

ರಾಯಚೂರು: PWD ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿ ಎಂದು ಹೇಳಿಕೊಂಡು ವ್ಯಕ್ತಿಯೋವ ಬರೋಬ್ಬರಿ 3.48 ಕೋಟಿ ರೂ ಲೂಟಿ ಮಾಡಿರುವ ಆರೋಪ ಕೇಳಿಬಂದಿದೆ. ರಾಯಚೂರು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ವೆಂಕಟೇಶ್ ಗಲಗ ವಿರುದ್ಧ ಈ ಆರೋಪ ಕೇಳಿಬಂದಿದೆ.
ಮಸ್ಕಿಯಿಂದ ಲಿಂಗಸುಗೂರು ರಸ್ತೆ ಕಾಮಗಾರಿಗೆ ನಕಲಿ ದಾಖಲೆಗಳು ಸೃಷ್ಟಿಸಿ ಬರೋಬ್ಬರಿ 3 ಕೋಟಿ 48 ಲಕ್ಷ ರೂ. ಹಣ ಗುಳುಂ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಆರೋಪವನ್ನು PWD ಇಇ ವೆಂಕಟೇಶ ಗಲಗ ನಿರಾಕರಿಸಿದ್ದಾರೆ.
ಅಮ್ಮಾಪುರ ಆ್ಯಂಡ್ ಕಂಪನಿ ಹೆಸರಿಗೆ ಈ ರಸ್ತೆ ಕಾಮಗಾರಿಯ ಅಧಿಕೃತ ಟೆಂಡರ್ ಮಂಜೂರಾಗಿತ್ತು. ಆದರೆ, ಇದೇ ಕಾಮಗಾರಿಯ ಮಧ್ಯೆ ಭೀಮಾಶಂಕರ ದೋರನಹಳ್ಳಿ ಎಂಬ ಹೆಸರಿನಲ್ಲಿ ಮತ್ತೊಂದು ನಕಲಿ ಟೆಂಡರ್ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ ವಂಚನೆ ಮಾಡಲಾಗಿದೆ. ಈ ಸಂಬಂಧ ಈಗಾಗಲೇ ರಾಜ್ಯಪಾಲರು ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರಿಗೆ ಅಧಿಕೃತವಾಗಿ ದೂರು ಸಲ್ಲಿಕೆಯಾಗಿದೆ.