ಬೆಂಗಳೂರು: ನಕಲಿ ಪೊಲೀಸರ ಸೋಗಿನಲ್ಲಿ 21 ಗ್ರಾಂ ಚಿನ್ನಾಭರಣ-ನಗದು ದರೋಡೆ

ಫೆಬ್ರವರಿ 6 ರಂದು ರಾತ್ರಿ 8.30 ರ ಸುಮಾರಿಗೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅದೇ ದಿನ ಸಂಜೆ ಮತ್ತೊಂದು ದರೋಡೆ ಪ್ರಕರಣ ಅದೇ ಪ್ರದೇಶದಲ್ಲಿ ವರದಿಯಾಗಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ರಸ್ತೆ ಪಕ್ಕಕ್ಕೆ ಕಾರು ನಿಲ್ಲಿಸಿ ಮಾತನಾಡುತ್ತಿದ್ದ ದಂಪತಿಗಳ ಬಳಿಗೆ ನಕಲಿ ಪೊಲೀಸ್ ವೇಷದಲ್ಲಿ ಬಂದಿರುವ ದುಷ್ಕರ್ಮಿಯೊಬ್ಬ ಹಲ್ಲೆ ನಡೆಸಿ, ದರೋಡೆ ಮಾಡಿರುವ ಘಟನೆಯೊಂದು ಬಿಡದಿಯ ದಾಸಪ್ಪನದೊಡ್ಡಿ ಬಳಿ ನಡೆದಿದೆ.

ಫೆಬ್ರವರಿ 6 ರಂದು ರಾತ್ರಿ 8.30 ರ ಸುಮಾರಿಗೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅದೇ ದಿನ ಸಂಜೆ ಮತ್ತೊಂದು ದರೋಡೆ ಪ್ರಕರಣ ಅದೇ ಪ್ರದೇಶದಲ್ಲಿ ವರದಿಯಾಗಿತ್ತು.

ಬಿಡದಿಯ ಮೇದನಹಳ್ಳಿ ನಿವಾಸಿ ಜಿ. ನಾಗೇಶ್ ಎಂಬುವವರು ಈ ಸಂಬಂಧ ಫೆಬ್ರವರಿ 13 ರಂದು ಪೊಲೀಸರಿಗೆ ದೂರು ನೀಡಿದ್ದರು.

ಚನ್ನಪಟ್ಟಣದ ಮಾಲೂರಿನಲ್ಲಿ ಕೆಲಸ ಮುಗಿಸಿ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದ ನಾಗೇಶ್ ಎಂಬುವವರ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಲಾಗಿತ್ತು.

ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿರುವ ಜಯಪುರ ಗೇಟ್ ಬಳಿ ಪೊಲೀಸರ ಸೋಗಿನಲ್ಲಿ ಕೈಕೋಳ ಹಿಡಿದುಕೊಂಡು ದ್ವಿಚಕ್ರ ವಾಹನದಲ್ಲಿ ಬಂದಿರುವ ದುಷ್ಕರ್ಮಿ, ಪರಿಶೀಲನೆ ನೆಪದಲ್ಲಿ ಕಾರು ನಿಲ್ಲುವಂತೆ ಮಾಡಿದ್ದೇನೆ. ಬಾಗಿಲು ತೆಗೆದಾಗ ಬೆದರಿಸಿದ. ಹಲ್ಲೆ ನಡೆಸಿ ಸುಮಾರು 21 ಗ್ರಾಂ ಚಿನ್ನದ ಆಭರಣ, ನಗದು ದೋಚಿ ಸ್ಥಳದಿಂದ ಪರಾರಿಯಾಗಿದ್ದ. ಘಟನೆಯಲ್ಲಿ ನಾಗೇಶ್ ಅವರ ಕಾಲು ಮುರಿತವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಂಗ್ರಹ ಚಿತ್ರ
ಬೆಂಗಳೂರು: ಪೊಲೀಸರ ಸೋಗಿನಲ್ಲಿ BWSSB ಗುತ್ತಿಗೆ ನೌಕರನ ಮೇಲೆ ಹಲ್ಲೆ, ದರೋಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com