ಕಾಲೇಜು ಆವರಣದಲ್ಲೇ BCA ವಿದ್ಯಾರ್ಥಿಗೆ ಚಾಕು ಇರಿತ: 6 ಮಂದಿ ವಿರುದ್ಧ ಪ್ರಕರಣ ದಾಖಲು

ನಾನು ಕಬಡ್ಡಿ ಆಡಲು ಟರ್ಫ್‌ಗೆ ತೆರಳಿದ್ದರು. ಆಟ ಮುಗಿಸಿ ಹಿಂದಿರುಗುವ ವೇಳೆ ಟರ್ಫ್ ಸಮೀಪದ ರಸ್ತೆಯಲ್ಲಿ ನನ್ನ ಸ್ನೇಹಿತ ರಯೀಝ್ ಹಾಗೂ ರಿಯಾನ್ ನಡುವೆ ವಾಗ್ವಾದ ನಡೆಯುತ್ತಿರುವುದನ್ನು ಗಮನಿಸಿದೆ.
Representational image only
ಹಲ್ಲೆ (ಸಾಂಕೇತಿಕ ಚಿತ್ರ)online desk
Updated on: 

ಮಂಗಳೂರು: ನಗರದ ಬಲ್ಲಾಳ್‌ಬಾಗ್‌ನಲ್ಲಿರುವ ಖಾಸಗಿ ಕಾಲೇಜು ಕ್ಯಾಂಪಸ್ ಬಳಿ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿಯೊಬ್ಬನಿಗೆ ಚಾಕು ಇರಿದ ಘಟನೆ ಶನಿವಾರ ನಡೆದಿದ್ದು, ಈ ಸಂಬಂಧ ಪೊಲೀಸರು ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ನಿವಾಸಿ, 20 ವರ್ಷದ ಮೊಹಮ್ಮದ್ ಉನೈಸ್ ಚಾಕು ಇರಿತಕ್ಕೊಳಗಾದ ವಿದ್ಯಾರ್ಥಿ.

ಅದೇ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ, ಕಾಟಿಪಳ್ಳ ನಿವಾಸಿ ರಿಯಾನ್ ಎಂಬಾತ ತನ್ನ ಐದು ಮಂದಿ ಸಹಚರರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಉನೈಸ್ ಸದ್ಯ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾನು ಕಬಡ್ಡಿ ಆಡಲು ಟರ್ಫ್‌ಗೆ ತೆರಳಿದ್ದರು. ಆಟ ಮುಗಿಸಿ ಹಿಂದಿರುಗುವ ವೇಳೆ ಟರ್ಫ್ ಸಮೀಪದ ರಸ್ತೆಯಲ್ಲಿ ನನ್ನ ಸ್ನೇಹಿತ ರಯೀಝ್ ಹಾಗೂ ರಿಯಾನ್ ನಡುವೆ ವಾಗ್ವಾದ ನಡೆಯುತ್ತಿರುವುದನ್ನು ಗಮನಿಸಿದೆ. ವಾಗ್ವಾದವನ್ನು ತಡೆಯಲು ನಾನು ಹಾಗೂ ಇತರ ವಿದ್ಯಾರ್ಥಿಗಳು ಮಧ್ಯಪ್ರವೇಶಿಸಿದಾಗ ರಿಯಾನ್ ನನ್ನ ಮೇಲೆ ಹಲ್ಲೆ ನಡೆಸಿದ.

Representational image only
ಶಿವಮೊಗ್ಗ: ಕೇವಲ 500 ರೂ ಗಾಗಿ ಗಾಂಜಾ ಮತ್ತಲ್ಲಿನಲ್ಲಿದ್ದ ಯುವಕರಿಂದ ಕಾರ್ಮಿಕನ ಬರ್ಬರ ಕೊಲೆ

ಸ್ವಲ್ಪ ಸಮಯದ ಬಳಿಕ ಎಲ್ಲರೂ ಅಲ್ಲಿಂದ ತೆರಳಿದ್ದರು. ಆದರೆ ಕೆಲ ಗಂಟೆಗಳ ನಂತರ ಕಾಲೇಜಿನ ಕ್ಯಾಂಟೀನ್ ಸಮೀಪ ನಿಂತಿದ್ದಾಗ, ರಿಯಾನ್ ಸೇರಿದಂತೆ ಆರು ಮಂದಿ ದ್ವಿಚಕ್ರ ವಾಹನಗಳಲ್ಲಿ ಅಲ್ಲಿಗೆ ಬಂದು, ಚಾಕುವಿನಿಂದ ನನಗೆ ಇರಿದರು ಎಂದು ಉನೈಸ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಹಲ್ಲೆಯಿಂದ ಉನೈಸ್ ಅವರ ತಲೆ, ಬೆನ್ನು, ಕಿವಿ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿವೆ. ಅವರನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಆರೋಪಿಗಳ ವಿರುದ್ಧ 2023ರ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 09, 118(1), 115(2), 189(2), 189(4) ಹಾಗೂ 191(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com