
ಬೆಂಗಳೂರು: ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಢ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಗಾಯಗೊಂಡಿರುವ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ಕೃಷ್ಣಾ ಲೇಔಟ್‌ನ 3 ನೇ ಕ್ರಾಸ್ ಬಳಿಯ ಮೂರು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಢ ಸಂಭವಿಸಿದ್ದು, ಘಟನೆ ವೇಳೆ ಮೊದಲ ಮಹಡಿಯಲ್ಲಿ ಮಲಗಿದ್ದ ಶೀಲಾ (44), ಗೋಪಿ (49), ಅಭಿಷೇಕ್ (18) ಮತ್ತು ರಮ್ಯಾ (28) ಎಂಬ ನಾಲ್ವರು ಗಾಯಗೊಂಡಿದ್ದಾರೆ.
ಬೆಳಗಿನ ಜಾವ 2.40 ರ ಸುಮಾರಿಗೆ ನೆಲ ಮಹಡಿಯಲ್ಲಿರುವ ಮೀಟರ್ ಬೋರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೆಲ ಮಹಡಿಯಲ್ಲಿ ನಿಲ್ಲಿಸಿದ್ದ ಎರಡು ವಾಹನಗಳಿಗೂ ಬೆಂಕಿ ಹೊತ್ತಿಕೊಂಡಿದ್ದು, ಕಟ್ಟಡದಾದ್ಯಂತ ದಟ್ಟ ಹೊಗೆ ಆವರಿಸಿದೆ.
ಕೂಡಲೇ ನೆರೆಹೊರೆಯವರು, ಗೋಪಿ ಕುಟುಂಬದವರಿಗೆ ಕರೆ ಮಾಡಿ ಎಚ್ಚರಿಸಿದ್ದಾರೆ. ಆದರೆ, ಕೆಳಮಹಡಿಯಲ್ಲಿ ಮನೆಯಲ್ಲಿದ್ದ ಗೋಪಿ ಕುಟುಂಬದವರು, ಹೊಗೆ ಸೇವಿಸಿ ತೀವ್ರವಾಗಿ ಅಸ್ವಸ್ಥರಾಗಿದ್ದು, ಹೊರ ಬರಲಾಗದೆ ಸಂಕಷ್ಟಕ್ಕೆ ತುತ್ತಾಗಿದ್ದರು. ಈ ಘಟನೆ ಬಗ್ಗೆ ಮಾಹಿತಿ ಪಡೆದ ಬೇಗೂರು ಠಾಣೆ ಹೊಯ್ಸಳ ವಾಹನದ ಪೊಲೀಸರು, ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿ, ಸ್ಥಳೀಯರ ನೆರವಿನಿಂದ ಗೋಪಿ ಕುಟುಂಬವನ್ನು ರಕ್ಷಿಸಿದ್ದಾರೆ.
Advertisement