
ಬೆಂಗಳೂರು: ಕುಟುಂಬ ಸದಸ್ಯರಿಗೆ ಅನುಕೂಲವಾಗಲಿ ಎಂದು ಮನೆಯಿಂದ ಹೊರಹೋಗುವಾಗ ಮನೆ ಬೀಗದ ಕೀಯನ್ನು ಯಾರಿಗೂ ಕಾಣುವುದಿಲ್ಲ ಎಂದು ಶೂ ರ್ಯಾಕ್, ಕಿಟಕಿ, ಹೂವಿನ ಕುಂಡದಲ್ಲಿ ಕೆಲವರು ಬಚ್ಚಿಡುತ್ತಾರೆ. ಇದರಿಂದ ಮನೆಯ ಇತರ ಸದಸ್ಯರಿಗೆ ತೊಂದರೆಯಾಗುವುದಿಲ್ಲ ಎಂಬ ಲೆಕ್ಕಾಚಾರ. ಅಷ್ಟೇ ಅಲ್ಲದೇ ಈ ರಹಸ್ಯ ತಾಣಗಳು ಮನೆಯವರಿಗೆ ಮಾತ್ರ ತಿಳಿದಿರುತ್ತದೆ ಎಂಬ ಭಾವನೆ ನಿಮಗಿದ್ದರೆ, ಆ ಆಲೋಚನೆ ತಪ್ಪು.
ಕಾರಣ ಅಂತಹ ಜಾಗಗಳನ್ನು ನೋಡಿ ಮನೆಗೆ ಕನ್ನ ಹಾಕುವ ಕಳ್ಳರನ್ನು ನಗರ ಪೊಲೀಸರು ಬಂಧನಕ್ಕೊಳಪಡಸಿದ್ದಾರೆ. ಸಾಮಾನ್ಯವಾಗಿ ಮನೆಗಳಲ್ಲಿ ಬಳಸುವ ಇಂತಹ ರಹಸ್ಯ ತಂತ್ರವನ್ನೇ ಬಂಡಾವಳ ಮಾಡಿಕೊಳ್ಳುತ್ತಿರುವ ಕಳ್ಳರು, ಹಾಡುಹಗಲೇ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ.
ನಗರದಲ್ಲಿ ವರದಿಯಾಗಿರುವ ಕಳ್ಳತನ ಪ್ರಕರಣಗಳಿಗೆ ಸಂಬಂದಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತ ಆರೋಪಿಯನ್ನು ಸಾಫ್ಟ್‌ವೇರ್ ಇಂಜಿನಿಯರ್ ಕೆ ಮೂರ್ತಿ, ಹೆಣ್ಣೂರು ನಿವಾಸಿ ಜಯಂತಿ ಎಂದು ಗುರ್ತಿಸಲಾಗಿದೆ.
ಬೊಮ್ಮನಹಳ್ಳಿ ನಿವಾಸಿಯಾಗಿರುವ ಮೂರ್ತಿ ಬಿಸಿಎ ಪದವಿ ಪಡೆದಿದ್ದು, ಎರಡು ವರ್ಷಗಳಿಂದ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ, ಆನ್‌ಲೈನ್ ಜೂಜಿನ ಚಟಕ್ಕೆ ಬಿದ್ದದ್ದ ಆರೋಪಿ, ತನ್ನ ಎಲ್ಲಾ ಗಳಿಕೆಯನ್ನು ಕಳೆದುಕೊಳ್ಳಲು ಪ್ರಾರಂಭಿಸಿದ್ದ. ಬಳಿಕ ಕೆಲಸ ಬಿಟ್ಟು ಕಳ್ಳತನ ಮಾಡತೊಡಗಿದ. ಇದೀಗ ಈತನನ್ನು ಬಂಧಿಸಿದ ಬೇಗೂರು ಪೊಲೀಸರು, ಆತನಿಂದ 18.53 ಲಕ್ಷ ರೂ ಮೌಲ್ಯದ ಕದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಒಟ್ಟು ಎಂಟು ಪ್ರಕರಣಗಳಲ್ಲಿ ಬೇಕಾಗಿದ್ದ, ಈ ಪೈಕಿ ಆರು ಪ್ರಕರಣಗಳು ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತು ಉಳಿದ ಎರಡು ಪ್ರಕರಣಗಳು ಸೂರ್ಯ ನಗರ ಪೊಲೀಸ್ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ, ಆಭರಣಗಳನ್ನು ಚಿನ್ನದ ಸಾಲ ಸಂಸ್ಥೆಗಳಲ್ಲಿ ಒತ್ತೆ ಇಡುತ್ತಿದ್ದ. ಇದೀಗ ಗಿರವಿ ಇಟ್ಟಿದ್ದ ಸಂಸ್ಥೆಗಳಿಂದ ಪೊಲೀಸರು ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಬಾಡಿಗೆಗೆ ಮನೆ ಬೇಕಿದೆ ಎಂದು ಕೊಂಡ ಬೀಗ ಹಾಕದ ಮನೆಗಳನ್ನು ಹುಡುಕುತ್ತಿದ್ದ. ಶೂರ್ಯಾಕ್, ಹೂವಿನ ಕುಂಡ ಅಥವಾ ಕಿಟಕಿಗಳಲ್ಲಿ ಕೀಲಿ ಸಿಕ್ಕರೆ, ಮನೆ ಒಳಗೆ ನುಗ್ಗಿ, ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ. ನಂತರ ಬೀಗ ಎಲ್ಲಿತ್ತೋ ಅಲ್ಲಿಯೇ ಇಟ್ಟು, ಸ್ಥಳದಿಂದ ಪರಾರಿಯಾಗುತ್ತಿದ್ದ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಹೆಣ್ಣೂರು ನಿವಾಸಿ 33 ವರ್ಷದ ಜಯಂತಿ ಎಂಬಾಕೆಯನ್ನು ಹೆಣ್ಣೂರು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಇಬ್ಬರಿಂದ ಸುಮಾರು 7.8 ಲಕ್ಷ ಮೌಲ್ಯದ 110 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
31 ಮನೆ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳು ಬೇಕಾಗಿದ್ದರು. ನಾಲ್ಕು ಮಕ್ಕಳ ತಾಯಿಯಾದ ಜಯಂತಿ ಅವರಿಗೆ ಪತಿಯಿಂದ ಬೆಂಬಲ ಸಿಗದ ಕಾರಣ ಮಕ್ಕಳ ನೋಡಿಕೊಳ್ಳುವುದು ಕಷ್ಟವಾಗಿತ್ತು. ಹಣ್ಣು ಮಾರುತ್ತಾ ಜೀವನ ಸಾಗಿಸುತ್ತಿದ್ದ ಈಕೆಗೆ, ಸಂಪಾದನೆ ಕಡಿಮೆಯಾದ ಕಾರಣ ಕಳ್ಳತನಕ್ಕಿಳಿದಿದ್ದಳು ಎಂದು ತಿಳಿದುಬಂದಿದೆ.
ಹಣ್ಣು ಮಾರುವ ನೆಪದಲ್ಲಿ ತಳ್ಳಗಾಡ ಹಿಡಿದು ರಸ್ತೆ ರಸ್ತೆಗಳಲ್ಲ ತಿರುಗಾಡುತ್ತ, ಬೀಗ ಹಾಕಿದ ಮನೆಗಳನ್ನು ಪತ್ತೆ ಮಾಡುತ್ತಿದ್ದಳು. ಬಳಿಕ ಮನೆ ಬಳಿ ಹೋಗಿ ಬೀಗೆ ಇದೆಯೇ ಎಂದು ಪರಿಶೀಲಿಸುತ್ತಿದ್ದಳು. ಬಳಿಕೆ ಮನೆಯೊಳಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದಳು. ಕದ್ದ ಚಿನ್ನಾಭರಣಗಳನ್ನು ಆಭರಣ ಮಳಿಗೆಗಳಲ್ಲಿ ಮಾರಾಟ ಮಾಡುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ತನಿಖೆ ಮುಂದುವರೆದಿದೆ.
Advertisement