ದೇಣಿಗೆ ನೀಡಿದವರಿಗೆ ಮಾತ್ರ ಪ್ರಶ್ನಿಸುವ ಹಕ್ಕು: ರಾಮನ ಅಸ್ತಿತ್ವ ಪ್ರಶ್ನಿಸಿದವರಿಗಲ್ಲ; ಸಿ.ಟಿ ರವಿ

ಭಕ್ತರು ಆಟಿಕೆಗಳನ್ನು ಮಾರುವವರು ಮತ್ತು ಜೇಬುಗಳ್ಳರು ಕೂಡ ಇರುತ್ತಾರೆ. ಆದರೆ ಇದರರ್ಥ ದೇವಸ್ಥಾನದ ಜಾತ್ರೆ ನಡೆಸುವುದು ತಪ್ಪು ಎಂಬ ಅರ್ಥವಲ್ಲ ಎಂದರು.
CT Ravi
ಸಿ.ಟಿ ರವಿ
Updated on

ಹಾಸನ: ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದವರಿಗೆ ಮಾತ್ರ ಅಕ್ರಮಗಳನ್ನು ಪ್ರಶ್ನಿಸುವ ಹಕ್ಕಿದೆ. ಮಂದಿರ ನಿರ್ಮಾಣವನ್ನು ವಿರೋಧಿಸಿ ರಾಮನ ಅಸ್ತಿತ್ವವನ್ನು ಪ್ರಶ್ನಿಸಿದವರಿಗೆ ಆ ಹಕ್ಕಿಲ್ಲ" ಎಂದು ಬಿಜೆಪಿ ನಾಯಕ ಮತ್ತು ಕರ್ನಾಟಕದ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಹೇಳಿದ್ದಾರೆ .

ಹಾಸನ ಜಿಲ್ಲೆಯ ಆಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮಂದಿರಕ್ಕೆ ದೇಣಿಗೆ ನೀಡಿದ ಹಣದ ದುರುಪಯೋಗ ಮತ್ತು ಕಳ್ಳತನದ ಆರೋಪದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದೇವಾಲಯದ ಜಾತ್ರೆಗೆ ಅನೇಕರು ಬರುತ್ತಾರೆ.

ಭಕ್ತರು ಆಟಿಕೆಗಳನ್ನು ಮಾರುವವರು ಮತ್ತು ಜೇಬುಗಳ್ಳರು ಕೂಡ ಇರುತ್ತಾರೆ. ಆದರೆ ಇದರರ್ಥ ದೇವಸ್ಥಾನದ ಜಾತ್ರೆ ನಡೆಸುವುದು ತಪ್ಪು ಎಂಬ ಅರ್ಥವಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಆರ್‌ಎಸ್‌ಎಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ರವಿ, "ನಾಲಿಗೆಗೆ ಮೂಳೆಯಿಲ್ಲ, ಅದು ಏನು ಬೇಕಾದರೂ ಹೇಳಬಹುದು. ದೇಶಭಕ್ತ ಸಂಘಟನೆಗಳನ್ನು ಟೀಕಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ದೇಶವನ್ನು ವಿಭಜಿಸಲು ಬಯಸುವವರಿಗೆ ಮಾತ್ರ ಸಹಾಯ ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದರು.

CT Ravi
ರಾಮ ಮಂದಿರ ದೇಣಿಗೆ ಹಗರಣ: ಆರೋಪಿಗಳ ಬಂಧನ ಬೆನ್ನಲ್ಲೇ 79.85 ಲಕ್ಷ ರೂ. ವಶಕ್ಕೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com