ರೌಡಿ ಶೀಟರ್ ಗುಣಶೇಖರ್ ಹತ್ಯೆ ಪ್ರಕರಣ: ಜಿಮ್ ಟ್ರೈನರ್ ಬಂಧನ

ಜ.10ರಂದು ಹಣಕಾಸು ವಿಚಾರಕ್ಕೆ ಮಾತುಕತೆ ನೆಪದಲ್ಲಿ ಯಲಹಂಕದ ಪ್ರೆಸ್ಟೀಜ್ ಅಪಾರ್ಟ್'ಮೆಂಟ್'ಗೆ ಗುಣಶೇಖರ್ ನನ್ನು ಕರೆಸಿ ಆರೋಪಿ ಹತ್ಯೆ ಮಾಡಿದ್ದ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಪ್ರೆಸ್ಟೀಜ್ ಅಪಾರ್ಟ್'ಮೆಂಟ್ ನಲ್ಲಿ ನಡೆದಿದ್ದ ರೌಡಿ ಶೀಟರ್ ಗುಣಶೇಖರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ. ಆತನ ಸ್ನೇಹಿತ ಹಾಗೂ ಜಿಮ್ ಟ್ರೈನರ್'ವೊಬ್ಬನನ್ನು ಬಾಗಲೂರು ಪೊಲೀಸರು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.

ಭಾರತಿ ನಗರದ ಬ್ರಿಜೇಶ್ ಬಂಧಿತ ಆರೋಪಿ. ಮೂರು ವರ್ಷಗಳ ಹಿಂದೆ ಈತನನ್ನೂ ರೌಡಿಶೀಟರ್ ಪಟ್ಟಿಗೆ ಸೇರಿಸಲಾಗಿತ್ತು. ಮೃತ ಗುಣಶೇಖರ್ (30) ಬಾಗಲೂರು ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ.

ಜ.10ರಂದು ಹಣಕಾಸು ವಿಚಾರಕ್ಕೆ ಮಾತುಕತೆ ನೆಪದಲ್ಲಿ ಯಲಹಂಕದ ಪ್ರೆಸ್ಟೀಜ್ ಅಪಾರ್ಟ್'ಮೆಂಟ್'ಗೆ ಗುಣಶೇಖರ್ ನನ್ನು ಕರೆಸಿ ಆರೋಪಿ ಹತ್ಯೆ ಮಾಡಿದ್ದ. ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪಂಜಾಬ್ ರಾಜ್ಯದ ಅಮೃತಸರ ನಗರದಲ್ಲಿ ಬಂಧಿಸಿ ಪೊಲೀಸರು ಕರೆತಂದಿದ್ದಾರೆ.

ಬಂಧಿತ ಆರೋಪಿ ಬ್ರಿಜೇಶ್ ಪಂಜಾಬ್‌ನಿಂದ ನಕಲಿ ಚಿನ್ನವನ್ನು ಕಳ್ಳಸಾಗಣೆ ಮಾಡಿ ಗುಣಶೇಖರ್ ಮೂಲಕ ಬೆಂಗಳೂರಿನಲ್ಲಿ ಮಾರಾಟ ಮಾಡಿಗ್ಗ, ಬ್ರಿಜೇಶ್ ನಿಂದ ಚಿನ್ನ ಪಡೆದಿದ್ದ ಗುಣಶೇಖರ್ ತನ್ನ ಸಂಬಂಧಿಯ ಮೂಲಕ ಚಿನ್ನವನ್ನು ಫೈನಾನ್ಸ್ ಕಂಪನಿಯೊಂದರಲ್ಲಿ ಗಿರವಿ ಇಟ್ಟಿದ್ದ. ಈ ನಡುವೆ ಚಿನ್ನ ನಕಲಿ ಎಂದು ತಿಳಿದಾಗ ಹಣ ಹಿಂತಿರುಗಿಸುವಂತೆ ಒತ್ತಾಯಿಸಿದ್ದ, ಅಲ್ಲದೆ, ದೂರು ನೀಡುವುದಾಗಿಯೂ ತಿಳಿಸಿದ್ದ. ಇದಲ್ಲದೆ. ಇತರರೊಂದಿಗೂ ಈ ಬಗ್ಗೆ ಮಾತನಾಡಲು ಆರಂಭಿಸಿದ್ದ. ಇದರಿಂದ ಬ್ರಿಜೇಶ್ ಕೆಂಡಾಮಂಡಲಗೊಂಡಿದ್ದು, ಜನವರಿ 10ರಂದು ಹಣ ನೀಡುತ್ತೇನೆಂದು ಗುಣಶೇಖರ್‌ಗೆ ಕರೆ ಮಾಡಿ, ಬಾಗಲೂರಿನ ಅಪಾರ್ಟ್‌ಮೆಂಟ್‌ಗೆ ಬರುವಂತೆ ತಿಳಿಸಿದ್ದಾನೆ.

ಸಂಗ್ರಹ ಚಿತ್ರ
ಮೈಸೂರು: ಮಗನ ಎದುರೇ ಪೆಟ್ರೋಲ್‌ ಸುರಿದು ಪತ್ನಿಗೆ ಬೆಂಕಿ ಹಚ್ಚಿದ KSRTC ಮೆಕ್ಯಾನಿಕ್‌

ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಗುಣಶೇಖರ್ ಮೇಲೆ ಎರಡು ಬಾರಿ ಗುಂಡು ಹಾರಿಸಿದ್ದಾನೆ. ಆದರೆ, ಗುಂಡೇಟಿನಿದಂ ಆತ ತಪ್ಪಿಸಿಕೊಂಡಿದ್ದು, ಬಳಿಕ ತಲೆಗೆ ಗುಂಡು ಹೊಡೆದಿದ್ದಾನೆ. ಈ ಪೆಟ್ಟಿನಿಂದ ಕೆಳಗೆ ಬಿದ್ದಾತನ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ತನ್ನ ಸಹಚರನನ್ನು ಕರೆಸಿಕೊಂಡಿದ್ದ ಆರೋಪಿ, ಕಾರಿನಲ್ಲಿ ಮೃತದೇಹವನ್ನು ಕೊಂಡೊಯ್ಯುವಂತೆ ತಿಳಿಸಿದ್ದಾನೆ. ಬಳಿಕ ಆರೋಪಿಗಳು ತಮಿಳುನಾಡಿನ ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಸುರಿದು ಮೃತದೇಹವನ್ನು ಸುಟ್ಟು ಹಾಕಿದ್ದಾರೆ.

ಈ ನಡುವೆ ಗುಣಶೇಖರ್ ಅವರ ಪತ್ನಿ ಜನವರಿ 12 ರಂದು ಬಾಗಲೂರು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದಾರೆ, ಹುಡುಕಾಟ ಆರಂಭಿಸಿದ ಪೊಲೀಸರಿಗೆ ಗುಣಶೇಖರ್ ಅವರ ಕೊನೆಯ ಮೊಬೈಲ್ ನೆಟ್ ವರ್ಕ್ ಅಪಾರ್ಟ್ಮೆಂಟ್ ಬಳಿ ಪತ್ತೆಯಾಗಿರುವುದು ಕಂಡು ಬಂದಿದೆ. ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ದೃಶ್ಯಾವಳಿಗಳಲ್ಲಿ ಬ್ರಿಜೇಶ್ ಮತ್ತು ಅವನ ಸಹಚರರು ಶವವನ್ನು ಬೆಡ್‌ಶೀಟ್‌ನಲ್ಲಿ ಮುಚ್ಚಿ ಸಾಗಿಸುತ್ತಿರುವುದು ಕಂಡುಬಂದಿದೆ. ಇದರ ಬೆನ್ನಲ್ಲೇ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.

ಕೃತ್ಯದ ಎಸಗಿದ ಬಳಿಕ ಆರೋಪಿ ಅಮೃತಸರಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಅಮೃತಸರಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಬ್ರಿಜೇಶ್‌ನನ್ನು ಬಂಧಿಸಿ ನಗರಕ್ಕೆ ಕರೆತರಲಾಗಿದೆ ಎಂದು ಪೊಲೀಸರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com