Nandini ಹಾಲಿನ ಪ್ಯಾಕೆಟ್‌ನಲ್ಲಿ ಸತ್ತ ಜೇಡ ಪತ್ತೆ: VIdeo ಸಹಿತ KMFಗೆ ಮಹಿಳೆ ದೂರು..!

ಕಳೆದ ಸುಮಾರು ಎರಡು ದಶಕಗಳಿಂದ ನಂದಿನಿ ಉತ್ಪನ್ನಗಳನ್ನೇ ಬಳಸುತ್ತಿರುವ ಇವರು, ಭಾನುವಾರ (ನವೆಂಬರ್ 8) ಫ್ರಿಡ್ಜ್‌ನಲ್ಲಿಟ್ಟಿದ್ದ ಹಾಲಿನ ಪ್ಯಾಕೆಟ್ ಅನ್ನು ಕತ್ತರಿಸಿ ಕಾಯಿಸಲು ಪಾತ್ರೆಗೆ ಸುರಿದಿದ್ದಾರೆ. ಈ ವೇಳೆ ಹಾಲಿನೊಂದಿಗೆ ಸಣ್ಣ ಸತ್ತ ಜೇಡವೊಂದು ಬಿದ್ದಿರುವುದು ಕಂಡುಬಂದಿದೆ.
File photo
ಸಂಗ್ರಹ ಚಿತ್ರ
Updated on: 

ಬೆಂಗಳೂರು: 500 ಮಿ.ಲೀ ನಂದಿನಿ ಹಾಲಿನ ಪ್ಯಾಕೆಟ್‌ನಲ್ಲಿ ಸತ್ತ ಜೇಡ ಪತ್ತೆಯಾಗಿದ್ದು, ಈ ಘಟನೆ ಹಾಲು ಸಂಸ್ಕರಣಾ ಘಟಕಗಳಲ್ಲಿನ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣದ ಬಗ್ಗೆ ಆತಂಕ ಮೂಡಿಸಿದೆ.

ನಂದಿನಿ ಹಾಲಿನ 500 ಮಿಲಿ ಪ್ಯಾಕೆಟ್‌ನಲ್ಲಿ ಸತ್ತ ಜೇಡ ಪತ್ತೆಯಾಗಿದೆ ಎಂದು ಬೆಂಗಳೂರಿನ ಮಹಿಳೆಯೊಬ್ಬರು ಕರ್ನಾಟಕ ಹಾಲು ಒಕ್ಕೂಟಕ್ಕೆ (ಕೆಎಂಎಫ್) ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕ ಹಾಲು ಮಹಾಮಂಡಳ (KMF) ಕಲುಷಿತ ಹಾಲಿನ ಮಾದರಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದೆ.

ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಸಹೋದರನ ಮೊಮ್ಮಗಳಾದ ನಾಗೂರ್ ರೋಜಾ ಅವರು ಈ ಬಗ್ಗೆ ದೂರು ನೀಡಿದ್ದಾರೆ.

ಕಳೆದ ಸುಮಾರು ಎರಡು ದಶಕಗಳಿಂದ ನಂದಿನಿ ಉತ್ಪನ್ನಗಳನ್ನೇ ಬಳಸುತ್ತಿರುವ ಇವರು, ಭಾನುವಾರ (ನವೆಂಬರ್ 8) ಫ್ರಿಡ್ಜ್‌ನಲ್ಲಿಟ್ಟಿದ್ದ ಹಾಲಿನ ಪ್ಯಾಕೆಟ್ ಅನ್ನು ಕತ್ತರಿಸಿ ಕಾಯಿಸಲು ಪಾತ್ರೆಗೆ ಸುರಿದಿದ್ದಾರೆ. ಈ ವೇಳೆ ಹಾಲಿನೊಂದಿಗೆ ಸಣ್ಣ ಸತ್ತ ಜೇಡವೊಂದು ಬಿದ್ದಿರುವುದು ಕಂಡುಬಂದಿದೆ.

ಕಳೆದ ಎರಡು ದಶಕಗಳಿಂದ ತಮ್ಮ ಕುಟುಂಬ ನಂದಿನಿ ಹಾಲು ಹಾಗೂ ಕೆಎಂಎಫ್‌ನ ಇತರ ಉತ್ಪನ್ನಗಳನ್ನು ಖರೀದಿಸುತ್ತಿದೆ ಎಂದೂ ತಿಳಿಸಿದ್ದಾರೆ.

ಸಾಮಾನ್ಯವಾಗಿ ಹಾಲಿನ ಪ್ಯಾಕೆಟ್‌ಗಳನ್ನು ಮಾರಾಟಗಾರರು ಮುಚ್ಚಿದ ಪೆಟ್ಟಿಗೆಯಲ್ಲಿ ನೀಡುತ್ತಾರೆ. ಅವುಗಳನ್ನು ಮನೆಗೆ ತಂದ ಬಳಿಕ ನೀರಿನಲ್ಲಿ ತೊಳೆದು ಫ್ರಿಜ್‌ನಲ್ಲಿ ಇಡಲಾಗುತ್ತದೆ. ಹೀಗಾಗಿ ಹೊರಗಿನಿಂದ ಜೇಡ ಒಳಗೆ ಹೋಗುವ ಸಾಧ್ಯತೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

File photo
ಹಾಲಿನ ದರ ಏರಿಕೆ ಬಹುದಿನಗಳ ಬೇಡಿಕೆ; ಹೆಚ್ಚುವರಿ ಹಣ ರೈತರಿಗೆ ತಲುಪಲಿದೆ: ಸಿಎಂ ಡಿ.ಕೆ ಶಿವಕುಮಾರ್; Video

ಪ್ಯಾಕೆಟ್‌ನಲ್ಲಿ ಜೇಡ ಪತ್ತೆಯಾದ ತಕ್ಷಣ ರೋಜಾ ಅವರು ಅದರ ವೀಡಿಯೊ ಚಿತ್ರೀಕರಿಸಿಕೊಂಡಿದ್ದಾರೆ. ಪ್ಯಾಕೆಟ್ ಅನ್ನು ಎಸೆಯುವಂತೆ ಹಾಲಿನ ಮಾರಾಟಗಾರ ನೀಡಿದ ಸಲಹೆಯನ್ನು ನಿರಾಕರಿಸಿದ ಅವರು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೆಎಂಎಫ್ ಘಟಕವಾದ ಮದರ್ ಡೈರಿಯ ಮಾರ್ಕೆಟಿಂಗ್ ಮ್ಯಾನೇಜರ್‌ಗೆ ಇಮೇಲ್ ಮೂಲಕ ಅಧಿಕೃತ ದೂರು ಸಲ್ಲಿಸಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಸೋಮವಾರ (ನವೆಂಬರ್ 9) ಇಬ್ಬರು ಕೆಎಂಎಫ್ ಅಧಿಕಾರಿಗಳು ರೋಜಾ ಅವರ ನಿವಾಸಕ್ಕೆ ಭೇಟಿ ನೀಡಿ, ಹಾಲಿನ ಮಾದರಿ ಮತ್ತು ಪ್ಯಾಕೆಟ್ ಅನ್ನು ಪರಿಶೀಲಿಸಿ ಸಂಗ್ರಹಿಸಿದ್ದಾರೆ.

ಸಂಗ್ರಹಿಸಿದ ಮಾದರಿಯನ್ನು ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗುವುದು ಮತ್ತು ಈ ಬ್ಯಾಚ್‌ನ ಹಾಲನ್ನು ಪ್ಯಾಕ್ ಮಾಡಿದ ನಿರ್ದಿಷ್ಟ ಘಟಕವನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಂಎಫ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಇದರಂತೆ ಸೋಮವಾರ ಕೆಎಂಎಫ್‌ನ ಇಬ್ಬರು ಅಧಿಕಾರಿಗಳು ರೋಜಾ ಅವರ ಮನೆಗೆ ಭೇಟಿ ನೀಡಿ, ಪರಿಶೀಲನೆಗಾಗಿ ಹಾಲಿನ ಮಾದರಿ ಮತ್ತು ಪ್ಯಾಕೆಟ್ ಸಂಗ್ರಹಿಸಿದ್ದಾರೆ. ಈ ಕುರಿತು ತನಿಖೆ ನಡೆಸಿ, ಹಾಲು ಪ್ಯಾಕಿಂಗ್ ಮಾಡಿದ ಘಟಕವನ್ನು ಪತ್ತೆಹಚ್ಚುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ರೋಜಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X