೂರು: ಎಸ್‌ಜೆಪಿ ರಸ್ತೆಯಲ್ಲಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ 11 ವರ್ಷದ ಬಾಲಕನ ಸಾವನ್ನಪ್ಪಿದ್ದು, ಇದರ ಬೆನ್ನಲ್ಲೇ ಬಿಎಂಟಿಸಿ ಸ್ಪಷ್ಟನೆ ನೀಡಿದೆ.
ಅಪಘಾತದಲ್ಲಿ ಬಸ್ ಚಾಲಕನ ಯಾವುದೇ ತಪ್ಪಿಲ್ಲ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸೋಮವಾರ ಸ್ಪಷ್ಟಪಡಿಸಿದೆ.
ಅಪಘಾತದ ಸಮಯದಲ್ಲಿ ಬಸ್ ಚಾಲಕ ಸಂತೋಷ್ ಮತ್ತು ಕಂಡಕ್ಟರ್ ಭಾಸ್ಕರ್ ಕರ್ತವ್ಯದಲ್ಲಿದ್ದರು, 11 ವರ್ಷದ ಮಗು ಸೇರಿದಂತೆ ಮೂವರು ಜನರನ್ನು ಹೊತ್ತೊಯ್ಯುತ್ತಿದ್ದ ದ್ವಿಚಕ್ರ ವಾಹನವು ಎಡಭಾಗದಿಂದ ಬಸ್ ಅನ್ನು ಹಿಂದಿಕ್ಕಲು ಪ್ರಯತ್ನಿಸಿದೆ ಎಂದು ಸಿಸಿಟಿವಿ ಪರಿಶೀಲನೆಯಿಂದ ತಿಳಿದುಬಂದಿದೆ. ದ್ವಿಚಕ್ರ ವಾಹನದ ಸವಾರ ಹಠಾತ್ತನೆ ಬ್ರೇಕ್ ಹಾಕಿದ್ದು, ಸ್ಕಿಡ್ ಆಗಿ ಎಲ್ಲರೂ ಕೆಳಗೆ ಬಿದ್ದಿದ್ದಾರೆ. ಬಾಲಕ ಬಸ್ಸಿನ ಹಿಂದಿನ ಚಕ್ರಕ್ಕೆ ಸಿಲುಕಿದ್ದಾನೆ. ಗಾಯಾಳುಗಳನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೂ ಬಾಲಕ ಸಾವನ್ನಪ್ಪಿದ್ದಾನೆಂದು ಹೇಳಿದೆ.
ಹೆಚ್ಚಿನ ತನಿಖೆಗಾಗಿ ಘಟನೆಗೆ ಸಂಬಂಧಿಸಿದ ವಾಹನವನ್ನು ಪ್ರಸ್ತುತ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ತಿಳಿಸಿದೆ.
Advertisement