ಮಕ್ಕಳ ಮೇಲೆ ದೌರ್ಜನ್ಯ: ಐಟಿ ಕಂಪನಿಯ ಡೇಕೇರ್ ಕೇಂದ್ರದ 5 ಮಹಿಳಾ ಸಿಬ್ಬಂದಿ ವಿರುದ್ಧ FIR ದಾಖಲು!

ಮಕ್ಕಳು ಅಳುತ್ತಿರುವುದು ಮತ್ತು ಆರೈಕೆದಾರರು ದೈಹಿಕ ಕಿರುಕುಳ ಮತ್ತು ಚಿತ್ರಹಿಂಸೆ ನೀಡುತ್ತಿರುವುದು ವಿಡಿಯೋಗಳಲ್ಲಿ ಸೆರೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Representative Image
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮಕ್ಕಳ ಮೇಲೆ ದೈಹಿಕವಾಗಿ ದೌರ್ಜನ್ಯ ಎಸಗಿದ ಆರೋಪದ ಮೇಲೆ ಇಲ್ಲಿನ ಐಟಿ ಕಂಪನಿ ಆವರಣದೊಳಗಿನ ಡೇಕೇರ್ ಕೇಂದ್ರದ ಐವರು ಮಹಿಳಾ ಉದ್ಯೋಗಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಬ್ರೂಕ್‌ಫೀಲ್ಡ್‌ನಲ್ಲಿರುವ ಮಕ್ಕಳ ಆರೈಕೆ ಕೇಂದ್ರದಲ್ಲಿ ಈ ದೌರ್ಜನ್ಯ ನಡೆದಿದ್ದು, ಐಟಿ ಕಂಪನಿಯ ಉದ್ಯೋಗಿಗಳು ಕೆಲಸದಲ್ಲಿರುವಾಗ ತಮ್ಮ ಮಕ್ಕಳನ್ನು ಇಲ್ಲಿ ಬಿಟ್ಟು ಹೋಗುತ್ತಾರೆ ಎಂದು ಅವರು ಹೇಳಿದರು.

ಸೋಮವಾರ ಈ ಘಟನೆ ನಡೆದಿರುವುದನ್ನು ತೋರಿಸುವ ವಿಡಿಯೋಗಳನ್ನು ವಾಟ್ಸಾಪ್‌ನಲ್ಲಿ ಪ್ರಸಾರ ಮಾಡಿ, ನಂತರ ಮಕ್ಕಳ ಸಹಾಯವಾಣಿಗೆ ವರದಿ ಮಾಡಿದ ನಂತರ ಬೆಳಕಿಗೆ ಬಂದಿದೆ.

ಮಕ್ಕಳು ಅಳುತ್ತಿರುವುದು ಮತ್ತು ಆರೈಕೆದಾರರು ದೈಹಿಕ ಕಿರುಕುಳ ಮತ್ತು ಚಿತ್ರಹಿಂಸೆ ನೀಡುತ್ತಿರುವುದು ವಿಡಿಯೋಗಳಲ್ಲಿ ಸೆರೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಎರಡರಿಂದ ಮೂರು ವರ್ಷದೊಳಗಿನ ಮಕ್ಕಳು ಅಳುವಾಗ ಅಥವಾ ತೊಂದರೆ ಕೊಟ್ಟಾಗ ಆರೈಕೆದಾರರು ಅವರನ್ನು ಬೆದರಿಸುತ್ತಿರುವುದು ವಿಡಿಯೋಗಳಲ್ಲಿ ಸೆರೆಯಾಗಿದೆ.

ಮಹಿಳೆಯರು ಮಕ್ಕಳನ್ನು ಫ್ರಂಟ್‌ ಲೋಡಿಂಗ್ ವಾಷಿಂಗ್ ಮೆಷಿನ್‌ನೊಳಗೆ ಹಾಕಿದ್ದಾರೆ. ಪಾಶ್ಚಿಮಾತ್ಯ ಶೈಲಿಯ ಶೌಚಾಲಯದಲ್ಲಿ ಕೂರಿಸಿದ್ದಾರೆ. ಟಾಯ್ಲೆಟ್ ಜೆಟ್ ಸ್ಪ್ರೇ ಬಳಸಿ ಅವರ ಬಾಯಿಗೆ ನೀರನ್ನು ಸಿಂಪಡಿಸಿದ್ದಾರೆ, ಸ್ನಾನಗೃಹಗಳೊಳಗೆ ಬಿಟ್ಟು ಬೀಗ ಹಾಕಿದ್ದಾರೆ ಮತ್ತು ಸುಮ್ಮನಿರುವಂತೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Representative Image
ಶಿಕ್ಷಣ ಸಂಸ್ಥೆಯಲ್ಲಿ ಅಮಾನವೀಯ ಕೃತ್ಯ: ವಿಶೇಷ ಚೇತನ ಮಕ್ಕಳ ಮೇಲೆ 13 ವರ್ಷಗಳಿಂದ ಶಿಕ್ಷಕನಿಂದಲೇ ಲೈಂಗಿಕ ದೌರ್ಜನ್ಯ..!

ದೂರಿನ ನಂತರ, ಐವರು ಮಹಿಳೆಯರ ವಿರುದ್ಧ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಆರೋಪಿ ಮಹಿಳೆಯರನ್ನು ವಿಚಾರಣೆ ನಡೆಸಲಾಗುತ್ತಿದೆ ಮತ್ತು ನಾವು ವಿಡಿಯೋಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಘಟನೆಗಳು ಯಾವಾಗ ಸಂಭವಿಸಿದವು ಮತ್ತು ಹೆಚ್ಚಿನ ಮಕ್ಕಳು ಇದೇ ರೀತಿಯ ದೌರ್ಜನ್ಯಕ್ಕೆ ಒಳಗಾಗಿದ್ದಾರೆಯೇ ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದೇವೆ' ಎಂದು ಅವರು ಹೇಳಿದರು.

ಈ ಸಂಬಂಧ ಇನ್ನೂ ಯಾರನ್ನೂ ಬಂಧಿಸಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com