
ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್‌ಗೆ ವ್ಯಸನಿಯಾಗಿ ಜೂಜಾಟದಲ್ಲಿ ಹಣ ಕಳೆದುಕೊಂಡು ಕಳ್ಳತನಕ್ಕಿಳಿದಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬನನ್ನು ಮಾಗಡಿ ರಸ್ತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ, ಈತ ಹಲವು ಸರಗಳ್ಳತನ ಮತ್ತು ಮನೆಗಳ್ಳತನದಲ್ಲಿ ಭಾಗಿಯಾಗಿದ್ದ.
ಶಿವಮೊಗ್ಗ ಮೂಲದ ಹೊಂಗಸಂದ್ರ ನಿವಾಸಿ ಕೆ.ಎನ್. ಮೂರ್ತಿ (27) ಬಂಧಿತ ಆರೋಪಿ. ಈಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮಾಗಡಿ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಸರಗಳ್ಳತನ ಪ್ರಕರಣದ ಆಧಾರದ ಮೇಲೆ, ಮೂರ್ತಿಯನ್ನು ಜೂನ್‌ನಲ್ಲಿ ಬೇಗೂರು ರಸ್ತೆ ಬಳಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಆತ ತಪ್ಪೊಪ್ಪಿಕೊಂಡಿದ್ದು ಇತರ ಮೂರು ಮನೆಗಳ್ಳತನ ಮತ್ತು ಕಳ್ಳತನಗಳಲ್ಲಿ ಭಾಗಿಯಾಗಿದ್ದಾನೆಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಪೊಲೀಸರು ಆತನಿಂದ 16.5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ 245 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮೂರ್ತಿ ಆನ್‌ಲೈನ್ ಬೆಟ್ಟಿಂಗ್‌ಗೆ ವ್ಯಸನಿಯಾಗಿ ಹಲವಾರು ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಲ ಮರುಪಾವತಿಸುವಂತೆ ಸಾಲಗಾರರು ಒತ್ತಡ ಹೇರಿದ್ದರಿಂದ, ಹಣ ಸಂಗ್ರಹಿಸಲು ಮನೆಗಳ್ಳತನ ಮತ್ತು ಸರಗಳ್ಳತನಕ್ಕೆ ಮುಂದಾಗಿದ್ದ, ಅವರ ತಂದೆ ಅಣ್ಣಪ್ಪ, ಮಗನ ಸಾಲ ತೀರಿಸಲು ಶಿವಮೊಗ್ಗದಲ್ಲಿರುವ ತನ್ನ ಆಸ್ತಿಯನ್ನು ಈಗಾಗಲೇ ಮಾರಿಬಿಟ್ಟಿದ್ದರು. ಇದರ ಹೊರತಾಗಿಯೂ, ಮೂರ್ತಿ ಜೂಜಾಟ ಮುಂದುವರೆಸಿದ್ದ. ಅಣ್ಣಪ್ಪ ತನ್ನ ಮಗನ ಸಾಲ ತೀರಿಸಲು ಸಹಾಯ ಮಾಡಲು ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಲು ನಗರಕ್ಕೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Advertisement