ಬೆಂಗಳೂರು: ಚೀಟಿ ಹಣದ ಹೆಸರಲ್ಲಿ 600 ಜನರಿಗೆ ವಂಚನೆ; 40 ಕೋಟಿ ರೂ ಹಣದೊಂದಿಗೆ ದಂಪತಿ ಪರಾರಿ!

ಚೀಟಿ ಹಣದ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿದ್ದ ಸುಧಾ ಹಾಗೂ ಸಿದ್ದಿಚಾರಿ ದಂಪತಿ ಇದೀಗ ಸಾರ್ವಜನಿಕರಿಗೆ ಮೋಸ ಮಾಡಿ ಹಣದೊಂದಿಗೆ ಪರಾರಿಯಾಗಿದ್ದಾರೆ.
ಆರೋಪಿಗಳಾದ ಸುಧಾ-ಸಿದ್ದಿರಾಜು
ಆರೋಪಿಗಳಾದ ಸುಧಾ-ಸಿದ್ದಿರಾಜು
Updated on

ಬೆಂಗಳೂರು: ಚೀಟಿ ಹಣದ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿದ್ದ ಸುಧಾ ಹಾಗೂ ಸಿದ್ದಿಚಾರಿ ದಂಪತಿ ಇದೀಗ ಸಾರ್ವಜನಿಕರಿಗೆ ಮೋಸ ಮಾಡಿ ಹಣದೊಂದಿಗೆ ಪರಾರಿಯಾಗಿದ್ದಾರೆ. ಬೆಂಗಳೂರಿನ ಜರಗನಹಳ್ಲಿಯಲ್ಲಿ ಘಟನೆ ನಡೆದಿದ್ದು ದಂಪತಿ ಸುಮಾರು 40 ಕೋಟಿ ರೂ. ಚೀಟಿ ಹಣದೊಂದಿಗೆ ಎಸ್ಕೇಪ್ ಆಗಿದ್ದಾರೆ. 20 ವರ್ಷಗಳಿಂದ ಜರಗನಹಳ್ಳಿಯಲ್ಲಿ ವಾಸವಾಗಿದ್ದ ದಂಪತಿ ಚೀಟಿ ವ್ಯವಹಾರದ ಹೆಸರಲ್ಲಿ 600ಕ್ಕೂ ಹೆಚ್ಚು ಜನರಿಂದ ಹಣ ಕಟ್ಟಿಸಿಕೊಂಡಿದ್ದರು. ಇವರನ್ನು ನಂಬಿದ ಜನರು 5 ರಿಂದ 10 ಲಕ್ಷದವರೆಗೂ ಹಣ ನೀಡಿದ್ದಾರೆ. ಆರಂಭದಲ್ಲಿ ಚೀಟಿ ಹಣ ಕೊಡುತ್ತಿದ್ದ ದಂಪತಿ ಕಳೆದ ಒಂದು ವರ್ಷದಿಂದ ಹಣ ನೀಡದೇ ಸತಾಯಿಸುತ್ತಿದ್ದರು. ಕಳೆದ ತಿಂಗಳ ಜೂನ್ 3ರಂದೇ ದಂಪತಿ ಪರಾರಿಯಾಗಿದ್ದು ಈ ಸಂಬಂಧ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೆ ದಂಪತಿಗಳ ಬಂಧನಕ್ಕೆ ಮೂರು ತಂಡಗಳನ್ನು ರಚಿಸಲಾಗಿದೆ.

ಆರೋಪಿಗಳಾದ ಸುಧಾ-ಸಿದ್ದಿರಾಜು
ನಿಮಗೆ ಉತ್ತಮ ರಸ್ತೆ ಬೇಕಂದ್ರೆ ಗ್ಯಾರಂಟಿ ಯೋಜನೆ ಬಂದ್ ಮಾಡ್ತೀವಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com