ಬಳ್ಳಾರಿ: 'ಲಕ್ಷ್ಮಿ ಪೂಜೆ' ಆಮಿಷವೊಡ್ಡಿ ಯುವತಿಯರನ್ನು ವೇಶ್ಯಾವಾಟಿಕೆಗೆ ದೂಡುತ್ತಿದ್ದ ಜಾಲ ಭೇದಿಸಿದ ಪೊಲೀಸರು!

ಸುಮಾರು 5 ಅಡಿ 6 ಇಂಚು ಎತ್ತರವಿರುವ, ದೇಹದ ಮೇಲೆ ಯಾವುದೇ ಗುರುತುಗಳು ಅಥವಾ ಕಲೆಗಳಿಲ್ಲದ ಅವಿವಾಹಿತ ಯುವತಿಯರ ಫೋಟೋಗಳನ್ನು ಅವರು ಕೇಳುತ್ತಿದ್ದರು.

11 held in Ballari sex racket bust
ಬಂಧಿತ ಆರೋಪಿಗಳು
Updated on: 

ಬಳ್ಳಾರಿ: ಹಣದ ಆಸೆಯನ್ನೇ ಬಂಡವಾಳ ಮಾಡಿಕೊಂಡು ಬಡ ಕುಟುಂಬದ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅವರನ್ನು ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ವೇಶ್ಯಾವಾಟಿಕೆ ಜಾಲವೊಂದನ್ನು ಬಳ್ಳಾರಿ ಪೊಲೀಸರು ಭೇದಿಸಿದ್ದಾರೆ.

ಈ ಜಾಲವು ಮಹಿಳೆಯರನ್ನು ಆಯ್ಕೆ ಮಾಡುವಾಗ ನಿರ್ದಿಷ್ಟ ಮಾನದಂಡಗಳನ್ನು ಹೊಂದಿತ್ತು. ಸುಮಾರು 5 ಅಡಿ 6 ಇಂಚು ಎತ್ತರವಿರುವ, ದೇಹದ ಮೇಲೆ ಯಾವುದೇ ಗುರುತುಗಳು ಅಥವಾ ಕಲೆಗಳಿಲ್ಲದ ಅವಿವಾಹಿತ ಯುವತಿಯರ ಫೋಟೋಗಳನ್ನು ಅವರು ಕೇಳುತ್ತಿದ್ದರು. ಸಾಮಾನ್ಯ ಫೋಟೋಗಳಲ್ಲದೆ, ಬಲಗೈ ಮತ್ತು ಬಲಗಾಲಿನ ಪ್ರತ್ಯೇಕ ಫೋಟೋಗಳನ್ನು ಕಳುಹಿಸುವಂತೆ ಆರೋಪಿಗಳು ಒತ್ತಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಶೇಷ ಲಕ್ಷಣವಿರುವ ಯುವತಿಯರು ಲಕ್ಷ್ಮೀ ಪೂಜೆ ಮಾಡಿದರೆ 'ಹಣದ ಮಳೆ' ಸುರಿಯುತ್ತದೆ ಎಂದು ಸುಳ್ಳು ಕತೆ ಕಟ್ಟಿ ಬಡ ಹೆಣ್ಣುಮಕ್ಕಳ ಮನವೊಲಿಸುತ್ತಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್ ಮಾಹಿತಿ ಬಹಿರಂಗಪಡಿಸಿದ್ದಾರೆ.

ಪೂಜೆಯಿಂದ ಬರುವ ಹಣದಲ್ಲಿ ಯುವತಿಗೆ ಒಂದು ಪಾಲು, ಪೂಜೆ ಮಾಡುವ ಸ್ವಾಮೀಜಿಗೆ ಒಂದು ಪಾಲು ಮತ್ತು ಯುವತಿಯನ್ನು ಕರೆತಂದ ಏಜೆಂಟ್‌ಗೆ ಒಂದು ಪಾಲು ಸಿಗುತ್ತದೆ ಎಂದು ನಂಬಿಸಿ ಈ ಜಾಲವು ಯುವತಿಯರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿತ್ತು. ಆರಂಭದಲ್ಲಿ ಯುವತಿಯರ ಫೋಟೋ ಮತ್ತು ಸಂಪೂರ್ಣ ವಿವರಗಳನ್ನು ಸಂಗ್ರಹಿಸಿ, ನಂತರ ಪೂಜೆಗೆ ಆಯ್ಕೆಯಾಗಿದ್ದೀರಿ ಎಂದು ನಂಬಿಸಿ ಕರೆಸಿಕೊಳ್ಳುತ್ತಿದ್ದ ಆರೋಪಿಗಳು, ಬಳಿಕ ಅವರನ್ನು ಲೈಂಗಿಕವಾಗಿ ಬಳಸಿಕೊಂಡು ಮಾರಾಟ ಮಾಡುತ್ತಿದ್ದರು ಎಂದು ಪನ್ನೇಕರ್ ತಿಳಿಸಿದ್ದಾರೆ.


11 held in Ballari sex racket bust
JDS ಜೊತೆ ರಾಜಣ್ಣ ಸ್ನೇಹ 'ರಾಜಕೀಯ ವೇಶ್ಯಾವಾಟಿಕೆ' ಇದ್ದಂತೆ: ಸಚಿವ ಬಾಲಕೃಷ್ಣ ಟೀಕೆ

ಮೇಲ್ನೋಟಕ್ಕೆ ಇದೊಂದು ವ್ಯವಸ್ಥಿತ ವೇಶ್ಯಾವಾಟಿಕೆ ಜಾಲ ಎಂಬುದು ತನಿಖೆಯಿಂದ ಸಾಬೀತಾಗಿದೆ. ಈ ದಂಧೆಯನ್ನು ಬಯಲಿಗೆಳೆಯಲು ಬಳ್ಳಾರಿಯ 'ಅಕ್ಕ ಪಡೆ'ಯ (Akka Squad) ಮಹಿಳಾ ಪೊಲೀಸರೇ ಬಡ ಮಹಿಳೆಯರ ವೇಷದಲ್ಲಿ ಗ್ಯಾಂಗ್ ಸೇರಿಕೊಂಡು ಬರೋಬ್ಬರಿ ಎರಡು ತಿಂಗಳ ಕಾಲ ರಹಸ್ಯ ಕಾರ್ಯಾಚರಣೆ ನಡೆಸಿದರು ಎಂದು ಪನ್ನೇಕರ್ ಅವರು ತಿಳಿಸಿದ್ದಾರೆ.

ಪೊಲೀಸರ ಈ ಚಾಣಾಕ್ಷ ಕಾರ್ಯಾಚರಣೆಯ ಫಲವಾಗಿ ಇದೀಗ ನಾಲ್ವರು ಅಮಾಯಕ ಯುವತಿಯರನ್ನು ರಕ್ಷಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 11 ಆರೋಪಿಗಳನ್ನು ಬಂಧಿಸಲಾಗಿದೆ. ಈ ಜಾಲವು ಕೇವಲ ಬಳ್ಳಾರಿಗೆ ಮಾತ್ರ ಸೀಮಿತವಾಗಿರದೆ ಚಿಕ್ಕಮಗಳೂರು, ಮೈಸೂರು ಹಾಗೂ ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಲ್ಲೂ ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X