ದಸರಾ ಸಂಭ್ರಮದ ನಡುವೆ ಅಭಿಮನ್ಯುವಿನ ಮಾವುತ ವಸಂತನಿಗೆ ಆಘಾತ: ಪತ್ನಿ ಸಾವು

ಮೈಸೂರು ದಸರಾ ಸಂಭ್ರಮದ ನಡುವೆ ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಆನೆ ಮಾವುತ ವಸಂತನಿಗೆ ಆಘಾತ ಎದುರಾಗಿದೆ. ಈ ಬಾರಿಯ ಮೈಸೂರು ದಸರೆಯಲ್ಲಿ ನಿಶಾನೆ ಆನೆಯಾಗಿ ಅಭಿಮನ್ಯ ಕರ್ತವ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ವಸಂತನ ಕುಟುಂಬ ಮೈಸೂರಿಗೆ ಬಂದಿತ್ತು.
vasantha wife ambhika dies
ಮಾವುತ ವಸಂತ ಪತ್ನಿ ಅಂಬಿಕಾ ಸಾವು
Updated on: 

ಮೈಸೂರು: ಮೈಸೂರು ದಸರಾ ಸಂಭ್ರಮದ ನಡುವೆ ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಆನೆ ಮಾವುತ ವಸಂತನಿಗೆ ಆಘಾತ ಎದುರಾಗಿದೆ. ಈ ಬಾರಿಯ ಮೈಸೂರು ದಸರೆಯಲ್ಲಿ ನಿಶಾನೆ ಆನೆಯಾಗಿ ಅಭಿಮನ್ಯ ಕರ್ತವ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ವಸಂತನ ಕುಟುಂಬ ಮೈಸೂರಿಗೆ ಬಂದಿತ್ತು.

ಮೈಸೂರಿಗೆ ಬಂದ ನಂತರ ವಸಂತನ ಪತ್ನಿ 35 ವರ್ಷದ ಅಂಬಿಕಾ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಮೈಸೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕಳೆದ ಎರಡು ದಿನಗಳಿಂದ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

vasantha wife ambhika dies
Mysuru Dasara: ಅಂಬಾರಿ ಹೋರುವ ಆನೆ ಹೆಸರು ಘೋಷಣೆ; 18 ವರ್ಷಗಳಿಂದ ದಸರಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಆನೆಗೆ ಚಾನ್ಸ್!

ದಸರಾ ಹಿನ್ನೆಲೆಯಲ್ಲಿ ಸಾವು ಸಂಭವಿಸಿದ ಬೆನ್ನಲ್ಲೇ ಅಂಬಿಕಾ ಅವರ ಪಾರ್ಥಿವ ಶರೀರವನ್ನು ಮತ್ತಿಗೋಡು ಆನೆ ಕ್ಯಾಂಪ್‌ಗೆ ರವಾನಿಸಲಾಗಿದೆ. ಇನ್ನು ದಸರಾ ಗಜಪಡೆಯ ಇತರ ಮಾವುತರು ಹಾಗೂ ಕಾವಾಡಿಗರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮೈಸೂರಿನಿಂದ ತೆರಳಿದ್ದಾರೆ.

1977ರಲ್ಲಿ ಕೊಡಗಿನ ಕಾಡಿನಲ್ಲಿ ಅಭಿಮನ್ಯು ಸೆರೆ ಸಿಕ್ಕಾಗಿನಿಂದಲೂ ವಸಂತ ಅವರ ತಂದೆ ಸಣ್ಣಪ್ಪ ಅವರೇ ಅಭಿಮನ್ಯುವಿನ ಮುಖ್ಯ ಮಾವುತರಾಗಿದ್ದರು. ತಂದೆಯ ನಂತರ ವಸಂತ ಅಭಿಮನ್ಯುವಿಗೆ ಮಾವುತರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com