

ಬೆಂಗಳೂರು: ನಗರದ ಎಂಜಿ ರಸ್ತೆಯ ಅನಿಲ್ ಕುಂಬ್ಳೆ ವೃತ್ತದಲ್ಲಿ ದುಬಾರಿ ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದ್ದು, ಮುತ್ತಪ್ಪ ರೈ ಪುತ್ರ ರಿಕ್ಕಿ ರೈ (Ricky Rai) ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಇತ್ತೀಚಿನ ಡ್ರಿಫ್ಟ್ ಪ್ರಕರಣ ಘಟನೆಯ ನಂತರ, ರಿಕ್ಕಿ ರೈ ಅವರ ಲ್ಯಾಂಬೋರ್ಘಿನಿ ಕಾರು ನಕಲಿ ನೋಂದಣಿ ಸಂಖ್ಯೆಯನ್ನು (KA-05 NR 0009) ಹೊಂದಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕಾರು ರಿಜಿಸ್ಟರ್ ಮಾಡದೇ ಅದರ ಕಲರ್ ಬದಲಿಸಿ ತೆರಿಗೆ ಕಟ್ಟದೇ ಸರ್ಕಾರಕ್ಕೆ ವಂಚಿಸಿರುವ ಆರೋಪ ರಿಕ್ಕಿ ರೈ ವಿರುದ್ಧ ಕೇಳಿಬಂದಿದೆ.
ಡ್ರಿಫ್ಟಿಂಗ್ ಕೇಸ್ ಸಂಬಂಧ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ದಾಖಲೆ ಪರಿಶೀಲನೆ ವೇಳೆ ಈ ಅಕ್ರಮ ಬಯಲಾಗಿದ್ದು, ಕಾರನ್ನು ಕರ್ನಾಟಕದಲ್ಲಿ ರಿಜಿಸ್ಟರ್ ಮಾಡಿಸದೇ ಸರ್ಕಾರಕ್ಕೆ ತೆರಿಗೆ ವಂಚಿಸಿದ್ದಾರೆ ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ದೆಹಲಿಯಲ್ಲಿ ಆರ್‌ಟಿಓ ಹರಾಜಿನಲ್ಲಿ ಲ್ಯಾಂಬೋರ್ಗಿನಿ ಕಾರು ಖರೀದಿಸಲಾಗಿತ್ತು. ಬಳಿಕ ಕಾರಿನ ಕಲರ್ ಬದಲಿಸಿ, ಅದಕ್ಕೆ KA-05 NR 0009 ನಂಬರ್‌ನ ಫ್ಯಾನ್ಸಿ ನಂಬರ್ ಹಾಕಿದ್ದಾರೆ.
ಒಂದು ವೇಳೆ ಅದನ್ನು ರಿಜಿಸ್ಟರ್ ಮಾಡಿಸಿದ್ದರೆ ಲಕ್ಷಾಂತರ ರೂ. ಟ್ಯಾಕ್ಸ್ ಕಟ್ಟ ಬೇಕಿತ್ತು. ಹೀಗಾಗಿ ಇದ್ಯಾವುದನ್ನೂ ಮಾಡದೇ ನಿಯಮ ಉಲ್ಲಂಘನೆ ಮಾಡಿ ಸರ್ಕಾರಕ್ಕೆ ವಂಚಿಸಿದ್ದಾರೆ.
ಇದೇ ಕಾರಣಕ್ಕೆ ಆರಂಭದಲ್ಲಿ ಕಾರಿನ ನಂಬರ್ ಪತ್ತೆಯಾಗಿದ್ದರೂ ಸಹ ಕಾರಿನ ಮಾಲೀಕರು ಪತ್ತೆಯಾಗಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement