FSDA ನೋಟಿಸ್ ಬೆನ್ನಲ್ಲೇ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿವಾದಿತ 'ಪೆಪ್ಟೈಡ್ ಪಾರ್ಟಿ' ರದ್ದು

'ಪೆಪ್ಟೈಡ್ ಪಾರ್ಟಿ' ಆಯೋಜಕರಿಗೆ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ನೋಟಿಸ್ ನೀಡಿದ ನಂತರ ಪಾರ್ಟಿಯನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
'Peptide Party' in Bengaluru cancelled after FSDA notice
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೋರಮಂಗಲದಲ್ಲಿ ಶನಿವಾರ ನಿಗದಿಯಾಗಿದ್ದ "ಪೆಪ್ಟೈಡ್ ಪಾರ್ಟಿ"ಯನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಪೆಪ್ಟೈಡ್ ಪಾರ್ಟಿ' ಆಯೋಜಕರಿಗೆ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ನೋಟಿಸ್ ನೀಡಿದ ನಂತರ ಪಾರ್ಟಿಯನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೆಪ್ಟೈಡ್ ಸಿದ್ಧತೆಗಳ ಕುರಿತು ವಿವರವಾದ ಮಾಹಿತಿ ಕೋರಿ ಎಫ್‌ಎಸ್‌ಡಿಎ ನೋಟಿಸ್ ನೀಡಿದ ನಂತರ ಈ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

'Peptide Party' in Bengaluru cancelled after FSDA notice
ಬಿಡದಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ಅಕ್ರಮ ಪತ್ತೆ; ₹4.91 ಕೋಟಿ ಮೌಲ್ಯದ ನಕಲಿ ಔಷಧಗಳನ್ನು ವಶಪಡಿಸಿಕೊಂಡ FDA; Video

ಪ್ರಸ್ತಾವಿತ ಪಾರ್ಟಿಯು, ಭಾರತದ ಮೊದಲ ಪೆಪ್ಟೈಡ್ ಪಾರ್ಟಿ ಎಂದು ಪ್ರಚಾರ ಮಾಡಿದ್ದು, "ಪೆಪ್ಟೈಡ್‌ಗಳ ಅಭಿರುಚಿ, ಸಂಗೀತ, ಆಹಾರ ಮತ್ತು ಆಟಗಳು ಇಲ್ಲಿರಲಿವೆ. 50 ಜನರಿಗೆ ಮಾತ್ರ ಪ್ರವೇಶವಿದೆ ಎಂದು ಪ್ರಚಾರ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಕಾರ್ಯಕ್ರಮವನ್ನು 'ಅಪ್‌ಸರ್ಜ್ ಲ್ಯಾಬ್ಸ್' ಸಂಸ್ಥೆಯ ಜೊತೆ ಗುರುತಿಸಿಕೊಂಡಿರುವ ಅನುಷ್ಕಾ ಸಿಂಗ್ ಅವರು ಆಯೋಜಿಸಿದ್ದರು. ಆದರೆ ನಿಯಂತ್ರಣವಿಲ್ಲದ ಸ್ಥಳಗಳಲ್ಲಿ ಪೆಪ್ಟೈಡ್ ಬಳಕೆಯ ಅಪಾಯಗಳ ಕುರಿತು ಆರೋಗ್ಯ ತಜ್ಞರು ಎಚ್ಚರಿಸಿದ ಬೆನ್ನಲ್ಲೇ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ(FSDA) ನೋಟಿಸ್ ನೀಡಿದ್ದು, ಕಾರ್ಯಕ್ರಮದಲ್ಲಿ ಪ್ರಚಾರ ಮಾಡಲು ಅಥವಾ ವಿತರಿಸಲು ಉದ್ದೇಶಿಸಿದ್ದ ಪೆಪ್ಟೈಡ್‌ಗಳ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ಅಪ್‌ಸರ್ಚ್‌ ಲ್ಯಾಬ್ಸ್ ಎಲ್‌ಎಲ್‌ಪಿ ಸಂಸ್ಥೆಗೆ ಮತ್ತು ಆಯೋಜಕರಿಗೆ ಸೂಚಿಸಿದೆ.

ಇವುಗಳ ಸಂಯೋಜನೆ, ಡೋಸೇಜ್, ತಯಾರಕರು, ಬ್ಯಾಚ್ ಸಂಖ್ಯೆ ಹಾಗೂ ಇವು ತನಿಖಾ ಹಂತದ ಔಷಧಿಗಳೇ ಅಥವಾ ಅನುಮೋದಿತ ಉತ್ಪನ್ನಗಳೇ ಎಂಬುದನ್ನು ಸ್ಪಷ್ಟಪಡಿಸಲು, ತೂಕ ನಷ್ಟ, ಸ್ನಾಯುಗಳ ಬೆಳವಣಿಗೆ, ವಯಸ್ಸಾಗುವಿಕೆ ತಡೆಯುವಿಕೆ, ಮಧುಮೇಹ ಹಾಗೂ ಅಥ್ಲೆಟಿಕ್ ಸಾಮರ್ಥ್ಯ ಹೆಚ್ಚಳಕ್ಕೆ ಸಂಬಂಧಿಸಿದಂತೆ ನೀಡಲಾದ ಚಿಕಿತ್ಸಕ ಹಕ್ಕುಗಳಿಗೆ ವೈಜ್ಞಾನಿಕ ಪುರಾವೆ ಒದಗಿಸುವಂತೆ ಇಲಾಖೆ ದಾಖಲೆ ನೀಡುವಂತೆ ಸೂಚಿಸಿದೆ.

ಈವೆಂಟ್‌ಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಅಧಿಕೃತ ಪ್ರತಿನಿಧಿಗೆ ಸೂಚಿಸಲಾಗಿದ್ದು, ದಾಖಲೆಗಳನ್ನು ಸಲ್ಲಿಸಲು ಸೂಕ್ತ ಸಮಯವನ್ನು ನೀಡಲಾಗಿದೆ ಎಂದು FSDA ತಿಳಿಸಿದೆ.

ಆಗಸ್ಟ್ 29 ರಂದು ಬೆಂಗಳೂರಿನ ಕೋರಮಂಗಲದಲ್ಲಿ ನಡೆಸಲು ಉದ್ದೇಶಿಸಿದ್ದ "ಪೆಪ್ಟೈಡ್ ಪಾರ್ಟಿ"ಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ಪೋಸ್ಟ್/ಪ್ರಚಾರದ ನಂತರ ಈ ವಿಷಯ FSDA ಕಚೇರಿಯ ಗಮನಕ್ಕೆ ಬಂದಿದೆ ಎಂದು ಇಲಾಖೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com