
ಬೆಂಗಳೂರು: ಹಾಸನ ಮೂಲದ ಯುವಕನೋರ್ವ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಜೆ.ಪಿ.ನಗರದಲ್ಲಿ ಸ್ನೇಹಿತರೊಂದಿಗೆ ವಾಸವಾಗಿದ್ದ 19 ವರ್ಷದ ನಿಶಾಂತ್ ಗೌಡ ಹೃದಯಾಘಾತಕ್ಕೆ ಬಲಿಯಾದ ದುರ್ದೈವಿ. ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ನಿವಾಸಿಯಾಗಿರುವ ನಿಶಾಂತ್ ಗೌಡ ಡಿಪ್ಲೋಮಾ ಮುಗಿಸಿದ್ದು 15 ದಿನಗಳ ಹಿಂದೆ ಹಾಸನದಿಂದ ಬೆಂಗಳೂರಿಗೆ ಕೈಗಾರಿಕಾ ತರಬೇತಿಗೆಂದು ಬಂದಿದ್ದರು. ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದ ನಿಶಾಂತ್ ಗೌಡಗೆ ಕಳೆದ ರಾತ್ರಿ ಎದೆನೋವು ಕಾಣಿಸಿಕೊಂಡಿದೆ. ಈ ವಿಚಾರವನ್ನು ಸ್ನೇಹಿತರಿಗೂ ತಿಳಿಸಿದ್ದ. ಆದರೆ ಬೆಳಗ್ಗೆ ಎಷ್ಟೊತ್ತಾದರೂ ನಿಶಾಂತ್ ಎಚ್ಚರಗೊಂಡಿರಲಿಲ್ಲ. ಹೀಗಾಗಿ ನಿಶಾಂತ್ ನನ್ನು ಸ್ನೇಹಿತರು ಎಬ್ಬಿಸಲು ಮುಂದಾದಾಗ ಆತ ಮೃತಪಟ್ಟಿರುವುದು ಗೊತ್ತಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಜೆಪಿ ನಗರ ಪೊಲೀಸರು ಪರಿಶೀಲನೆ ನಡೆಸಿದರು.
Advertisement