GBA ಚುನಾವಣೆ: ಲೋಪ ಸರಿಪಡಿಸಲು ಚುನಾವಣಾ ಆಯೋಗ ಕ್ರಮ, ಮತದಾರರ ಪಟ್ಟಿ ಪ್ರಕಟಣೆಯ ಗಡುವು ವಿಸ್ತರಣೆ

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಮಾರ್ಚ್ 9ರಂದು ತಿದ್ದುಪಡಿ ಕರಡು ಪಟ್ಟಿ ಪ್ರಕಟವಾಗಲಿದ್ದು, ಮಾರ್ಚ್ 16ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇರುತ್ತದೆ.
Greater Bengaluru Authority
ಗ್ರೇಟರ್ ಬೆಂಗಳೂರು ಪ್ರಾಧಿಕಾರ
Updated on

ಬೆಂಗಳೂರು: ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಅಂತಿಮ ವಾರ್ಡ್‌ವಾರು ಮತದಾರರ ಪಟ್ಟಿ ಪ್ರಕಟ ದಿನಾಂಕವನ್ನು ರಾಜ್ಯ ಚುನಾವಣಾ ಆಯೋಗ ಮುಂದೂಡಿದೆ.

ತತ್ಕಾಲದಲ್ಲಿ ಜಾರಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ವಾರ್ಡುವಾರು ಕರಡು ಮತದಾರರ ಪಟ್ಟಿಯನ್ನು ಜ.19 ರಂದು ಪ್ರಕಟಿಸಲಾಗಿತ್ತು.

ಕರಡು ಮತದಾರರ ಪಟ್ಟಿಯ ಕುರಿತು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರಿಂದ ಹಲವಾರು ದೂರುಗಳು ಸ್ವೀಕೃತಗೊಂಡ ಹಿನ್ನೆಲೆಯಲ್ಲಿ ಗ್ರೇಟರ್‌ ಬೆಂಗಳೂರು ಆಡಳಿತ (ಮತದಾರರ ನೋಂದಣಿ) ನಿಯಮಗಳು, 2025ರ ನಿಯಮ 30 ರನ್ವಯ ತತ್ಕಾಲದಲ್ಲಿ ಜಾರಿಯಲ್ಲಿರುವ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳಿಗೆ ವಾರ್ಡ್ ವಾರು ಮತದಾರರ ಪಟ್ಟಿಯನ್ನು ತಯಾರಿಸುವುದು ಸೂಕ್ತವೆಂದು ಆಯೋಗ ಹೊಸ ದಿನಾಂಕವನ್ನು ಘೋಷಣೆ ಮಾಡಿದೆ.

ಕರಡು ಮತದಾರರ ಪಟ್ಟಿಯನುಸಾರ ವಾರ್ಡುವಾರು ವಿಂಗಡಣೆಗೊಂಡಿರುವ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳ ಪ್ರದೇಶ ಮತ್ತು ಮತದಾರರನ್ನು ಭೌತಿಕವಾಗಿ ಪರಿಶೀಲನೆ ಮಾಡಿದಾಗ ಕೆಲವು ಪ್ರದೇಶಗಳಲ್ಲಿ ಮತದಾರರ ವಿವರಗಳು ಅದಲು-ಬದಲು ಆಗಿದ್ದು, ಭೌಗೋಳಿಕವಾಗಿ ಒಂದು ವಾರ್ಡಿನಲ್ಲಿ ವಾಸವಾಗಿರುವ ಮತದಾರರು ಮತ್ತೊಂದು ವಾರ್ಡಿನ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದು ಹಾಗೂ ಮತಗಟ್ಟೆಗಳ ಕೊಠಡಿ ಸಂಖ್ಯೆಗಳು ನಮೂದಿಸುವಲ್ಲಿ ತಪ್ಪುಗಳಾಗಿದ್ದು, ಸದರಿ ಲೋಪದೋಷಗಳನ್ನು ಸರಿಪಡಿಸಲು ಅವಕಾಶವಿದ್ದು,ಈ ಕೆಳಕಂಡಂತೆ ಪರಿಷ್ಕೃತ ಕಾರ್ಯಕ್ರಮ ಪಟ್ಟಿಯನ್ನು ರೂಪಿಸಲಾಗಿದೆ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಮಾರ್ಚ್ 9ರಂದು ತಿದ್ದುಪಡಿ ಕರಡು ಪಟ್ಟಿ ಪ್ರಕಟವಾಗಲಿದ್ದು, ಮಾರ್ಚ್ 16ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇರುತ್ತದೆ. ಮಾರ್ಚ್ 28ರಿಂದ ಏಪ್ರಿಲ್ 4ರವರೆಗೆ ಅಂತಿಮ ವಾರ್ಡ್‌ವಾರು ಪಟ್ಟಿ ಮುದ್ರಣ ನಡೆಯಲಿದ್ದು, ಏ.6 ರಂದು ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗವು ಹೇಳಿದೆ.

Greater Bengaluru Authority
ಜಾತಿಗಣತಿ: ಜಿಬಿಎ ವ್ಯಾಪ್ತಿಯಲ್ಲಿ 10 ದಿನದಲ್ಲಿ 13.12 ಲಕ್ಷ ಮನೆಗಳ ಸಮೀಕ್ಷೆ ಪೂರ್ಣ..!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com