

ಬೆಂಗಳೂರು: ಎರಡೆರಡು ಮದುವೆ ಮಾಡಿಕೊಂಡು 8 ಮಕ್ಕಳನ್ನು ಹುಟ್ಟಿಸಿದ್ದ ರೌಡಿಶೀಟರ್ಗೆ ಇದೀಗ ಆತನ ಮೊದಲ ಪತ್ನಿಯನ್ನು ಕಂಡರೆ ಹೆದರುವಂತಾಗಿದೆ. ಬೆಂಗಳೂರಿನ ಜೆಜೆ ನಗರದಲ್ಲಿ ಈ ಘಟನೆ ನಡೆದಿದ್ದು ರೌಡಿಶೀಟರ್ ಸೈಯದ್ ಅಸ್ಗರ್ ಗೆ ಎರಡನೇ ಪತ್ನಿಯನ್ನು ಬಿಟ್ಟು ಬರುವಂತೆ ಹೇಳಿ ಆತನ ಮೊದಲ ಪತ್ನಿಯೇ ಚೂರಿ ಇರಿದಿದ್ದಾಳೆ. ರೌಡಿಶೀಟರ್ ಸೈಯದ್ ಕೈ ಮುರಿದಿದ್ದಲ್ಲದೆ, ಕಣ್ಣಿಗೆ ಚಾಕು ಕೂಡ ಇರಿದಿದ್ದಾಳೆ.
ಗಾಯಗೊಂಡಿರುವ ಸೈಯದ್ ಇದೀಗ ಹೆದರಿದ್ದು ಮೊದಲ ಪತ್ನಿಯ ವಿರುದ್ಧ ಜೆಜೆ ನಗರ ಠಾಣೆಗೆ ದೂರು ನೀಡಿದ್ದಾನೆ. ಸೈಯದ್ ಗೆ ಎರಡನೇ ಪತ್ನಿ ಸಾಥ್ ಕೊಟ್ಟಿದ್ದಾಳೆ. ಇದಕ್ಕೂ ಮೊದಲೇ ರೌಡಿಶೀಟರ್ ಸೈಯದ್ ಅಸ್ಗರ್ ಮೊದಲ ಪತ್ನಿ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಳು. ನಿನ್ನ ತಲೆ ಕಡಿಯುತ್ತೇನೆ, ಎರಡು ದಿನ ಕಾಯುವೆ ಎಂದು ಮಚ್ಚು ಹಿಡಿದು ಎಚ್ಚರಿಕೆ ಕೊಟ್ಟಿದ್ದಳು. ಸದ್ಯ ರೌಡಿಶೀಟರ್ನಿಂದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Advertisement