ಚಿಕನ್ ಪ್ರಿಯರಿಗೆ ಶಾಕ್: ಕೋಳಿ ಮಾಂಸದ ದರದಲ್ಲಿ ಭಾರೀ ಏರಿಕೆ; ಈ ದಿಢೀರ್‌ ಬೆಲೆ ಏರಿಕೆಗೆ ಕಾರಣವೇನು?

ಕಳೆದ ಡಿಸೆಂಬರ್ ತಿಂಗಳಲ್ಲಿ ಕೆಜಿ ಕೋಳಿ ಮಾಂಸ 260 ರಿಂದ 280 ರೂಗಳ ನಡುವೆ ದೊರೆಯುತ್ತಿತ್ತು. ಇದೀಗ ಅದೇ ಚಿಕನ್ ಬೆಲೆ 340 ರಿಂದ 350 ರೂ ಗಡಿ ದಾಟಿದೆ. ಕೆಲ ಪ್ರದೇಶಗಳಲ್ಲಿ ಈಗಾಗಲೇ ಕೆಜಿಗೆ 350 ರೂ ದರ ತಲುಪಿದೆ.
Representational image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕರ್ನಾಟಕದಲ್ಲಿ ಕೋಳಿ ಮಾಂಸದ ಬೆಲೆ ದಿನೇದಿನೇ ಏರಿಕೆಯಾಗುತ್ತಿದ್ದು, ಕಳೆದ ಎರಡು ವಾರಗಳಲ್ಲಿ ಪ್ರತಿ ಕೆ.ಜಿ ಮೇಲೆ ಸುಮಾರು 100 ರೂಗೂ ಹೆಚ್ಚಾಗಿದೆ. ಇದರಿಂದ ಚಿಕನ್‌ ಪ್ರಿಯರ ಜೇಬು ಸುಡುತ್ತಿದೆ. ಸದ್ಯ ಬೆಂಗಳೂರು ಸೇರಿ ವಿವಿಧೆಡೆ ಚಿಕನ್‌ ದರ ಕೆ.ಜಿಗೆ ₹350 ದಾಟಿದೆ. ಈ ದಿಢೀರ್‌ ಬೆಲೆ ಏರಿಕೆಗೆ ಕಾರಣ ಏನು ಎನ್ನುವ ಮಾಹಿತಿ ಇಲ್ಲಿದೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ಕೆಜಿ ಕೋಳಿ ಮಾಂಸ 260 ರಿಂದ 280 ರೂಗಳ ನಡುವೆ ದೊರೆಯುತ್ತಿತ್ತು. ಇದೀಗ ಅದೇ ಚಿಕನ್ ಬೆಲೆ 340 ರಿಂದ 350 ರೂ ಗಡಿ ದಾಟಿದೆ. ಕೆಲ ಪ್ರದೇಶಗಳಲ್ಲಿ ಈಗಾಗಲೇ ಕೆಜಿಗೆ 350 ರೂ ದರ ತಲುಪಿದ್ದು, ಮುಂದಿನ ದಿನಗಳಲ್ಲಿ 370–380 ರೂ ಆಗುವ ಸಾಧ್ಯತೆಯೂ ಇದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.

ಕೋಳಿ ಮಾಂಸದ ದಿಢೀರ್ ಬೆಲೆ ಏರಿಕೆಗೆ ಹಲವು ಕಾರಣಗಳಿವೆ. ಪ್ರಮುಖವಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಕೋಳಿ ಸಾಕಾಣೆದಾರರು ನಡೆಸುತ್ತಿರುವ ಪ್ರತಿಭಟನೆ ಇದಕ್ಕೆ ಕಾರಣ ಎನ್ನಲಾಗಿದೆ. ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಪನಿಗಳು ಹೆಚ್ಚು ಹಣ ನೀಡಬೇಕು ಎಂದು ಕೋಳಿ ಸಾಕಾಣೆದಾರರು ಒತ್ತಾಯಿಸುತ್ತಿದ್ದಾರೆ. ಇದೇ ಸಮಯದಲ್ಲಿ ಕೋಳಿ ಉತ್ಪಾದನೆಯಲ್ಲೂ ಕುಸಿತ ಕಂಡುಬಂದಿದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ.

Representational image
ಮೊಟ್ಟೆ ಬೆಲೆ ಹೊಸ ದಾಖಲೆ: ಗ್ರಾಹಕರಿಗೆ ದರ ಏರಿಕೆ ಶಾಕ್; ಜನವರಿಯಲ್ಲಿ ಇಳಿಕೆ ಸಾಧ್ಯತೆ

ಇದರಿಂದ ಮಾರುಕಟ್ಟೆಯಲ್ಲಿ ಚಿಕನ್ ಕೊರತೆ ಉಂಟಾಗಿ, ದರ ಏರಿಕೆಗೆ ಕಾರಣವಾಗಿದೆ. ಜನವರಿ 1ರಿಂದ ಕೋಳಿ ಉತ್ಪಾದನೆ ಸಂಪೂರ್ಣ ಸ್ಥಗಿತಗೊಳಿಸುವ ಮೂಲಕ ಹೋರಾಟ ತೀವ್ರಗೊಳಿಸಿದ್ದಾರೆ. ಈ ಹಿನ್ನೆಲೆ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಗೆ ಕೋಳಿ ಮಾಂಸದ ಪೂರೈಕೆ ಬಹುತೇಕ ಸ್ಥಗಿತಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com