ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅಕ್ಷಯ್ ಸಾವು; ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರ ಆಕ್ರೋಶ! CCTV Video

ಬೆಂಗಳೂರಿನ ಬನಶಂಕರಿ 2ನೇ ಹಂತದ ಶ್ರೀನಿವಾಸ ನಗರದಲ್ಲಿ ರಸ್ತೆಯಲ್ಲಿ ಮರಬಿದ್ದು ತಲೆಗೆ ಗಂಭೀರ ಗಾಯವಾಗಿದ್ದ ಅಕ್ಷಯ್​ ಇಂದು ಕೊನೆಯುಸಿರೆಳಿದಿದ್ದಾನೆ.
Akshay dies whose skull was crushed by falling tree branch
ಮರದ ಕೊಂಬೆ ಬಿದ್ದು ಅಕ್ಷಯ್ ಮೃತ
Updated on

ಬೆಂಗಳೂರು: ಇತ್ತೀಚೆಗೆ ಬೈಕ್ ನಲ್ಲಿ ಚಲಿಸುತ್ತಿದ್ದಾಗ ಮರ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅಕ್ಷಯ್ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೌದು..ಬೆಂಗಳೂರಿನ ಬನಶಂಕರಿ 2ನೇ ಹಂತದ ಶ್ರೀನಿವಾಸ ನಗರದಲ್ಲಿ ರಸ್ತೆಯಲ್ಲಿ ಮರಬಿದ್ದು (Tree Fall) ತಲೆಗೆ ಗಂಭೀರ ಗಾಯವಾಗಿದ್ದ ಅಕ್ಷಯ್​ ಇಂದು ಕೊನೆಯುಸಿರೆಳಿದಿದ್ದಾನೆ .

ಜೂನ್ 15, 2025ರಂದು ಸಂಭವಿಸಿದ ದುರಂತದಲ್ಲಿ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ 29 ವರ್ಷದ ಅಕ್ಷಯ್, ಐದು ದಿನಗಳ ಸಾವು-ಬದುಕಿನ ಹೋರಾಟದ ಬಳಿಕ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮರದ ಕೊಂಬೆ ಬಿದ್ದು ತಲೆಗೆ ತೀವ್ರ ಗಾಯವಾಗಿ ನಿನ್ನೆ ಅಕ್ಷಯ್​ ಬ್ರೇನ್​ ಡೆಡ್​​ ಆಗಿದೆ ಎಂದು ವೈದ್ಯರು ತಿಲೀಸಿದ್ದರು. ಇದೀಗ ಬ್ರೈನ್ ಡೆಡ್ ಸ್ಥಿತಿಗೆ ತಲುಪಿದ್ದ ಅಕ್ಷಯ್‌ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.

ನಿನ್ನೆ ಬ್ರೈನ್ ಡೆಡ್, ಇಂದು ಸಾವು

ಮರದ ಕೊಂಬೆ ಬಿದ್ದು ಆಸ್ಪತ್ರೆ ಸೇರಿದ ಅಕ್ಷಯ್ ಬ್ರೈನ್ ಡೆಡ್ ಆಗಿದೆ ಎಂದು ನಿನ್ನೆ ವೈದ್ಯರು ಘೋಷಿಸಿದ್ದರು. ಅಕ್ಷಯ್ ಯಾವುದೇ ಚಿಕಿತ್ಸೆಗೆ ಅಕ್ಷಯ್​ ಸ್ಪಂದಿಸುತ್ತಿಲ್ಲ ಎಂದು ಕೈಚೆಲ್ಲಿದ್ದರು. ಸರ್ಜರಿ ಬಳಿಕವೂ ಅಕ್ಷಯ್​ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದರು. ಆದರೂ ನಾಲ್ಕು ದಿನಗಳ ಅಕ್ಷಯ್ ಗೆ ಐಸಿಯೂನಲ್ಲಿ‌ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಕ್ಷಯ್​ ಹೃದಯ ಸ್ಥಂಭನಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. ಇಂದು ಮಧ್ಯಾಹ್ನ ಅಕ್ಷಯ್​ ಸಾವನಪ್ಪಿದ್ದಾರೆ.

Akshay dies whose skull was crushed by falling tree branch
ಬೆಂಗಳೂರು: ಅಪಾರ್ಟ್‌ಮೆಂಟ್‌ ಶೌಚಗುಂಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ!

ತಂದೆ ಬರ್ತ್ ಡೇ.. ಮಟನ್ ತರಲು ಹೋಗಿದ್ದ ಅಕ್ಷಯ್

ಇನ್ನು ಜೂನ್ 15 ಭಾನುವಾರ ಅಕ್ಷಯ್ ತಂದೆ ಶಿವರಾಮ್​ರ 62ನೇ ಬರ್ತ್ ಡೇ ಇತ್ತು. ಆಗ ಅಪ್ಪನಿಗೆ ಮಟನ್ ಇಷ್ಟ ಅನ್ನೋ ಕಾರಣಕ್ಕೆ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಮಟನ್ ತರಲು ಹೋಗಿ ವಾಪಸ್ ಬರುತ್ತಿದ್ದಾಗ ಬ್ರಹ್ಮ ಮಂದಿರದ ಬಳಿ ಮರದ ಕೊಂಬೆ ಮುರಿದು ಅಕ್ಷಯ್ ತಲೆ ಮೇಲೆ ಬಿದ್ದಿತ್ತು.

ಪರಿಣಾಮ ಪ್ರಜ್ಜೆ ತಪ್ಪಿ ರಸ್ತೆಯಲ್ಲಿ ಬಿದ್ದ ಅಕ್ಷಯ್​​ನನ್ನ ಕೂಡಲೇ ಸ್ಥಳೀಯ ಪ್ರಶಾಂತ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತಲೆ ಭಾಗಕ್ಕೆ ಗಂಭೀರ ಗಾಯವಾದ ಕಾರಣ, ತಲೆಯಲ್ಲಿ ರಕ್ತ ಹರಿಯುತ್ತಿರೋದು ನಿಲ್ಲದ ಕಾರಣ ತ್ಯಾಗರಾಜನಗರದ ಪ್ರಶಾಂತ್ ಆಸ್ಪತ್ರೆಯಿಂದ ಜಯನಗರದ 3ನೇ ಬ್ಲಾಕ್​ನಲ್ಲಿರುವ ಅಪೋಲೊ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಅಕ್ಷಯ್​ ಇಂದು ಮಧ್ಯಾಹ್ನ 1 ಗಂಟೆಗೆ ಉಸಿರು ನಿಲ್ಲಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರ ಆಕ್ರೋಶ!

ಇನ್ನು ಅಕ್ಷಯ್ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಕ್ಷಯ್ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಒಣಗಿದ ಮರಗಳ ರೆಂಬೆಗಳನ್ನು ಕತ್ತರಿಸುವಂತೆ ಸ್ಥಳೀಯರು ಹಲವು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ ಎಂದು ಆರೋಪಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜಯನಗರದ ಅಪೋಲೋ ಆಸ್ಪತ್ರೆ ಮುಂದೆ ಪೊಲೀಸ್​ ಭದ್ರತೆ ಒದಗಿಸಲಾಗಿದೆ.

ಬಿಬಿಎಂಪಿ ಪರಿಹಾರ

ಅಕ್ಷಯ್ ಮೂಲತಃ ಬನಶಂಕರಿಯ ಕತ್ರಿಗುಪ್ಪೆಯ ಶ್ರೀನಗರದ ನಿವಾಸಿ. ರಾಜಾಜಿನಗರದ ಖಾಸಗಿ ಕಂಪನಿವೊಂದರಲ್ಲಿ ಹೆಚ್.ಆರ್. ಕೆಲಸ ಮಾಡುತ್ತಿದ್ದ. ಇಡೀ ಕುಟುಂಬದ ಆಧಾರ ಸ್ತಂಭವಾಗಿದ್ದ. ತಾನೇ ದುಡಿದು ಇಡೀ ಕುಟುಂವನ್ನ ಸಾಕುತ್ತಿದ್ದ. ಆದ್ರೆ ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಕುಟುಂಬಸ್ಥರು ಕಣ್ಣಿರು ಹಾಕುತ್ತಿದ್ದಾರೆ. ಇನ್ನೂ ಮೃತ ಅಕ್ಷಯ್ ಕುಟುಂಬಕ್ಕೆ ಬಿಬಿಎಂಪಿ ಚಿಕಿತ್ಸಾ ವೆಚ್ಚದ ಹೊರತುಪಡಿಸಿ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com