ನಮ್ಮ ಕ್ಲಿನಿಕ್: ಉಚಿತ ವೈದ್ಯಕೀಯ ಸೇವೆಯಿದ್ದರೂ ಜನತೆ ಹಿಂದೇಟು, ಜಾಗೃತಿ ಮೂಡಿಸಲು BBMP ಮುಂದು..!

ನಗರದಲ್ಲಿ ಒಟ್ಟು 225 ಬಿಬಿಎಂಪಿ ವಾರ್ಡ್ ಗಳಿದ್ದು, ಪ್ರತಿ ವಾರ್ಡ್ ನಲ್ಲಿಯೂ ಒಂದೊಂದು ನಮ್ಮ ಕ್ಲಿನಿಕ್ ಗಳಿವೆ.
ನಮ್ಮ ಕ್ಲಿನಿಕ್
ನಮ್ಮ ಕ್ಲಿನಿಕ್
Updated on

ಬೆಂಗಳೂರು: ನಗರದ ಜನತೆಗೆ ಉಚಿತ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ ನಗರದಲ್ಲಿ ನಮ್ಮ ಕ್ಲಿನಿಕ್ ಗಳನ್ನು ಆರಂಭ ಮಾಡಿದ್ದರೂ, ಸೌಲಭ್ಯ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನರದಲ್ಲಿ ಜಾಗೃತಿ ಮೂಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ.

ನಗರದಲ್ಲಿ ಒಟ್ಟು 225 ಬಿಬಿಎಂಪಿ ವಾರ್ಡ್ ಗಳಿದ್ದು, ಪ್ರತಿ ವಾರ್ಡ್ ನಲ್ಲಿಯೂ ಒಂದೊಂದು ನಮ್ಮ ಕ್ಲಿನಿಕ್ ಗಳಿವೆ. ನಮ್ಮ ಕ್ಲಿನಿಕ್ ಗಳ ವೈದ್ಯರು ಬಿಬಿಎಂಪಿ ಸಿಬ್ಬಂದಿಗಳೊಂದಿಗೆ ಆಯಾ ವಾರ್ಡ್ ಗಳಲ್ಲಿರುವ ಉದ್ಯಾನವನಗಳು, ಶಾಲಾ-ಕಾಲೇಜುಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ, ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿ ಆರೋಗ್ಯ ಮತ್ತು ಪಶು ಸಂಗೋಪನೆ ವಿಶೇಷ ಆಯುಕ್ತ ಸುರಲ್ಕರ್ ವಿಕಾಸ್ ಅವರು ಮಾತನಾಡಿ, ನಮ್ಮ ಕ್ಲಿನಿಕ್ ಗಳಿಗೆ ಪ್ರಸ್ತುತ 30-40 ಜನರು ಭೇಟಿ ನೀಡುತ್ತಿದ್ದಾರೆ. ಈ ಸಂಖ್ಯೆ ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ನಮ್ಮ ಕ್ಲಿನಿಕ್ ಗಳು ಆರಂಭವಾದಾಗ ವೈದ್ಯರು ಹಾಗೂ ಸಲಕರಣೆಗಳ ಕೊರತೆ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಈ ಸಮಸ್ಯೆಯನ್ನು ಪರಿಹರಿಸಲಾಗಿದೆ. ಇದೀಗ ವೈದ್ಯರ ಕೊರತೆ ಕೂಡ ಇಲ್ಲ ಎಂದು ತಿಳಿಸಿದರು.

ನಮ್ಮ ಕ್ಲಿನಿಕ್
ಬೆಂಗಳೂರು: 29 ನಮ್ಮ ಕ್ಲಿನಿಕ್ ಗಳು ರಾತ್ರಿ 8 ಗಂಟೆವರೆಗೂ ಓಪನ್​!

ನಮ್ಮ ಕ್ಲಿನಿಕ್ ಗಳಿಗೆ ವೈದ್ಯರೇ ಪ್ರಮುಖವಾದವರು. ಇದೀಗ ಅವರೇ ನಮ್ಮ ಕ್ಲಿನಿಕ್ ಗಳ ಬಗಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ. ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವುಗಳನ್ನು ತಡೆಗಟ್ಟಲು ಕಿರುಚಿತ್ರಗಳನ್ನು ಪ್ರದರ್ಶಿಸುತ್ತಿದ್ದಾರೆ. ತಮ್ಮ ತಮ್ಮ ವಾರ್ಡ್ ಗಳಲ್ಲಿರುವ ಸಾರ್ವಜನಿಕ ಪ್ರದೇಶಗಳಿಗೆ ಭೇಟಿ ನೀಡಿ, ವಿವಿಧ ಕಾಯಿಲೆಗಳು ಮತ್ತು ಚಿಕಿತ್ಸೆಗಳ ಬಗ್ಗೆ ಜನರೊಂದಿಗೆ ಮಾತನಾಡುತ್ತಾರೆ. ಬೀದಿ ನಾಟಕಗಳನ್ನು ನಡೆಸುತ್ತಾರೆ. ಮೊಬೈಲ್ ವಾಹನಗಳು ಮೂಲಕ ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್ ಸೇವೆಗಳ ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಡಿಸೆಂಬರ್ ನಲ್ಲಿ ಈ ಜಾಗೃತಿ ಅಭಿಯಾನ ಆರಂಭವಾಗಿದ್ದು, ಮಾರ್ಚ್ ವರೆಗೂ ಮುಂದುವರೆಯುತ್ತದೆ. ಜನರಿಗೆ ನಮ್ಮ ಕ್ಲಿನಿಕ್ ಬಗ್ಗೆ ತಿಳಿಯುವವರೆಗೂ ಈ ಅಭಿಯಾನ ಮುಂದುವರೆಸಲಾಗುವುದು ಎಂದರು .

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com