
ಬೆಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ಬಿದ್ದು 18 ತಿಂಗಳ ಮಗು ಸಜೀವ ದಹನವಾಗಿರುವ ಘಟನೆ ನಗರದ ಸ್ಯಾಂಕಿ ರಸ್ತೆಯ ಸಮ್ಮಿಟ್ ಅಪಾರ್ಟ್ಮೆಂಟ್ ನಲ್ಲಿ ಬುಧವಾರ ನಡೆದಿದೆ.
ದುರ್ಘಟನೆಯಲ್ಲಿ ನೇಪಾಳ ಮೂಲದ ಪುಷ್ಕರ ಕುಮಾರ್, ಜ್ಯೋತಿ ಕುಮಾರಿ ದಂಪತಿಯ 18 ತಿಂಗಳ ಪುತ್ರಿ ಅನು ಮೃತ ದುರ್ದೈವಿ.
ಕಳೆದ 8 ವರ್ಷಗಳಿಂದ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. 30 ಫ್ಲಾಟ್‌ಗಳನ್ನು ಹೊಂದಿರುವ ಅಪಾರ್ಟ್‌ಮೆಂಟ್‌ನ ರೂಮ್ ವೊಂದರಲ್ಲಿ ದಂಪತಿಗಳು ಮಗುವಿನೊಂದಿಗೆ ವಾಸವಿದ್ದರು. ಅಪಾರ್ಟ್ ಮೆಂಟ್ ನಲ್ಲಿ ಮನೆಗೆಲಸ ಮಾಡುತ್ತಿದ್ದ ದಂಪತಿಗಳು ದುರ್ಘಟನೆ ನಡೆದ ದಿನ ಮಗುವನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದರು.
ಈ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನಗೆ ಬೆಂಕಿ ಹೊತ್ತಿಕೊಂಡು ಮಗು ಸಜೀವ ದಹನವಾಗಿದೆ. ಬೆಂಕಿಯನ್ನು ನೋಡಿದ ಇತರೆ ನಿವಾಸಿಗಳು ಆತಂಕದಿಂದ ಹೊರ ಬಂದಿದ್ದಾರೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.
ಘಟನೆ ಬಳಿಕ ಹೈ ಗ್ರೌಂಡ್ಸ್ ಪೋಲಿಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement