Greater Bengaluru Authority: ಮೂಲಸೌಕರ್ಯ, ಸಿಬ್ಬಂದಿ ಕೊರತೆ ಸೇರಿ ಹಲವು ವಿಘ್ನ...?

ಪ್ರತಿಯೊಂದು ನಿಗಮವು 150 ವಾರ್ಡ್‌ಗಳು, 150 ಕೌನ್ಸಿಲರ್‌ಗಳನ್ನು ಹೊಂದುವ ಸಾಧ್ಯತೆಗಳಿದ್ದು, ಅಧಿಕಾರಿಗಳೊಂದಿಗೆ ಸ್ಥಳಾವಕಾಶ ಕಲ್ಪಿಸಲು ಕೌನ್ಸಿಲ್ ಹಾಲ್ ಅಗತ್ಯವಿರುತ್ತದೆ, ಕನಿಷ್ಠ 50 ಕಚೇರಿ ಕೊಠಡಿಗಳು ಮತ್ತು ಅದರ ವಿವಿಧ ಇಲಾಖೆಗಳಲ್ಲಿ ಅಗತ್ಯವಿರುವ ಸಿಬ್ಬಂದಿಯನ್ನು ಹೊಂದಿರಬೇಕಿದೆ.
BBMP
ಬಿಬಿಎಂಪಿ ಕಚೇರಿ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಡಿಯಲ್ಲಿ ಐದು ನಿಗಮಗಳಾಗಿ ವಿಭಜಿಸುವ ಯೋಜನೆಯಲ್ಲಿ ಮೂಲಸೌಕರ್ಯ, ಸಿಬ್ಬಂದಿ ಕೊರತೆ ಸೇರಿ ಹಲವು ಸವಾಲುಗಳನ್ನು ರಾಜ್ಯ ಸರ್ಕಾರ ಎದುರಿಸಬೇಕಾಗಿದೆ.

ಪ್ರತಿಯೊಂದು ನಿಗಮವು 150 ವಾರ್ಡ್‌ಗಳು, 150 ಕೌನ್ಸಿಲರ್‌ಗಳನ್ನು ಹೊಂದುವ ಸಾಧ್ಯತೆಗಳಿದ್ದು, ಅಧಿಕಾರಿಗಳೊಂದಿಗೆ ಸ್ಥಳಾವಕಾಶ ಕಲ್ಪಿಸಲು ಕೌನ್ಸಿಲ್ ಹಾಲ್ ಅಗತ್ಯವಿರುತ್ತದೆ, ಕನಿಷ್ಠ 50 ಕಚೇರಿ ಕೊಠಡಿಗಳು ಮತ್ತು ಅದರ ವಿವಿಧ ಇಲಾಖೆಗಳಲ್ಲಿ ಅಗತ್ಯವಿರುವ ಸಿಬ್ಬಂದಿಯನ್ನು ಹೊಂದಿರಬೇಕಿದೆ.

ಐದು ನಿಗಮಗಳನ್ನು ನಡೆಸಲು ಸರ್ಕಾರಕ್ಕೆ ದೊಡ್ಡ ಮೂಲಸೌಕರ್ಯ ಸವಾಲುಗಳು ಎದುರಾಗಲಿವೆ ಎಂದು ಬಿಬಿಎಂಪಿಯ ಮಾಜಿ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ನಾಯಕ ಎನ್.ಆರ್. ರಮೇಶ್ ಅವರು ಹೇಳಿದ್ದಾರೆ.

ಪ್ರತಿ ನಿಗಮದಲ್ಲಿ ಸುಮಾರು 100 ವಾರ್ಡ್‌ಗಳು ಇರುತ್ತವೆ ಎಂದು ಭಾವಿಸಿದರೂ 100 ಕೌನ್ಸಿಲರ್‌ಗಳು ಮತ್ತು 10 ನಾಮನಿರ್ದೇಶಿತ ಕೌನ್ಸಿಲರ್‌ಗಳು ಇರುತ್ತಾರೆ. ಪ್ರತಿ ತಿಂಗಳು, ಕೌನ್ಸಿಲ್ ಸಭೆ ನಡೆಯಬೇಕು, ಇದರಲ್ಲಿ ಕೌನ್ಸಿಲರ್‌ಗಳು, ಶಾಸಕರು, ಸಂಸದರು, ಬಿಬಿಎಂಪಿ ಅಧಿಕಾರಿಗಳು ಮತ್ತು ಬಿಡಬ್ಲ್ಯೂಎಸ್ಎಸ್ಬಿ, ಬೆಸ್ಕಾಂ ಇತ್ಯಾದಿಗಳ ಪ್ರತಿನಿಧಿಗಳು ಭಾಗವಹಿಸುತ್ತಾರೆ.

ನಮಗೆ 150 ಕ್ಕೂ ಹೆಚ್ಚು ಜನರಿಗೆ ಅವಕಾಶ ಕಲ್ಪಿಸುವ ಕೌನ್ಸಿಲ್ ಹಾಲ್‌ಗಳು ಬೇಕಾಗುತ್ತವೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಕೌನ್ಸಿಲ್ ಹಾಲ್ ಹೊರತುಪಡಿಸಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬೇರೆಲ್ಲಿಯೂ ಅಂತಹ ದೊಡ್ಡ ಹಾಲ್‌ಗಳಿಲ್ಲ ಎಂದು ತಿಳಿಸಿದ್ದಾರೆ.

ಪ್ರತಿಯೊಂದು ನಿಗಮವು ಕಂದಾಯ, ರಸ್ತೆ ಮೂಲಸೌಕರ್ಯ, ಆರೋಗ್ಯ ಇತ್ಯಾದಿ 15ಕ್ಕೂ ಹೆಚ್ಚು ಇಲಾಖೆಗಳನ್ನು ಹೊಂದಿರುತ್ತದೆ. ಪ್ರತಿಯೊಂದಕ್ಕೂ ಒಂದೊಂದು ಕಚೇರಿ, ಕೊಠಡಿ ಬೇಕಾಗುತ್ತದೆ. ಕನಿಷ್ಠ 50 ಕಚೇರಿ ಕೊಠಡಿಗಳು ಬೇಕಾಗುತ್ತವೆ. ಇದಕ್ಕೆ ಸುಮಾರು 2 ಎಕರೆ ಭೂಮಿ ಅಗತ್ಯವಿದೆ.

BBMP
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬೆಂಗಳೂರು ನಗರವನ್ನು ಶ್ರೇಷ್ಠವಾಗಿಸುತ್ತದೆಯೇ?

ಬಿಬಿಎಂಪಿ ಹೊರ ವಲಯಗಳಲ್ಲಿ ಸ್ಥಳ ಹುಡುಕುವುದು ಸುಲಭವಾಗಬಹುದು, ಆದರೆ, ಬೆಂಗಳೂರಿನ ಕೇಂದ್ರ ಭಾಗದಲ್ಲಿ ಅದು ಕಷ್ಟಕರವಾಗಿರುತ್ತದೆ. ಇದನ್ನು ನಿರ್ಮಿಸಲು ಸರ್ಕಾರಕ್ಕೆ ಸುಮಾರು ಮೂರು ವರ್ಷಗಳು ಬೇಕಾಗುತ್ತದೆ.

ಬಿಬಿಎಂಪಿ ಈಗಾಗಲೇ ತನ್ನ ಎಲ್ಲಾ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಜಿಬಿಎಗೆ ಪರಿವರ್ತನೆಗೊಳ್ಳುವಾಗ ಹೆಚ್ಚಿನ ಸಿಬ್ಬಂದಿ ಅಗತ್ಯವಿರುತ್ತದೆ. ಸರ್ಕಾರದ ಈ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬಿಬಿಎಂಪಿ ಚುನಾವಣೆಗಳನ್ನು ವಿಳಂಬಗೊಳಿಸುವ ತಂತ್ರವಾಗಿದೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ನಾಯಕ ಮತ್ತು ಮಾಜಿ ಕಾರ್ಪೊರೇಟರ್ ಎಂ. ಶಿವರಾಜ್ ಮಾತನಾಡಿ, ಬಿಬಿಎಂಪಿಯಲ್ಲಿ ಈಗಾಗಲೇ ಹಲವಾರು ಕಚೇರಿಗಳಿದ್ದು, ಅವುಗಳನ್ನು ನಿಗಮದ ಪ್ರಧಾನ ಕಚೇರಿಯನ್ನಾಗಿ ಪರಿವರ್ತಿಸಬಹುದು. ಆದಾಗ್ಯೂ, ಐದು ನಿಗಮಗಳಿಗೆ ಸ್ಥಳಗಳನ್ನು ಗುರುತಿಸುವುದು ಸವಾಲಾಗಿದೆ ಎಂದು ತಿಳಿಸಿದ್ದಾರೆ.

BBMP
ಗ್ರೇಟರ್ ಬೆಂಗಳೂರು: ಐದು ನಗರ ಪಾಲಿಕೆಗಳ ರಚನೆ; ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅವಕಾಶ

ನಗರದ ಮಲ್ಲೇಶ್ವರಂನಲ್ಲಿ ಐಪಿಸಿ, ಮೇಯೊ ಹಾಲ್‌ನಂತಹ ದೊಡ್ಡ ಸಭಾಂಗಣಗಳಿವೆ, ಅಲ್ಲಿ ನಾವು ಸಭೆಗಳನ್ನು ನಡೆಸಬಹುದು. ಪ್ರತಿಯೊಂದು ನಿಗಮವು ವಿಭಿನ್ನ ದಿನಾಂಕಗಳಲ್ಲಿ ಸಭೆಗಳನ್ನು ನಡೆಸುವ ಮೂಲಕ ಬಿಬಿಎಂಪಿ ಪ್ರಧಾನ ಕಚೇರಿಯಲ್ಲಿರುವ ಕೌನ್ಸಿಲ್ ಸಭಾಂಗಣವನ್ನು ಬಳಸಬಹುದು. ಅಗತ್ಯವಿದ್ದರೆ, ನಾವು ಒಂದು ವರ್ಷದೊಳಗೆ ಕೌನ್ಸಿಲ್ ಸಭಾಂಗಣವನ್ನು ನಿರ್ಮಿಸಬಹುದು ಎಂದು ತಿಳಿಸಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ಮಾತನಾಡಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಧಾನ ಕಚೇರಿಯ ಸ್ಥಳದಿಂದಲೇ ಸಾಕಷ್ಟು ಕಾರ್ಯಗಳನ್ನು ನಡೆಸುವ ಅಗತ್ಯವಿದೆ. ಅಗತ್ಯವಿರುವ ಸಿಬ್ಬಂದಿ ಸಂಖ್ಯೆ ಮತ್ತು ಇತರ ಕೆಳ ಹಂತದ ಕೆಲಸಗಳ ಕುರಿತು ಅಂತಿಮ ಅಧಿಸೂಚನೆ ಹೊರಡಿಸಿದ ಬಳಿಕ ಪಾಲಿಕೆ ವರದಿ ಸಿದ್ಧಪಡಿಸಿ, ಸುಗಮ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳಲು ವರದಿಯನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com