ಮಂಡ್ಯ: ರೈಲ್ವೆ ಗೇಟ್ ಹಾಕಿದ್ದರೂ ದಾಟಲು ಯತ್ನಿಸಿದ ಯುವತಿ, ದೇಹ ಛಿದ್ರ ಛಿದ್ರ!

ರೈಲ್ವೆ ಗೇಟ್ ಹಾಕಿದ್ದರೂ ಅದನ್ನು ಲೆಕ್ಕಿಸದೆ ಹಳಿ ದಾಟಲು ಯತ್ನಿಸಿದ 19 ವರ್ಷದ ಯುವತಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.
ಲಿಖಿತ ಸಾವು
ಲಿಖಿತ ಸಾವು
Updated on: 

ಮಂಡ್ಯ: ರೈಲ್ವೆ ಗೇಟ್ ಹಾಕಿದ್ದರೂ ಅದನ್ನು ಲೆಕ್ಕಿಸದೆ ಹಳಿ ದಾಟಲು ಯತ್ನಿಸಿದ 19 ವರ್ಷದ ಯುವತಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.

ಶ್ರೀರಂಗಪಟ್ಟಣ ತಾಲೂಕಿನ ಚಂದಗಿರಿಕೊಪ್ಪಲು ಗ್ರಾಮದ ಬಳಿ ಘಟನೆ ನಡೆದಿದ್ದು ಮೃತಳನ್ನು ಚಂದಗಿರಿಕೊಪ್ಪಲು ಗ್ರಾಮದ ನಿವಾಸಿ ಲಿಖಿತಾ (19) ಎಂದು ಗುರುತಿಸಲಾಗಿದೆ. ಗ್ರಾಮದ ಸಮೀಪವಿರುವ ರೈಲ್ವೆ ಲೆವೆಲ್ ಕ್ರಾಸಿಂಗ್‌ ನಲ್ಲಿ ರೈಲು ಬರುತ್ತಿದ್ದ ಹಿನ್ನೆಲೆಯಲ್ಲಿ ಗೇಟ್ ಹಾಕಲಾಗಿತ್ತು. ಈ ವೇಳೆ ರೈಲ್ವೆ ಗೇಟ್ ತೆರೆಯುವವರೆಗೆ ಕಾಯದೆ ಲಿಖಿತಾ ಹಳಿ ದಾಟಲು ಪ್ರಯತ್ನಿಸಿದ್ದು ಈ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ.

ಲಿಖಿತ ಸಾವು
ಬೆಂಗಳೂರು: ಕೆಮಿಕಲ್ ತುಂಬಿದ ಬಕೆಟ್ ಗೆ ಬಿದ್ದು ಮಗು ಸಾವು!

ರೈಲು ಡಿಕ್ಕಿಯಾಗಿ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು ಆಕೆಯ ದೇಹ ಛಿದ್ರ ಛಿದ್ರವಾಗಿದೆ. ಮಗಳನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X