ನೇಪಾಳ ಪ್ರವಾಹ: ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ CEO ನಾಪತ್ತೆ

ಐಟಿ ಸೇವಾ ದಿಗ್ಗಜ ಇನ್ಫೋಸಿಸ್‌ನ ಅಂಗಸಂಸ್ಥೆಯಾಗಿರುವ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಮುಖ್ಯವಾಗಿ ಅಮೆರಿಕ ಮತ್ತು ಕೆನಡಾದ ಸಾರ್ವಜನಿಕ ವಲಯಕ್ಕೆ ಸೇವೆಗಳನ್ನು ಒದಗಿಸುತ್ತದೆ.
Infosys said Public Services' chief Lax Gopisetty is not reachable following the devastating floods in Nepal
ನೇಪಾಳ ಪ್ರವಾಹದಲ್ಲಿ ತನ್ನ ಅಂಗಸಂಸ್ಥೆ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್‌ನ ಮುಖ್ಯಸ್ಥ ಲ್ಯಾಕ್ಸ್ ಗೋಪಿಸೆಟ್ಟಿ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಇನ್ಫೋಸಿಸ್ ತಿಳಿಸಿದೆ.
Updated on

ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್‌ನ ಮುಖ್ಯಸ್ಥ ಲ್ಯಾಕ್ಸ್ ಗೋಪಿಸೆಟ್ಟಿ ಅವರು ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಬಳಿಕ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಐಟಿ ಸೇವಾ ಸಂಸ್ಥೆ ಇನ್ಫೋಸಿಸ್ ತಿಳಿಸಿದೆ.

ಐಟಿ ಸೇವಾ ದಿಗ್ಗಜ ಇನ್ಫೋಸಿಸ್‌ನ ಅಂಗಸಂಸ್ಥೆಯಾಗಿರುವ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ ಮುಖ್ಯವಾಗಿ ಅಮೆರಿಕ ಮತ್ತು ಕೆನಡಾದ ಸಾರ್ವಜನಿಕ ವಲಯಕ್ಕೆ ಸೇವೆಗಳನ್ನು ಒದಗಿಸುತ್ತದೆ.

ಗೋಪಿಸೆಟ್ಟಿ ಅವರು ವೈಯಕ್ತಿಕ ಪ್ರವಾಸದ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದ್ದರು. ಅವರ ಸುರಕ್ಷತೆ ಮತ್ತು ಕ್ಷೇಮವನ್ನು ಖಚಿತಪಡಿಸಿಕೊಳ್ಳುವುದು ಸದ್ಯ ತಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇನ್ಫೋಸಿಸ್ ಹೇಳಿಕೆಯಲ್ಲಿ ತಿಳಿಸಿದೆ.

Infosys said Public Services' chief Lax Gopisetty is not reachable following the devastating floods in Nepal
ವಿದೇಶಿ ರಕ್ಷಣಾ ಸಹಾಯ ತಿರಸ್ಕರಿಸಿದ ನೇಪಾಳ? 320 ಜನರು ಇನ್ನೂ ಕಣ್ಮರೆ!

ವೈಯಕ್ತಿಕ ಪ್ರವಾಸದ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದ್ದ ನಮ್ಮ ಸಹೋದ್ಯೋಗಿ ಲ್ಯಾಕ್ಸ್ ಗೋಪಿಸೆಟ್ಟಿ ಅವರು ಸದ್ಯ ಸಂಪರ್ಕಕ್ಕೆ ಸಿಗುತ್ತಿಲ್ಲ ” ಎಂದು ಇನ್ಫೋಸಿಸ್ ತಿಳಿಸಿದೆ.

ಗೋಪಿಸೆಟ್ಟಿ ಅವರೊಂದಿಗೆ ಸಂಪರ್ಕ ಸಾಧಿಸಲು ಹಾಗೂ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಂಬಂಧಿತ ಸಂಸ್ಥೆಗಳೊಂದಿಗೆ ಕಂಪನಿ ಕಾರ್ಯನಿರ್ವಹಿಸುತ್ತಿದೆ ಎಂದು ಇನ್ಫೋಸಿಸ್ ಹೇಳಿದೆ.

ಕಂಪನಿಯು ಗೋಪಿಸೆಟ್ಟಿ ಅವರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಈ ಕಷ್ಟದ ಸಮಯದಲ್ಲಿ ಅಗತ್ಯವಿರುವ ಎಲ್ಲ ನೆರವನ್ನು ಒದಗಿಸುತ್ತಿದೆ ಎಂದು ತಿಳಿಸಿದೆ.

ನಾವು ಕುಟುಂಬದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಈ ಕಷ್ಟದ ಸಮಯದಲ್ಲಿ ಅಗತ್ಯವಿರುವ ಎಲ್ಲ ನೆರವನ್ನು ನೀಡುತ್ತಿದ್ದೇವೆ. ಲ್ಯಾಕ್ಸ್ ಮತ್ತು ಈ ದುರಂತದಿಂದ ಬಾಧಿತರಾದ ಎಲ್ಲರೊಂದಿಗೂ ನಮ್ಮ ಚಿಂತನೆಗಳಿವೆ ಎಂದು ಇನ್ಫೋಸಿಸ್ ಹೇಳಿದೆ.

Infosys said Public Services' chief Lax Gopisetty is not reachable following the devastating floods in Nepal
ಇನ್ಫೋಸಿಸ್ ನ ಜಾಗತಿಕ ಬ್ರ್ಯಾಂಡ್ ರಾಯಭಾರಿಯಾಗಿ Carlos Alcaraz ನೇಮಕ

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಇದರಿಂದ ಉಂಟಾದ ಜೀವಹಾನಿಗೆ ತೀವ್ರ ದುಃಖ ವ್ಯಕ್ತಪಡಿಸಿರುವುದಾಗಿ ಇನ್ಫೋಸಿಸ್ ತಿಳಿಸಿದೆ.

ನೇಪಾಳ-ಟಿಬೆಟ್ ಗಡಿಯುದ್ದಕ್ಕೂ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ಬಳಿಕ ಕನಿಷ್ಠ 320 ಭಾರತೀಯರು ನಾಪತ್ತೆಯಾಗಿದ್ದು, ಮತ್ತೂ 400 ಮಂದಿ ಚೀನಾದ ಭಾಗದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ. ಪರಿಸ್ಥಿತಿ ನಿಭಾಯಿಸಲು ಕಠ್ಮಂಡುವಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಭಾರತ ಸಿದ್ಧವಿದೆ ಎಂದು ಸಚಿವಾಲಯ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com