

ಬೆಂಗಳೂರು: ಬೆಂಗಳೂರಿನಲ್ಲಿರುವ ಆಪಲ್‌ನ ಅಗ್ರ ಐಫೋನ್ ಅಸೆಂಬ್ಲರ್ ಆಗಿರುವ ಫಾಕ್ಸ್‌ಕಾನ್‌ನ ಫ್ಯಾಕ್ಟರಿ ಶೌಚಾಲಯದೊಳಗೆ 19 ವರ್ಷದ ಯುವತಿಯೊಬ್ಬಳು ಶಿಶುವಿಗೆ ಜನ್ಮ ನೀಡಿದ್ದು, ಅದಾದ ಸ್ವಲ್ಪ ಸಮಯದ ನಂತರವೇ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ.
ದೇವನಹಳ್ಳಿಯ ಫಾಕ್ಸ್‌ಕಾನ್ ಕಾರ್ಖಾನೆಯ ಉದ್ಯೋಗಿಯಾಗಿರುವ ಆರೋಪಿ ರೇಣುಕಾ ಬುಧವಾರ ಶೌಚಾಲಯದೊಳಗೆ ಮಗುವಿಗೆ ಜನ್ಮ ನೀಡಿದ್ದಾಳೆ. ನಂತರ ಆಕೆಯು ಮಗುವಿನ ಗಂಟಲು ಸೀಳಿ ಕೊಂದು, ಶವವನ್ನು ಚೀಲದಲ್ಲಿ ಎಸೆದಿದ್ದಾಳೆ.
ಶೌಚಾಲಯಕ್ಕೆ ಹೋಗಿದ್ದ ಸಂದರ್ಭದಲ್ಲಿ ಹಠಾತ್ ಮತ್ತು ಯಾವುದೇ ಯೋಜನೆ ಇಲ್ಲದೆ ಹೆರಿಗೆಯಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಅವಿವಾಹಿತೆಯಾಗಿರುವ ರೇಣುಕಾ, ಅವಮಾನ ಮತ್ತು ಕಳಂಕಕ್ಕೆ ಹೆದರಿ ಮಗುವನ್ನು ಕೊಂದಿದ್ದಾಳೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಬ್ಬ ಉದ್ಯೋಗಿ ಶೌಚಾಲಯಕ್ಕೆ ಪ್ರವೇಶಿಸಿದಾಗ ಅವಶೇಷಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ, ತಪಾಸಣೆ ನಡೆಸಿ, ಶಿಶು ಜನನದ ನಂತರ ಸಾವಿಗೀಡಾಗಿರುವುದನ್ನು ದೃಢಪಡಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಮಹಿಳೆಯನ್ನು ರೇಣುಕಾ ಎಂದು ಗುರುತಿಸಲಾಗಿದೆ. ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಪ್ರಕರಣ ದಾಖಲಿಸಲಾಗಿದೆ.
Advertisement