ಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿ H1N1 ಫ್ಲೂ ಆತಂಕ: ಇಬ್ಬರಲ್ಲಿ ಸೋಂಕು ದೃಢ, 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು, ಕಬಾಬ್ ಅಂಗಡಿಗಳ ತೆರವಿಗೆ ಆಗ್ರಹ!

ಏಕಾಏಕಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
Flu outbreak at Clarence School in bengaluru
ಶಾಲಾ ಮಕ್ಕಳಲ್ಲಿ ಜ್ವರ-ಶೀತTNIE Agency
Updated on

ಬೆಂಗಳೂರು: ನಗರದ ರಿಚರ್ಡ್ಸ್ ಟೌನ್‌ನಲ್ಲಿರುವ ಕ್ಲಾರೆನ್ಸ್ ಹೈಸ್ಕೂಲ್‌ನಲ್ಲಿ ತೀವ್ರ ಜ್ವರ, ಶೀತ, ಕೆಮ್ಮು ಹಾಗೂ ಮೈಕೈ ನೋವು ಕಾಣಿಸಿಕೊಂಡಿದ್ದು, 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 21 ಸಿಬ್ಬಂದಿ ಅಸ್ವಸ್ಥರಾಗಿದ್ದಾರೆ ಎಂದು ಶಾಲಾ ಆಡಳಿತ ತಿಳಿಸಿದೆ.

ಋತುಮಾನದ ಫ್ಲೂ ಮಾದರಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಶಾಲೆಯನ್ನು ಆಗಸ್ಟ್ 18ರವರೆಗೆ ಬಂದ್ ಮಾಡಲಾಗಿದೆ.

ಶಾಲಾ ಆಡಳಿತ ಹೊರಡಿಸಿರುವ ಪತ್ರದ ಪ್ರಕಾರ, ಕನಿಷ್ಠ ಇಬ್ಬರಲ್ಲಿ H1N1 ಸೋಂಕು ದೃಢಪಟ್ಟಿದೆ. ಈ ಪೈಕಿ ಓರ್ವ ಸಿಬ್ಬಂದಿ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಏಕಾಏಕಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ಶಾಲಾ ಆವರಣದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

Flu outbreak at Clarence School in bengaluru
ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕಟಿಬದ್ಧ: ಶಾಲಾ ಆವರಣಗಳಲ್ಲಿ ಜಂಕ್ ಫುಡ್ ನಿಷೇಧಕ್ಕೆ ಸರ್ಕಾರ ಸಿದ್ಧ?

ಶಾಲೆಯ ಹೊರಗಿನ ಆಹಾರ ಮಳಿಗೆಗಳ ಬಗ್ಗೆಯೂ ಆತಂಕ

ಇದೇ ವೇಳೆ, ಶಾಲೆಯ ಸುತ್ತಮುತ್ತ ಕಾರ್ಯನಿರ್ವಹಿಸುತ್ತಿರುವ ಹಲವು ಬೀದಿ ಆಹಾರ ಮಳಿಗೆಗಳು ಹಾಗೂ ಇತರ ವ್ಯಾಪಾರಿಗಳ ಬಗ್ಗೆ ಶಾಲಾ ಆಡಳಿತ ಆತಂಕ ವ್ಯಕ್ತಪಡಿಸಿದೆ. ಅಸ್ವಚ್ಛ ವಾತಾವರಣ, ತ್ಯಾಜ್ಯ ಸಂಗ್ರಹ ಹಾಗೂ ಸ್ವಚ್ಛತೆಯ ಕೊರತೆಯಿಂದ ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚುವರಿ ಅಪಾಯ ಉಂಟಾಗಬಹುದು ಎಂದು ಶಾಲೆ ಹೇಳಿದೆ.

ಕಬಾಬ್ ಅಂಗಡಿಗಳ ತೆರವಿಗೆ ಆಗ್ರಹ!

ಕ್ಲಾರ್ಕ್ ರಸ್ತೆಯಲ್ಲಿರುವ ಶಾಲೆಯ ಕಿಂಡರ್‌ಗಾರ್ಟನ್ ಗೇಟ್‌ ಮುಂಭಾಗದಲ್ಲಿ ಕೆಲ ವ್ಯಾಪಾರಿಗಳು ಅಡ್ಡಿಪಡಿಸುತ್ತಿದ್ದು, ಅಲ್ಲಿಯೇ ತ್ಯಾಜ್ಯ ಸಂಗ್ರಹವಾಗುತ್ತಿದೆ ಎಂದು ಶಾಲೆ ಆರೋಪಿಸಿದೆ. ಅದೇ ರೀತಿ, ಪಾಟರಿ ರಸ್ತೆ–ಜಾನ್ ಆರ್ಮ್‌ಸ್ಟ್ರಾಂಗ್ ರಸ್ತೆ ಜಂಕ್ಷನ್ ಬಳಿ ಕಾರ್ಯನಿರ್ವಹಿಸುತ್ತಿರುವ ಕಬಾಬ್ ಮಳಿಗೆಯಿಂದ ನಿರಂತರವಾಗಿ ತ್ಯಾಜ್ಯ ಹಾಗೂ ಸ್ವಚ್ಛತೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಶಾಲಾ ಆಡಳಿತ ತಿಳಿಸಿದೆ.

Flu outbreak at Clarence School in bengaluru
ಶಾಲೆಗಳ ಸುತ್ತಮುತ್ತ ಜಂಕ್‌ ಫುಡ್ ಗೆ ನಿಷೇಧ; ಪ್ರೊಟೀನ್ ಯುಕ್ತ ಆಹಾರ ಬಳಕೆಗೆ ಉತ್ತೇಜನ: ಆರೋಗ್ಯ ಸಚಿವ ಯು.ಟಿ ಖಾದರ್; Video

ಆಹಾರ ಮಳಿಗೆಗಳ ತಕ್ಷಣ ತಪಾಸಣೆಗೆ ಮನವಿ

ಶಾಲೆಯ ಸುತ್ತಮುತ್ತ ಇರುವ ಆಹಾರ ಮಳಿಗೆಗಳ ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳ ತಕ್ಷಣದ ಪರಿಶೀಲನೆ ನಡೆಸುವಂತೆ ಶಾಲಾ ಆಡಳಿತ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದೆ. ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತ ಜಂಕ್ ಫುಡ್ ಮಾರಾಟದ ಮೇಲೆ ನಿರ್ಬಂಧಗಳನ್ನು ಜಾರಿಗೊಳಿಸುವಂತೆಯೂ ನಾಗರಿಕ ಅಧಿಕಾರಿಗಳಿಗೆ ಮನವಿ ಮಾಡಿದೆ.

ಈ ಕುರಿತು ಈಗಾಗಲೇ ಶಿಕ್ಷಣಾಧಿಕಾರಿ ಹಾಗೂ ನಗರ ಪಾಲಿಕೆಯ ಆರೋಗ್ಯಾಧಿಕಾರಿಯನ್ನು ಸಂಪರ್ಕಿಸಿರುವುದಾಗಿ ಶಾಲಾ ಆಡಳಿತ ತಿಳಿಸಿದೆ. ಪರಿಸ್ಥಿತಿ ಮತ್ತಷ್ಟು ಉಲ್ಬಣಿಸುವ ಮುನ್ನ ತುರ್ತು ಕ್ರಮ ಕೈಗೊಳ್ಳುವಂತೆ ಅದು ಮನವಿ ಮಾಡಿದೆ. “ನಾವು ಭಯಭೀತರಾಗಿಲ್ಲ. ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ. ಆದರೆ ಇದನ್ನು ನಾವು ಒಬ್ಬರೇ ಮಾಡಲು ಸಾಧ್ಯವಿಲ್ಲ” ಎಂದು ಶಾಲೆ ತನ್ನ ಪತ್ರದಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com