ಟ್ರಾಫಿಕ್ ಫೈನ್​​ಗೆ ಶೇ. 50 ರಷ್ಟು ಡಿಸ್ಕೌಂಟ್: ಬೆಂಗಳೂರಿನಲ್ಲಿ ನಾಲ್ಕೇ ದಿನದಲ್ಲಿ 6 ಕೋಟಿ ರೂ. ದಂಡ ಸಂಗ್ರಹ!

ರಾಜ್ಯ ಸರ್ಕಾರ ಜೂನ್ 21 ರಿಂದ ಜುಲೈ 10ರವರೆಗೆ ಶೇ. 50 ರಷ್ಟು ದಂಡ ಪಾವತಿ ಮಾಡಲು ಅವಕಾಶ ನೀಡಿದ್ದು, ಅದರಂತೆ ಕಳೆದ ನಾಲ್ಕು ದಿನದಲ್ಲಿ ಬರೋಬ್ಬರಿ 6,06,65,150 ರೂಪಾಯಿ ಭಾರೀ ಮೊತ್ತದ ದಂಡ ವಸೂಲಿಯಾಗಿದೆ.
Bengaluru sees 6 crore in Traffic fine collections in just 4 days of 50% rebate drive
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿ, ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಶೇ. 50 ರಷ್ಟು ರಿಯಾಯಿತಿ ಘೋಷಿಸಿದ್ದು, ಬೆಂಗಳೂರಿನಲ್ಲಿ ನಾಲ್ಕೇ ದಿನದಲ್ಲಿ ಬರೋಬ್ಬರಿ 28 ಕೋಟಿಗೆ ಹೆಚ್ಚು ದಂಡ ಸಂಗ್ರಹವಾಗಿದೆ.

ರಾಜ್ಯ ಸರ್ಕಾರ ಜೂನ್ 21 ರಿಂದ ಜುಲೈ 10ರವರೆಗೆ ಶೇ. 50 ರಷ್ಟು ದಂಡ ಪಾವತಿ ಮಾಡಲು ಅವಕಾಶ ನೀಡಿದ್ದು, ಅದರಂತೆ ಕಳೆದ ನಾಲ್ಕು ದಿನದಲ್ಲಿ ಬರೋಬ್ಬರಿ 6,06,65,150 ರೂಪಾಯಿ ಭಾರೀ ಮೊತ್ತದ ದಂಡ ವಸೂಲಿಯಾಗಿದೆ.

ಬೆಂಗಳೂರು ಸಂಚಾರ ಪೊಲೀಸರು ಬಿಡುಗಡೆ ಮಾಡಿರುವ ಅಧಿಕೃತ ಅಂಕಿಅಂಶ ಪ್ರಕಾರ, ಜೂನ್ 21 ರಿಂದ ಜೂನ್ 24 ರವರೆಗಿನ ಮೊದಲ 4 ದಿನಗಳ ಅವಧಿಯಲ್ಲಿ ವಿವಿಧ ಆನ್‌ಲೈನ್ ಮತ್ತು ಆಫ್‌ಲೈನ್ ಮಾಧ್ಯಮಗಳ ಮೂಲಕ ಒಟ್ಟು 2,00,139 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಬರೋಬ್ಬರಿ 6,06,65,150 ರೂಪಾಯಿ ಭಾರೀ ಮೊತ್ತದ ದಂಡ ಸಂಗ್ರಹಿಸಲಾಗಿದೆ.

Bengaluru sees 6 crore in Traffic fine collections in just 4 days of 50% rebate drive
ವಾಹನ ಸವಾರರಿಗೆ ಗುಡ್ ನ್ಯೂಸ್: ಟ್ರಾಫಿಕ್ ದಂಡ ಪಾವತಿಗೆ ಮತ್ತೆ ಶೇ.50 ರಷ್ಟು ಡಿಸ್ಕೌಂಟ್ ಘೋಷಣೆ

ಬೆಂಗಳೂರು ನಗರವೊಂದರಲ್ಲೇ ಕೋಟ್ಯಂತರ ರೂಪಾಯಿ ಮೌಲ್ಯದ 5 ಕೋಟಿಗೂ ಅಧಿಕ ಇ-ಚಲನ್ ಪ್ರಕರಣಗಳು ದಂಡ ಪಾವತಿಯಾಗದೆ ವರ್ಷಗಳಿಂದ ಬಾಕಿ ಇದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಾರಿಗೆ ಮತ್ತು ಪೊಲೀಸ್ ಇಲಾಖೆ, ಜೂನ್ 21 ರಿಂದ ಜುಲೈ 10 ರವರೆಗೆ ಅನ್ವಯವಾಗುವಂತೆ ಸೀಮಿತ ಅವಧಿಗೆ ಈ ಶೇ 50 ರಿಯಾಯಿತಿ ಯೋಜನೆಯನ್ನು ಮರುಜಾರಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com