

ಬೆಂಗಳೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಜೆಡಿಎಸ್, ಟ್ವಿಟರ್‌ನಲ್ಲಿ ದಿನಬೆಳಗಾದರೆ ಸಂವಿಧಾನ, ಸಾಮಾಜಿಕ ನ್ಯಾಯ ಎಂದು ಉಪದೇಶ ನೀಡುವ ನೀವು, ಗುರುಮಠಕಲ್ ಸಾಮಾನ್ಯ ಕ್ಷೇತ್ರವಾದ ತಕ್ಷಣ ಅಲ್ಲಿ ಸ್ಪರ್ಧಿಸುವ ಧೈರ್ಯ ಮಾಡದೆ ಚಿತ್ತಾಪುರಕ್ಕೆ ಬಂದು, ಮತ್ತೊಬ್ಬ ಸಾಮಾನ್ಯ ದಲಿತನ ರಾಜಕೀಯ ಅವಕಾಶವನ್ನೇ ನುಂಗಿದ ನಿಮ್ಮದು ಯಾವ ಬಗೆಯ ಸಾಮಾಜಿಕ ನ್ಯಾಯ? ಎಂದು ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಿಯಾಂಕ್ ಖರ್ಗೆ ಅವರೇ, ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ನೀಡಿದ ಮೀಸಲಾತಿ ವ್ಯವಸ್ಥೆ ಇರುವುದು ಕೇವಲ ನಿಮ್ಮ ‘ಖರ್ಗೆ ಪ್ರೈವೇಟ್ ಲಿಮಿಟೆಡ್’ ಉದ್ಧಾರಕ್ಕಾ? ದಲಿತರ ಉದ್ಧಾರ ಎಂದರೆ ಕೇವಲ ನಿಮ್ಮ ಪರಿವಾರದ ಉದ್ಧಾರವೇ? ಎಂದಿದೆ.
RDPR ಇಲಾಖೆಯ AEE ನೇಮಕಾತಿ ಕೆಪಿಎಸ್‌ಸಿ ಹಗರಣದಲ್ಲಿ ಬಡ ದಲಿತ ಹಾಗೂ ಹಿಂದುಳಿದ ವರ್ಗದ ಪ್ರತಿಭಾವಂತ ಯುವಕರ ಬೆನ್ನಿಗೆ ಚೂರಿ ಹಾಕಿದ್ದೀರಿ. ಹಗಲು-ರಾತ್ರಿ ಓದಿದವರ ಭವಿಷ್ಯವನ್ನು OMR ಶೀಟ್ ತಿದ್ದಿ ಮಾರಿಕೊಳ್ಳುವುದು ನಿಮ್ಮ ಆಡಳಿತ ವೈಖರಿಯೇ?. ಕಳಂಕಿತರಿಗೆ ಷರತ್ತಿನ ನೇಮಕಾತಿ ಕೊಟ್ಟು ಈಗ 'ನನಗೆ ಗೊತ್ತಿಲ್ಲ, ನಾನೇನು ಮಾಡಿಲ್ಲ' ಎಂದು ಸತ್ಯಹರಿಶ್ಚಂದ್ರನಂತೆ ನಟಿಸುತ್ತಿದ್ದೀರಲ್ಲ, ನಿಮ್ಮ ಆತ್ಮಸಾಕ್ಷಿಯನ್ನೊಮ್ಮೆ ತಟ್ಟಿ ನೋಡಿಕೊಳ್ಳಿ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದೆ.
ಅಕ್ರಮ ನೇಮಕಾತಿ ಬಗ್ಗೆ ಕೇಳಿದ 10 ಪ್ರಶ್ನೆಗಳಿಗೆ ಉತ್ತರಿಸಲು ಧೈರ್ಯವಿಲ್ಲದೆ ಪಲಾಯನ ಮಾಡಿದ್ದೀರಿ. 50 ವರ್ಷಗಳಿಂದಲೂ ಶೋಷಿತರಿಗೆ ರಾಜಕೀಯವಾಗಿ ಸಿಗಬೇಕಾದ ಪ್ರಾತಿನಿಧ್ಯ ಕಸಿದಿರುವ ನೀವು, ಅಧಿಕಾರದ ಸ್ವಾರ್ಥಕ್ಕಾಗಿ ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ, ನಿಮ್ಮ ಬೇಳೆ ಬೇಯಿಸಿಕೊಳ್ಳುವ ಕುತಂತ್ರದ ನಾಟಕವನ್ನು ಬಿಡಿ ಎಂದು ತಿಳಿಸಿತು.
ಕುಟುಂಬಕ್ಕೊಂದು ಮೀಸಲು ಸೀಟು, ಭ್ರಷ್ಟಾಚಾರಕ್ಕೆ ಕ್ಲೀನ್ ಚಿಟ್—ಇದೇನಾ ನಿಮ್ಮ ಬೂಟಾಟಿಕೆಯ ಸಮಾಜವಾದ?. ನಿಮ್ಮ ಪ್ರಹಸನಗಳನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ ಎಂದಿದೆ.