ಬೆಂಗಳೂರಿನಲ್ಲಿ 101 ಪ್ರವಾಹ ಪೀಡಿತ ಸ್ಥಳಗಳು; ಮಳೆಗಾಲಕ್ಕೂ ಮುನ್ನ 52 ಪ್ರದೇಶಗಳ ದುರಸ್ತಿ ಅನಿವಾರ್ಯ!

ರಾಜ್ಯ ಸರ್ಕಾರದ ₹1,500 ಕೋಟಿ ಅನುದಾನವನ್ನು ನಿಯಮಿತ ಹೂಳು ತೆಗೆಯುವಿಕೆ ಮತ್ತು ವಾರ್ಷಿಕ ನಿರ್ವಹಣೆಗಾಗಿ ಕಾಯ್ದಿರಿಸಲಾಗಿದ್ದು, 26 ದುರ್ಬಲ ಸ್ಥಳಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
With a Rs 1,500-crore State government grant reserved for regular desilting and annual maintenance, work is on to fix 26 vulnerable locations. (File Photo | Express)
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರಿನ ಐದು ಮಹಾನಗರ ಪಾಲಿಕೆಗಳಲ್ಲಿ ಒಟ್ಟು 101 ಪ್ರವಾಹ ಪೀಡಿತ ಸ್ಥಳಗಳ ಪೈಕಿ 52 ಸ್ಥಳಗಳನ್ನು ಇನ್ನೂ ಸರಿಪಡಿಸಿಲ್ಲ. TNIEಗೆ ಲಭ್ಯವಿರುವ ಮಾಹಿತಿ ಪ್ರಕಾರ, 49 ಸ್ಥಳಗಳನ್ನು ಮಳೆಗಾಲಕ್ಕೆ ಸಿದ್ಧಗೊಳಿಸಲಾಗಿದೆ.

ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆಯು 48 ದುರ್ಬಲ ಸ್ಥಳಗಳೊಂದಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿದ್ದರೆ, ದಕ್ಷಿಣ ಮಹಾನಗರ ಪಾಲಿಕೆಯು 24 ಸ್ಥಳಗಳನ್ನು, ಪೂರ್ವ ಮಹಾನಗರ ಪಾಲಿಕೆಯು 20 ಸ್ಥಳಗಳನ್ನು, ಉತ್ತರ ಮಹಾನಗರ ಪಾಲಿಕೆಯು ಆರು ಮತ್ತು ಬೆಂಗಳೂರು ಕೇಂದ್ರ ನಗರ ಪಾಲಿಕೆಯು ಕೇವಲ ಮೂರು ಪ್ರವಾಹ ಪೀಡಿತ ಸ್ಥಳಗಳನ್ನು ಹೊಂದಿದೆ.

ರಾಜ್ಯ ಸರ್ಕಾರದ ₹1,500 ಕೋಟಿ ಅನುದಾನವನ್ನು ನಿಯಮಿತ ಹೂಳು ತೆಗೆಯುವಿಕೆ ಮತ್ತು ವಾರ್ಷಿಕ ನಿರ್ವಹಣೆಗಾಗಿ ಕಾಯ್ದಿರಿಸಲಾಗಿದ್ದು, 26 ದುರ್ಬಲ ಸ್ಥಳಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ವಿಶ್ವ ಬ್ಯಾಂಕ್ ಮತ್ತು ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿಯ ಸಹಾಯದಿಂದ, ಬಾಕಿ ಇರುವ 52 ಸ್ಥಳಗಳಲ್ಲಿ 21 ಸ್ಥಳಗಳ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶುಕ್ರವಾರ ನಗರವನ್ನು ಪರಿಶೀಲಿಸಿದ ನಂತರ ಮುಂಗಾರು ಪೂರ್ವಸಿದ್ಧತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ACS) ತುಷಾರ್ ಗಿರಿನಾಥ್, ತುರ್ತು ಸಂದರ್ಭಗಳಲ್ಲಿ ಅಗ್ನಿಶಾಮಕ ದಳದ ತಂಡಗಳೊಂದಿಗೆ ಸಮನ್ವಯ ಸಾಧಿಸುವಂತೆ ಪಾಲಿಕೆಯ ತಂಡಗಳಿಗೆ ನಿರ್ದೇಶನ ನೀಡಿದರು. GBA ಮಿತಿಯಲ್ಲಿ ಮಳೆನೀರಿನ ಚರಂಡಿಗಳನ್ನು (SWD) ಹೂಳೆತ್ತುವ ಮೊದಲು ಮತ್ತು ನಂತರ ಡ್ರೋನ್ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ GBA ಅಧಿಕಾರಿಗಳಿಗೆ ಸೂಚಿಸಿದರು.

With a Rs 1,500-crore State government grant reserved for regular desilting and annual maintenance, work is on to fix 26 vulnerable locations. (File Photo | Express)
ಕೊನೆ ಹಂತದ ಲೋಡ್ ಟೆಸ್ಟಿಂಗ್: 5 ದಿನಗಳ ಕಾಲ ಪೀಣ್ಯ ಫ್ಲೈ ಓವರ್ ಬಂದ್; ಪ್ರಯಾಣಿಕರಿಗೆ ಪರ್ಯಾಯ ಮಾರ್ಗ

ಗಿರಿನಾಥ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಸಿಲ್ಕ್ ಬೋರ್ಡ್‌ನಲ್ಲಿ ಸ್ಕೈವಾಕ್ ಅನ್ನು ತ್ವರಿತವಾಗಿ ನಿರ್ಮಿಸಲು ನಿರ್ಧರಿಸಲಾಯಿತು. ಈ ಯೋಜನೆಯನ್ನು BMRCL ನಿರ್ವಹಿಸಲಿದ್ದು, ಔಟರ್ ರಿಂಗ್ ರೋಡ್ ಕಂಪನಿಗಳ ಸಂಘ (ಒಆರ್‌ಆರ್‌ಸಿಎ) ಬೆಂಬಲದೊಂದಿಗೆ, ಇದರ ಸದಸ್ಯ ಕಂಪನಿಗಳು ಇದಕ್ಕೆ ಹಣಕಾಸು ಒದಗಿಸುತ್ತವೆ. ಆದರೆ, ಜಿಬಿಎ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತದೆ.

ಸಭೆಯಲ್ಲಿ ಮಳೆಗಾಲ ಆರಂಭವಾಗುವ ಮೊದಲು ನೋಡಲ್ ಅಧಿಕಾರಿಗಳು ಮತ್ತು ಪಾಲಿಕೆಗಳು, ಬೆಸ್ಕಾಂ, ಬಿಡಬ್ಲ್ಯುಎಸ್ಎಸ್‌ಬಿ ಒಳಗೊಂಡ ತಂಡವನ್ನು ನೇಮಿಸಲು ಮತ್ತು ನಿಗಮ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲು ತುಷಾರ್ ಗಿರಿನಾಥ್ ನಿರ್ದೇಶನ ನೀಡಿದರು. ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಲು, ಉಪವಿಭಾಗ ಮಟ್ಟದಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲು ಮತ್ತು ಮಳೆಗಾಲಕ್ಕೆ ಅಗತ್ಯವಿರುವ ಎಲ್ಲ ಉಪಕರಣಗಳನ್ನು ಸಿದ್ಧವಾಗಿಡಲು ಸಹ ನಿರ್ದೇಶಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com