ವಿಚಿತ್ರ ಘಟನೆ: ಮಗಳ ಸಂಬಳ, 40 ಲಕ್ಷ ವಧುದಕ್ಷಿಣೆಗೆ ಬೇಡಿಕೆ; ವಿರೋಧಿಸಿದ ಮಗಳಿಗೆ ಚೂರಿ ಇರಿದ ತಂದೆ!

ಮಗಳನ್ನು ಸಾಕಲು ನನ್ನ ಸರ್ವಸ್ವವನ್ನು ಅರ್ಪಿಸಿದ್ದೇನೆ. ಹೀಗಾಗಿ ಮಗಳನ್ನು ಮದುವೆಯಾಗಬೇಕಾದರೆ 40 ಲಕ್ಷ ರೂಪಾಯಿ ವದುದಕ್ಷಿಣೆ ಹಾಗೂ ಆಕೆಯ ಸಂಪಾದನೆಯನ್ನು ನನಗೆ ಕೊಡಬೇಕೆಂದು ತಂದೆಯೊಬ್ಬರು ಕೇಳಿದ್ದು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಳು.
Laxmi Durga, Nagendra
ಲಕ್ಷ್ಮೀ ದುರ್ಗಾ, ನಾಗೇಂದ್ರ
Updated on

ದೇವನಹಳ್ಳಿ: ಮಗಳನ್ನು ಸಾಕಲು ನನ್ನ ಸರ್ವಸ್ವವನ್ನು ಅರ್ಪಿಸಿದ್ದೇನೆ. ಹೀಗಾಗಿ ಮಗಳನ್ನು ಮದುವೆಯಾಗಬೇಕಾದರೆ 40 ಲಕ್ಷ ರೂಪಾಯಿ ವದುದಕ್ಷಿಣೆ ಹಾಗೂ ಆಕೆಯ ಸಂಪಾದನೆಯನ್ನು ನನಗೆ ಕೊಡಬೇಕೆಂದು ತಂದೆಯೊಬ್ಬರು ಕೇಳಿದ್ದು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಗಳಿಗೆ ತಂದೆಯೇ ಚೂರಿ ಇರಿದಿರುವ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ.

ಮಗಳಿಗೆ ಮದುವೆ ಮಾಡಲು ತಂದೆ ನಿರ್ಧರಿಸಿದ್ದರು. ಅದರಂತೆ ಮದುವೆಗೆ ಗಂಡನ್ನು ನೋಡಿದ್ದರು. ನಾನು ಮಗಳು ಲಕ್ಷ್ಮೀದುರ್ಗಾಳನ್ನು ಕಷ್ಟಪಟ್ಟು ಓದಿಸಿದ್ದೇನೆ. ಮದುವೆಯಾಗಲು 40 ಲಕ್ಷ ವದುದಕ್ಷಿಣೆ ನೀಡಬೇಕು. ಅಲ್ಲದೆ ಮಗಳು ಕೆಲಸ ಮಾಡುತ್ತಿದ್ದು ಆಕೆಯ ತಿಂಗಳ ಸಂಬಳವನ್ನು ನನಗೆ ಕೊಡಬೇಕು ಎಂದು ತಂದೆ ನಾಗೇಂದ್ರ ಒತ್ತಾಯಿಸಿದ್ದರು. ಇದಕ್ಕೆ ಪತ್ನಿ ಹಾಗೂ ಮಗಳು ವಿರೋಧ ವ್ಯಕ್ತಪಡಿಸಿದ್ದರು.

Laxmi Durga, Nagendra
ಬೆಂಗಳೂರು: SIR ಕರ್ತವ್ಯದಲ್ಲಿದ್ದ ಅಧಿಕಾರಿ ಮೇಲೆ ಹಲ್ಲೆ ಪ್ರಕರಣ; ಯಾರಬ್ ಮತ್ತು ದಸ್ತಗೀರ್ ಬಂಧನ!

ಇದರಿಂದ ಕೋಪಗೊಂಡ ನಾಗೇಂದ್ರ ಮಗಳು ಕೆಲಸ ಮಾಡುತ್ತಿದ್ದ ಕಾಲೇಜಿಗೆ ಬಂದು ಆಕೆಯ ಹೊಟ್ಟೆ, ಎದೆ, ಕುತ್ತಿಗೆಗೆ ಚಾಕು ಇರಿದು ಎಸ್ಕೇಪ್ ಆಗಿದ್ದಾರೆ. ರಾಜಾನುಕುಂಟೆಯ ಖಾಸಗಿ ಕಾಲೇಜಿನಲ್ಲಿ ಜುಲೈ 25ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇದೀಗ ನಾಗೇಂದ್ರನನ್ನು ರಾಜಾನುಕುಂಟೆ ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com