ರಾತ್ರಿಯಿಡೀ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ ಭದ್ರತಾ ಮುಖ್ಯಸ್ಥ ಲಾರಿಜಾನಿ ಹತ್ಯೆ

ದಾಳಿಯಲ್ಲಿ ಲಾರಿಜಾನಿ ಸಾವನ್ನಪ್ಪಿದ್ದಾರೆಯೇ ಅಥವಾ ಗಾಯಗೊಂಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
West Asia conflict: Israel defence minister says Iran's security chief Larijani killed
ಇರಾನ್‌ ಭದ್ರತಾ ಮುಖ್ಯಸ್ಥ ಲಾರಿಜಾನಿ
Updated on

ಟೆಲ್ ಅವಿವ್: ಇರಾನ್‌ನಲ್ಲಿ ರಾತ್ರೋರಾತ್ರಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ಭದ್ರತಾ ಮಂಡಳಿಯ ಮುಖ್ಯಸ್ಥ ಅಲಿ ಲಾರಿಜಾನಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಅವರು ಮಂಗಳವಾರ ಹೇಳಿದ್ದಾರೆ. ಆದರೆ ಈ ಲಾರಿಜಾನಿ ಹತ್ಯೆ ಬಗ್ಗೆ ಇರಾನ್ ನಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ದಾಳಿಯಲ್ಲಿ ಲಾರಿಜಾನಿ ಸಾವನ್ನಪ್ಪಿದ್ದಾರೆಯೇ ಅಥವಾ ಗಾಯಗೊಂಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಏತನ್ಮಧ್ಯೆ, ಇರಾನ್‌ನಲ್ಲಿ ಇತ್ತೀಚೆಗೆ ನಡೆದ ಮತ್ತೊಂದು ಇಸ್ರೇಲಿ ವೈಮಾನಿಕ ದಾಳಿಯು ಪ್ಯಾಲೆಸ್ಟೀನಿಯನ್ ಇಸ್ಲಾಮಿಕ್ ಜಿಹಾದಿ ನಾಯಕ ಅಕ್ರಮ್ ಅಲ್-ಅಜೌರಿ ಮತ್ತು ಭಯೋತ್ಪಾದಕ ಗುಂಪಿನ ಇತರ ಉನ್ನತ ಅಧಿಕಾರಿಗಳನ್ನು ಟಾರ್ಗೆಟ್ ಮಾಡಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

West Asia conflict: Israel defence minister says Iran's security chief Larijani killed
West Asia conflict: ಇರಾನ್‌ನ ಪ್ರಮುಖ ತೈಲ ಘಟಕ ಮೇಲೆ ಇಸ್ರೇಲ್ ದಾಳಿ; ಗಲ್ಫ್ ರಾಷ್ಟ್ರಗಳ ಮೇಲೆ ಟೆಹ್ರಾನ್ ಯುದ್ಧ; Video

ಟೈಮ್ಸ್ ಆಫ್ ಇಸ್ರೇಲ್ ಪ್ರಕಾರ, ಇಸ್ರೇಲ್ ರಕ್ಷಣಾ ಪಡೆಗಳ(IDF) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಇಯಾಲ್ ಜಮೀರ್ ಈ ವಿವರಗಳನ್ನು ದೃಢಪಡಿಸಿದ್ದಾರೆ.

"ಇದು ಇತ್ತೀಚಿನ ದಿನಗಳಲ್ಲಿ ಇರಾನ್‌ನಲ್ಲಿ ಬಾಹ್ಯ ಅಂಶಗಳ ವಿರುದ್ಧ ನಡೆಸಲಾದ ನಿರ್ಮೂಲನೆಗಳ ಜೊತೆಗೆ, ಪ್ಯಾಲೆಸ್ಟೀನಿಯನ್ ಕ್ಷೇತ್ರಕ್ಕೂ ಸಂಬಂಧಿಸಿದೆ" ಎಂದು ಜಮೀರ್ ಅವರು ಇಸ್ಲಾಮಿಕ್ ಜಿಹಾದಿ ಅಧಿಕಾರಿಗಳನ್ನು ಉಲ್ಲೇಖಿಸಿ ಹೇಳಿದ್ದಾರೆ.

IDF ವೈಮಾನಿಕ ಕಾರ್ಯಾಚರಣೆಯಲ್ಲಿ "ಟೆಹ್ರಾನ್‌ನ ಕಮಾಂಡ್ ಕೇಂದ್ರಗಳ ಮೇಲೆ ಡಜನ್ಗಟ್ಟಲೆ ಕ್ಷಿಪಣಿ ದಾಳಿ ನಡೆಸಲಾಗಿದ್ದು, UAV, ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ವಾಯು ರಕ್ಷಣಾ ಸಂಗ್ರಹಣಾ ತಾಣಗಳನ್ನು ಹೊಡೆದುರುಳಿಸಲಾಗಿದೆ" ಎಂದು X ನಲ್ಲಿ ಪೋಸ್ಟ್‌ ಮಾಡಲಾಗಿದೆ.

ಇರಾನ್‌ನ ಬಸಿಜ್ ಪಡೆಗಳ ಮುಖ್ಯಸ್ಥನ ಹತ್ಯೆ

ಸೋಮವಾರ ರಾತ್ರಿ ನಡೆದ ದಾಳಿಯಲ್ಲಿ ಇರಾನ್‌ನ ಬಸಿಜ್ ಪಡೆ ಕಮಾಂಡರ್ ಘೋಲಮ್ರೆಜಾ ಸೊಲೈಮಾನಿ ಅವರನ್ನು ಸಹ ಕೊಂದಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com