

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ನಾಲ್ಕನೇ ಮಹಡಿಯಿಂದ ಸಿಮೆಂಟ್ ಇಟ್ಟಿಗೆಗಳು ಸಿಮೆಂಟ್ ಶೀಟ್ ಶೆಡ್ ಮೇಲೆ ಬಿದ್ದು ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಮೃತ ಮಗುವನ್ನು ಮನುಶ್ರೀ ಎಂದು ಗುರುತಿಸಲಾಗಿದೆ.
ತಾಯಿ ಮಮತಾ (30) ಮತ್ತು ಇಬ್ಬರು ಮಕ್ಕಳಾದ ಶ್ರೀಯಾನ್ (6) ಮತ್ತು ಶೇಖರ್ (5) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಟ್ಟಡ ನಿರ್ಮಾಣಕ್ಕಾಗಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಭೋರಗಿ ಗ್ರಾಮದವನ್ನು ಕರೆತರಲಾಗಿತ್ತು. ಅವರಿಗಾಗಿ ನಿರ್ಮಿಸಲಾಗಿದ್ದ ಸಿಮೆಂಟ್ ಶೀಟ್ ಶೆಡ್ ಮೇಲೆ ಬಿದ್ದಿವೆ. ಮಧ್ಯಾಹ್ನ 3 ರಿಂದ 3.30ರ ನಡುವೆ ಈ ಘಟನೆ ಸಂಭವಿಸಿತ್ತು.
ಶ್ರೀನಿವಾಸುಲು ಎಂಬ ವ್ಯಕ್ತಿ ಸಾಕಷ್ಟು ಸುರಕ್ಷತಾ ಕ್ರಮಗಳಿಲ್ಲದೆ ನಿರ್ಮಾಣ ಕಾರ್ಯಗಳನ್ನು ನಡೆಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಉಪ ಪೊಲೀಸ್ ಆಯುಕ್ತ (ವೈಟ್‌ಫೀಲ್ಡ್) ಕೆ. ಪರಶುರಾಮ್ ಹೇಳಿದ್ದಾರೆ. ಈ ಸಂಬಂಧ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement