ರಾಜ್ಯ

'ಕೇರಳಿಗರ ಅತಿಕ್ರಮಣ ಬಗ್ಗೆ ಎಚ್ಚರಿಕೆ ಕೊಟ್ಟರೆ ಕೊಡಗು-ಕರ್ನಾಟಕದಲ್ಲೇ ಹುಟ್ಟಿ ಬೆಳೆದವರೇಕೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದೀರಿ?' : ಪ್ರತಾಪ್ ಸಿಂಹ

'ಕೇರಳಿಗರ ಅತಿಕ್ರಮಣ ಬಗ್ಗೆ ಎಚ್ಚರಿಕೆ ಕೊಟ್ಟರೆ ಕೊಡಗು-ಕರ್ನಾಟಕದಲ್ಲೇ ಹುಟ್ಟಿ ಬೆಳೆದವರೇಕೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದೀರಿ?' : ಪ್ರತಾಪ್ ಸಿಂಹ
ಪ್ರತಾಪ್ ಸಿಂಹ
Published On :

ಮೈಸೂರು: ಕೊಡಗು-ಮೈಸೂರು ಭಾಗದ ಜನಪ್ರತಿನಿಧಿಯಾಗಿ 10 ವರ್ಷ ಸೇವೆ ಸಲ್ಲಿಸಿದ್ದೇನೆ. ಕೊಡಗಿನ ಗೋಣಿಕೊಪ್ಪಕ್ಕೆ ಹಾಕಿ ಪಂದ್ಯಾವಳಿಯ ಅಂತಿಮ ಪಂದ್ಯಕ್ಕೆ ಹೋಗಿದ್ದ ಸಂದರ್ಭದಲ್ಲಿ ನಾನು ಮಾತನಾಡುವ ವೇಳೆ ಕೊಡಗು ಎಂದರೆ ಕೊಡಗಿನ ಜನರ ಸಂಸ್ಕೃತಿ ಮಾತ್ರವಲ್ಲ, ಅಲ್ಲಿನ ಕಾಫಿ ತೋಟ, ಭತ್ತದ ಗದ್ದೆಯನ್ನು ರಕ್ಷಿಸುವುದು ಕೂಡ ಆಗಿದೆ, ಹುತ್ತರಿ ಹಬ್ಬ ಮಾಡಲು ಗದ್ದೆಗಳಿರಬೇಕು, ಇದು ನಮ್ಮ ಸಂಸ್ಕೃತಿಯ ಭಾಗವಾಗಿದೆ, ಆದರೆ ಇತ್ತೀಚೆಗೆ ಕೊಡವರು ಕೆಲಸ ಕಾರ್ಯ ಎಂದು ಬೇರೆ ಬೇರೆ ಕಡೆ ಹೋಗಿ ಊರಲ್ಲಿರುವ ತೋಟ ಮಾರಿಕೊಳ್ಳುತ್ತಿದ್ದೀರಿ ಎಂದು ಹೇಳಿದ್ದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಲ್ಲಿ ಕೇರಳಿಗರ ಹಾವಳಿ ಹೆಚ್ಚಾಗಿದೆ, ತೋಟಗಳನ್ನು ಲೀಸ್ ಗೆ ಕೊಡುತ್ತಿದ್ದೀರಿ, ಕೊಡಗಿನ ಸಂಸ್ಕೃತಿ, ಆಚಾರ ವಿಚಾರ ಉಳಿಸಿಕೊಳ್ಳಬೇಕೆಂದರೆ ನಮ್ಮ ತೋಟಗಳನ್ನು ಉಳಿಸಿಕೊಳ್ಳಿ ಎಂದು ಹೇಳಿದ್ದೆ, ಮಾರಾಟ ಮಾಡಬೇಡಿ, ಲೀಸ್ ಗೆ ಕೊಡಬೇಡಿ ಎಂದು ಹೇಳಿದ್ದೆ, ನಾನು ಹೇಳಿದ್ದು ಕೇರಳಿಗರ ಬಗ್ಗೆ ಎಂದು ವಿವಾದ ಎದ್ದಿದ್ದೇಕೆ, ನಾನು ಮಲಯಾಳಿಗಳನ್ನು ಒಟ್ಟಾರೆಯಾಗಿ ಮಾತನಾಡಿಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೊಡಗಿನಲ್ಲಿರುವ ಮಲಯಾಳಿ ಹಿಂದೂಗಳು ನನ್ನ ಮೇಲೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ, ನೀವು ನಮ್ಮ ಸಂಸ್ಕೃತಿಯ ಭಾಗವಲ್ಲವೇ, ನಮ್ಮ ಸಂಸ್ಕೃತಿಗೆ ಮಾರಕವಾಗಿರುವ ಕೇರಳಿಗರು ಕೊಡಗಿಗೆ ಬರುತ್ತಾರೆ ಎಂದು ಹೇಳಿದ್ದೆ ಅಷ್ಟೆ, ಇದಕ್ಕೆ ಕೊಡಗಿನವರನ್ನು ನಾನು ಹೇಳಿದ್ದೆ ಎಂದು ಏಕೆ ತಿಳಿದುಕೊಂಡಿದ್ದೀರಿ ಎಂದು ಕೇಳಿದರು,

ಕೊಡಗಿನ ಸೋಮವಾರಪೇಟೆಯಲ್ಲಿ ಪಾಕಿಸ್ತಾನ ಬಾವುಟ ಹಾರಿಸಿದವರು ಯಾರು, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಟಿಪ್ಪು ಜಯಂತಿ ಆಚರಿಸಲು ಮುಂದಾದಾಗ ನಡೆದ ಗಲಭೆಯಲ್ಲಿ ಲಾರಿಯಲ್ಲಿ ಕಲ್ಲು ತೆಗೆದುಕೊಂಡು ಬಂದವರು, ಪುಟ್ಟಪ್ಪನವರನ್ನು ಕೊಂದವರು ಯಾರು ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.