Facebook ಕಮೆಂಟ್ ಹಾಕಿದ್ದಕ್ಕೆ ಕೊಳಕು ಬೈಗುಳ: ಸ್ಕ್ರೀನ್‌ಶಾಟ್‌ ವೈರಲ್; ಸಚಿವ ಭೈರತಿ ಸುರೇಶ್ ಸ್ಪಷ್ಟನೆ

ಕಮೆಂಟ್‌ ಮಾಡಿದ ವ್ಯಕ್ತಿಯನ್ನುದ್ದೇಶಿಸಿ ಬೈರತಿ ಸುರೇಶ್‌ ಅವಾಚ್ಯವಾಗಿ ನಿಂದಿಸಿರುವ ಮತ್ತು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.
ಭೈರತಿ ಸುರೇಶ್
ಭೈರತಿ ಸುರೇಶ್
Updated on

ಬೆಂಗಳೂರು: ಫೇಸ್‌ಬುಕ್​​ ಪೋಸ್ಟ್​ಗೆ ಕಮೆಂಟ್​ ಮಾಡಿದ್ದ ವ್ಯಕ್ತಿಗೆ ಭೈರತಿ ಸುರೇಶ್ ತೀರಾ ಕೊಳಕು ಭಾಷೆಯಲ್ಲಿ ನಿಂದಿಸಿರುವ ಕೆಲವು ಸ್ಕ್ರೀನ್‌ಶಾಟ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದ್ದು, ಈ ಬಗ್ಗೆ ಸಚಿವ ಸ್ಪಷ್ಟನೆ ನೀಡಿದ್ದಾರೆ.

ಕಮೆಂಟ್‌ ಮಾಡಿದ ವ್ಯಕ್ತಿಯನ್ನುದ್ದೇಶಿಸಿ ಬೈರತಿ ಸುರೇಶ್‌ ಅವಾಚ್ಯವಾಗಿ ನಿಂದಿಸಿರುವ ಮತ್ತು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ನೀರು ಉಚಿತ ಪೂರೈಸುವ ಟ್ಯಾಂಕ‌ರ್​ಗಳಿಗೆ ಚಾಲನೆ ನೀಡಿರುವ ಬಗ್ಗೆ ಸಚಿವ ಬೈರತಿ ಸುರೇಶ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್​ಗೆ ವ್ಯಕ್ತಿಯೊಬ್ಬ, ಇದೆಲ್ಲಾ ನಾಟಕ, ಜನ ಮೂರ್ಖರೆಂದು ಕಮೆಂಟ್ ಮಾಡಿದ್ದರು.

ಈ ಕಮೆಂಟ್‌ಗೆ ಭೈರತಿ ಸುರೇಶ್, ನಿನ್ನ ಅಡ್ರೆಸ್ ಕೊಡು ಹೊಡೆದು ಹಾಕ್ತೀನಿ. ನಿನ್ನ ಅಪ್ಪನಿಗೆ ಹುಟ್ಟಿದ್ರೆ ಅಡ್ರೆಸ್ ಹಾಕು, ಸೂ… ಎಂದೆಲ್ಲ ಕಮೆಂಟ್ ಮಾಡಿದ್ದಾರೆ ಎನ್ನಲಾಗಿದೆ.

ಈ ಕಮೆಂಟ್​ಗಳನ್ನು​ ಯಾರೋ ಸ್ಕ್ರೀನ್​ಶಾಟ್​ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದು, ಈ ಸ್ಕ್ರೀನ್ ಶಾಟ್'ಗಳು ವೈರಲ್​ ಆಗಿದೆ. ಇದರ ಬೆನ್ನಲ್ಲೇ ಫೇಸ್‌ಬುಕ್‌ನಿಂದ ಕಮೆಂಟ್​ಗಳನ್ನು ಡಿಲೀಟ್ ಮಾಡಲಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಭೈರತಿ ಸುರೇಶ್ ಅವರು, ನನ್ನ ಫೇಸ್​ಬುಕ್​ ಖಾತೆ ಹ್ಯಾಕ್​ ಆಗಿದೆ. ಈ ರೀತಿಯ ಮೆಸೇಜ್‌ಗಳಿಗೆ ಯಾರು ಕೂಡ ಅನ್ಯತಾ ಭಾವಿಸಬೇಡಿ ಎಂದು ಹೇಳಿದ್ದಾರೆ.

ಭೈರತಿ ಸುರೇಶ್
ತಾಕತ್ತಿದ್ದರೆ ಭೈರತಿ ಸುರೇಶ್ ನನ್ನ ವಿರುದ್ಧ ಮಾಡಿರುವ ಆರೋಪಗಳಿಗೆ ದಾಖಲೆ ಬಿಡುಗಡೆ ಮಾಡಲಿ: ಶೋಭಾ ಕರಂದ್ಲಾಜೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com