
ಕೋಲಾರ: ಮದುವೆಯಾಗಿ ಸುಂದರ ಜೀವನ ನಡೆಸಬೇಕಿದ್ದ ಗೃಹಿಣಿಯೊಬ್ಬಳು ಗಂಡನ ಸ್ನೇಹಿತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ನಂತರ ಆತನಿಗಾಗಿ ಗಂಡ ಹರೀಶ್ ನನ್ನು ತೊರೆದು ಬಂದಿದ್ದಳು. ಇದೀಗ ಐದು ತಿಂಗಳ ಗರ್ಭೀಣಿ ಅಂತ ಗೊತ್ತಾಗುತ್ತಲೇ ಪ್ರಿಯಕರ ಅಮರನಾಥ್ ಆಕೆಯನ್ನು ಬಿಟ್ಟು ಓಡಿ ಹೋಗಿದ್ದಾನೆ.
ಕೋಲಾರದ ಶ್ರೀನಿವಾಸಪುರ ಪಟ್ಟಣದ ಸುಭಾಶ್ ನಗರದ ಅಮರನಾಥ್ ವಂಚಿಸಿದ್ದಾನೆ ಎಂದು ತಿಮ್ಮಸಂದ್ರ ಗ್ರಾಮದ ಸಂತ್ರಸ್ತ ಮಹಿಳೆ ಸಂಯುಕ್ತ ಆರೋಪಿಸಿದ್ದಾಳೆ. ಅಲ್ಲದೆ ತಾನೂ ಐದು ತಿಂಗಳ ಗರ್ಭೀಣಿ ಎಂಬ ವಿಚಾರ ತಿಳಿಯುತ್ತಲೇ ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಸಂಯುಕ್ತ ಆರೋಪಿಸಿದ್ದಾಳೆ. ಪ್ರಿಯಕರನಿಗಾಗಿ ಗಂಡನನ್ನೇ ಬಿಟ್ಟು ಬಂದಿದ್ದ ಮಹಿಳೆ ಇದೀಗ ಬೀದಿಗೆ ಬಿದ್ದಿದ್ದಾಳೆ. ಗಂಡನನ್ನು ಬಿಟ್ಟು ಬಂದಿದ್ದ ಸಂಯುಕ್ತಗೆ ಪ್ರಿಯಕರ ಸಹ ಕೈಕೊಟ್ಟಿದ್ದಾನೆ. ಈಗ ಯಾವುದೇ ಆಸರೆ ಇಲ್ಲದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾಳೆ. ನನಗೆ ನ್ಯಾಯ ಬೇಕು ಎಂದು ಸಂಯುಕ್ತ ಯುವಕನ ಮನೆಮುಂದೆ ಅಂಬೇಡ್ಕರ್ ಫೋಟೋ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾಳೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Advertisement