ಬಸ್​ ಟಿಕೆಟ್​ ದರ ಏರಿಕೆ ಬೆನ್ನಲ್ಲೇ ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಆಗ್ರಹ

ಶನಿವಾರ ಮಧ್ಯರಾತ್ರಿಯಿಂದಲೇ ಬಸ್ ದರ ಏರಿಕೆ ಜಾರಿಗೆ ಬಂದಿದ್ದು, ಆಟೋ ಚಾಲಕರೂ ಕೂಡ ಪ್ರಯಾಣಿಕರಿಗೆ ಹೆಚ್ಚಿನ ಶುಲ್ಕ ವಿಧಿಸಲು ಶುರು ಮಾಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಆಟೋ(ಸಾಂದರ್ಭಿಕ ಚಿತ್ರ)
ಆಟೋ(ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಸರ್ಕಾರಿ ಬಸ್ ದರ ಶೇ.15 ರಷ್ಟು ಏರಿಕೆಯಾಗಿದ್ದು, ಇದರ ಬೆನ್ನಲ್ಲೇ ಆಟೋ ಪ್ರಯಾಣ ಬೆಲೆ ಹೆಚ್ಚಳಕ್ಕೂ ಆಗ್ರಹಗಳು ವ್ಯಕ್ತವಾಗುತ್ತಿವೆ.

ಶನಿವಾರ ಮಧ್ಯರಾತ್ರಿಯಿಂದಲೇ ಬಸ್ ದರ ಏರಿಕೆ ಜಾರಿಗೆ ಬಂದಿದ್ದು, ಆಟೋ ಚಾಲಕರೂ ಕೂಡ ಪ್ರಯಾಣಿಕರಿಗೆ ಹೆಚ್ಚಿನ ಶುಲ್ಕ ವಿಧಿಸಲು ಶುರು ಮಾಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ನಗರದಲ್ಲಿ ನಿಯಮಿತವಾಗಿ ಆಟೋ ಬಳಕೆ ಮಾಡುವ ವ್ಯಕ್ತಿಯೊಬ್ಬರು ಮಾತನಾಡಿ, ನಗರದಲ್ಲಿ ಕಾರ್ಯನಿರ್ವಹಿಸುವ ಅನೇಕ ಆಟೋಗಳು ಮೀಟರ್‌ ಅನ್ವಯದಂತೆ ಶುಲ್ಕ ಪಡೆಯಲು ನಿರಾಕರಿಸುತ್ತಿದ್ದಾರೆ. ಇದರಿಂದ ಜನರಿಗೆ ಆಟೋ ಸಿಗುವುದು ಕಷ್ಟವಾಗುತ್ತಿದೆ. ಬಸ್ ದರ ಏರಿಕೆಯೊಂದಿಗೆ ಇದು ಜನರಿಗಾಗುತ್ತಿರುವ ದೊಡ್ಡ ಹೊಡೆತವಾಗಿದೆ. ಅವರ ಬೇಡಿಕೆಯಂತೆ ಹಣ ನೀಡಲು ಒಪ್ಪಿಕೊಂಡರೆ ಮಾತ್ರ ಆಟೋಗಳು ಬರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆಟೋ ಚಾಲಕ ಪ್ರಶಾಂತ್ ಎಂಬುವವರು ಮಾತನಾಡಿ,. ಆಟೋ ದರಗಳು ಒಂದೇ ಆಗಿದ್ದರೂ, ನಿರ್ವಹಣಾ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. ಶಿವಮೊಗ್ಗ, ಮಂಗಳೂರು ಮತ್ತು ಉಡುಪಿಯಂತಹ ಟೈಯರ್ 2 ನಗರಗಳಲ್ಲಿ 2023 ರಲ್ಲಿ ಆಟೋ ದರಗಳನ್ನು ಪರಿಷ್ಕರಿಸಲಾಗಿದೆ. ಆದರೆ ಜೀವನ ವೆಚ್ಚವು ತುಂಬಾ ಹೆಚ್ಚಿರುವ ಬೆಂಗಳೂರಿನಲ್ಲಿ ಮಾತ್ರ ದರಗಳನ್ನು ಹೆಚ್ಚಿಸಿಲ್ಲ. ಈಗಿರುವ ದರಗಳೊಂದಿಗೆ ನಾವು ನಮ್ಮ ಆಟೋಗಳನ್ನು ನಿರ್ವಹಿಸುವುದಾದರೂ ಹೇಗೆ? ಸರ್ಕಾರ ಶೀಘ್ರದಲ್ಲೇ ದರಗಳನ್ನು ಪರಿಷ್ಕರಿಸಬೇಕೆಂದು ಆಗ್ರಹಿಸಿದ್ದಾರೆ.

ಆಟೋ(ಸಾಂದರ್ಭಿಕ ಚಿತ್ರ)
ಬಸ್ ಪ್ರಯಾಣ ದರ ಏರಿಕೆ: ಪರಿಷ್ಕೃತ ಬೆಲೆ ಮಧ್ಯರಾತ್ರಿಯಿಂದಲೇ ಜಾರಿ

ಏತನ್ಮಧ್ಯೆ, ಆಟೋರಿಕ್ಷಾ ಚಾಲಕರ ಒಕ್ಕೂಟ (ARDU), ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟ ಮತ್ತು ಇತರ ಆಟೋ ಒಕ್ಕೂಟಗಳು ಆಟೋ ದರಗಳನ್ನು ಪರಿಷ್ಕರಿಸುವಂತೆ ಸಾರಿಗೆ ಇಲಾಖೆಯನ್ನು ಒತ್ತಾಯಿಸಲು ಮುಂದಾಗಿವೆ.

ಆಟೋರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರ ಮೂರ್ತಿಯವರು ಮಾತನಾಡಿ,. ಬಸ್ ದರ ಹೆಚ್ಚಳದ ನಂತರ ಆಟೋಗಳು ಹೆಚ್ಚಿನ ಹಣವನ್ನು ಬೇಡಿಕೆ ಇಡುತ್ತಿರುವುದು ನಿಜ ಒಪ್ಪಿಕೊಂಡಿದ್ದಾರೆ.

ಪ್ರಸ್ತುತ ದರದ ಅಡಿಯಲ್ಲಿ ಕಾರ್ಯನಿರ್ವಹಿಸಲು ಚಾಲಕರು ಹೆಣಗಾಡುತ್ತಿದ್ದಾರೆ. ದರವನ್ನು ಪರಿಷ್ಕರಿಸಿ ಸರ್ಕಾರವನ್ನು ಪದೇ ಪದೇ ವಿನಂತಿಸುತ್ತಲೇ ಬಂದಿದ್ದೇವೆ. ಆದರೆ, ಸರ್ಕಾರ ಗಮನ ಕೊಡುತ್ತಿಲ್ಲ. ಕನಿಷ್ಠ ಮೀಟರ್ ದರವನ್ನು ಮೊದಲ ಎರಡು ಕಿಲೋಮೀಟರ್‌ಗಳಿಗೆ ಈಗಿರುವ ಕಿ.ಮೀ.ಗೆ 30 ರೂ.ನಿಂದ 40 ರೂ.ಗೆ ಪರಿಷ್ಕರಿಸಬೇಕು. ನಂತರದ ಪ್ರತಿ ಕಿಲೋಮೀಟರ್‌ಗೆ ಪ್ರತಿ ಕಿಲೋಮೀಟರ್‌ಗೆ 15 ರೂ.ನಿಂದ 20 ರೂ.ಗೆ ಪರಿಷ್ಕರಿಸಬೇಕು ಎಂದು ಹೇಳಿದ್ದಾರೆ.

ಡಿಸೆಂಬರ್‌ನಲ್ಲಿ ಶುಲ್ಕ ಪರಿಷ್ಕರಣೆ ಕುರಿತು ಕರೆಯಲಾಗಿದ್ದ ಸಭೆಯನ್ನು ಮುಂದೂಡಲಾಗಿದ್ದು, ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com