ಭಾರತ ಇರಾನ್‌ ಪರ ನಿಲ್ಲಬೇಕು: ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಒತ್ತಾಯ

ಇರಾನ್ ಮೇಲೆ ಇಸ್ರೇಲ್ ನಡೆಸಿದ ಅಪಾಯಕಾರಿ ದಾಳಿ ಕಾನೂನುಬಾಹಿರ. ಇದು ಪ್ರಾದೇಶಿಕ ಶಾಂತಿಗೆ ಬೆದರಿಕೆ ಹಾಕುತ್ತದೆ ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಇಸ್ರೇಲ್‌-ಇರಾನ್‌ ಯುದ್ಧದಲ್ಲಿ ಭಾರತ ಇರಾನ್‌ ಪರ ನಿಲ್ಲುವಂತೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಗಾಜಾ ಮತ್ತು ಇರಾನ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿ ಬಗ್ಗೆ ಭಾರತ ವಹಿಸಿರುವ ಮೌನವನ್ನು "ಕೇವಲ ಧ್ವನಿಯ ನಷ್ಟವಲ್ಲ, ಮೌಲ್ಯಗಳ ಶರಣಾಗತಿ" ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಟೀಕಿಸಿ "It is still not too late for India's voice to be heard", ಎಂಬ ಲೇಖನದಲ್ಲಿ ಅವರು ಬರೆದಿದ್ದಾರೆ.

ಈ ಲೇಖನ ಕೊಂಡಿಯನ್ನು ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಎರಡು ಕಡೆ ಭಾರೀ ಪ್ರಮಾಣದಲ್ಲಿ ಕ್ಷಿಪಣಿ ದಾಳಿ ನಡೆಸುತ್ತಿದ್ದರೂ ಭಾರತ ಇಲ್ಲಿಯವರೆಗೆ ಯಾವುದೇ ದೇಶದ ಪರ ನಿಲ್ಲದೇ ತಟಸ್ಥ ನಿಲುವು ತಳೆದಿದೆ. ಇರಾನ್ ಮೇಲೆ ಇಸ್ರೇಲ್ ನಡೆಸಿದ ಅಪಾಯಕಾರಿ ದಾಳಿ ಕಾನೂನುಬಾಹಿರ. ಇದು ಪ್ರಾದೇಶಿಕ ಶಾಂತಿಗೆ ಬೆದರಿಕೆ ಹಾಕುತ್ತದೆ ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಸೋನಿಯಾ ಗಾಂಧಿಯವರ ಲೇಖನವು ನಾಗರಿಕರ ಜೀವಗಳು ಬಲಿಯಾದಾಗ, ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದಾಗ ಮತ್ತು ರಾಜತಾಂತ್ರಿಕತೆಯನ್ನು ತ್ಯಜಿಸಿದಾಗ ಭಾರತ ಮೌನವಾಗಿರಲು ಸಾಧ್ಯವಿಲ್ಲ ಎಂಬುದನ್ನು ಪ್ರಬಲವಾಗಿ ನೆನಪಿಸುತ್ತದೆ ಎಂದು ಹೇಳಿದ್ದಾರೆ.

ಕಾಶ್ಮೀರ ಸೇರಿದಂತೆ ನಿರ್ಣಾಯಕ ಸಮಯದಲ್ಲಿ ಇರಾನ್ ಭಾರತದ ಪರವಾಗಿ ನಿಂತಿದ್ದರೂ ಕೇಂದ್ರ ಸರ್ಕಾರದ ಮೌನವಾಗಿದೆ. ಈ ಮೊದಲು ಗಾಜಾ ಈಗ ಇರಾನ್‌ ವಿಚಾರಲ್ಲಿ ಮೌನವಾಗಿರುವುದು ಶಾಂತಿಯನ್ನು ಪ್ರತಿಪಾದಿಸುವ ನಮ್ಮ ವಿದೇಶಾಂಗ ನೀತಿಯ ನಿರ್ಗಮನವನ್ನು ಸೂಚಿಸುತ್ತದೆ. ಪಶ್ಚಿಮ ಏಷ್ಯಾದಲ್ಲಿ ನಮ್ಮದೇ ಆದ ದೀರ್ಘಕಾಲೀನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಭಾರತ ಈಗ ಮಾತನಾಡಬೇಕು ಎಂದು ಸಿಎಂ ಒತ್ತಾಯಿಸಿದ್ದಾರೆ.

ಇರಾನ್ ಮೇಲೆ ಇಸ್ರೇಲ್ ನಡೆಸಿದ ಕಾನೂನುಬಾಹಿರ ದಾಳಿಯು ಅಪಾಯಕಾರಿ ಉಲ್ಬಣವಾಗಿದೆ - ಇದು ಪ್ರಾದೇಶಿಕ ಶಾಂತಿಗೆ ಬೆದರಿಕೆ ಹಾಕುತ್ತದೆ. ಭಾರತದ ಹಿತಾಸಕ್ತಿಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

CM Siddaramaiah
'ಮೌಲ್ಯಗಳ ಶರಣಾಗತಿ': ಗಾಜಾ-ಇರಾನ್ ಮೇಲೆ ಇಸ್ರೇಲ್ ದಾಳಿಗೆ ಭಾರತದ ಮೌನ ಪ್ರಶ್ನಿಸಿದ Sonia Gandhi

ಸೋನಿಯಾ ಗಾಂಧಿಯವರ ಲೇಖನವು ನಾಗರಿಕರ ಜೀವಗಳು ಬಲಿಯಾದಾಗ, ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದಾಗ ಮತ್ತು ರಾಜತಾಂತ್ರಿಕತೆಯನ್ನು ತ್ಯಜಿಸಿದಾಗ ಭಾರತ ಮೌನವಾಗಿರಲು ಸಾಧ್ಯವಿಲ್ಲ ಎಂಬುದನ್ನು ಪ್ರಬಲವಾಗಿ ನೆನಪಿಸುತ್ತದೆ.

ಕಾಶ್ಮೀರ ಸೇರಿದಂತೆ ನಿರ್ಣಾಯಕ ಕ್ಷಣಗಳಲ್ಲಿ ಇರಾನ್ ಭಾರತದ ಪರವಾಗಿ ನಿಂತಿದೆ. ಆದರೂ, ಭಾರತದ ಮೌನ - ಮೊದಲು ಗಾಜಾ ಮತ್ತು ಈಗ ಇರಾನ್ ಬಗ್ಗೆ - ಶಾಂತಿ ಮತ್ತು ಸಮತೋಲನದಲ್ಲಿ ಬೇರೂರಿರುವ ನಮ್ಮ ತತ್ವಬದ್ಧ ವಿದೇಶಾಂಗ ನೀತಿಯಿಂದ ತೊಂದರೆದಾಯಕ ನಿರ್ಗಮನವನ್ನು ಸೂಚಿಸುತ್ತದೆ.

ಭಾರತ ಮಾತನಾಡಬೇಕು. ನೈತಿಕ ಸ್ಪಷ್ಟತೆಗಾಗಿ ಮಾತ್ರವಲ್ಲ, ಪಶ್ಚಿಮ ಏಷ್ಯಾದಲ್ಲಿ ನಮ್ಮದೇ ಆದ ದೀರ್ಘಕಾಲೀನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com